ದೆಹಲಿ: ಅಫ್ಘಾನಿಸ್ತಾನದಿಂದ ಭಾರತಕ್ಕೆ 107 ಭಾರತೀಯರು ವಾಪಸಾಗಿದ್ದಾರೆ. ಭಾರತದ ಹಿಂಡನ್ ಏರ್‌ಬೇಸ್‌ಗೆ C-17 ವಾಯುಸೇನೆ ವಿಮಾನ ಬಂದಿಳಿದಿದದೆ. ವಾಯುಸೇನೆಯ ವಿಮಾನದಲ್ಲಿ ಒಟ್ಟು 168 ಜನ ವಾಪಸ್ ಆಗಿದ್ದಾರೆ. ಆಫ್ಘನ್‌ನ ಹಿಂದೂಗಳು, ಸಿಖ್ಖರು ಸೇರಿ 168 ಜನ ಬಂದಿದ್ದಾರೆ. ಅದರಲ್ಲಿ 107 ಭಾರತೀಯರು ಇದ್ದಾರೆ. ಆಫ್ಘನ್‌ನಿಂದ ಇಂದು 500ಕ್ಕೂ ಹೆಚ್ಚು ಜನರ ಸ್ಥಳಾಂತರ ಮಾಡಲಾಗುವುದು. ಅಫ್ಘಾನಿಸ್ತಾನದ ವಿವಿಧ ಸ್ಥಳಗಳಿಂದ ಭಾರತಕ್ಕೆ ಏರ್‌ಲಿಫ್ಟ್ ಮಾಡಲಾಗುವುದು ಎಂಬ ಬಗ್ಗೆಯೂ ತಿಳಿದುಬಂದಿದೆ. ಅಫ್ಘಾನಿಸ್ತಾನದ ವಿವಿಧ ಕಡೆಗಳಿಂದ ಸುಮಾರು 500ಕ್ಕೂ ಹೆಚ್ಚು ಜನರನ್ನು ಸ್ಥಳಾಂತರ ಮಾಡಲಾಗುವ ಬಗ್ಗೆ ಮಾಹಿತಿ ಲಭಿಸಿದೆ.
ಆಫ್ಘನ್‌ನಿಂದ ಭಾರತಕ್ಕೆ ಬಂದವರಿಗೆ ಆರ್ಟಿಪಿಸಿಆರ್ ಟೆಸ್ಟ್ ನಡೆಸಲಾಗಿದೆ. ಗಾಜಿಯಾಬಾದ್‌ನ ಹಿಂಡನ್ ಏರ್‌ಬೇಸ್‌ನಲ್ಲಿ ಕೊವಿಡ್ ಟೆಸ್ಟ್ ಮಾಡಲಾಗಿದೆ. ಆಫ್ಘನ್‌ನಿಂದ C-17 IAF ವಿಮಾನದಲ್ಲಿ 168 ಜನ ವಾಪಸ್ ಬಂದಿದ್ದಾರೆ. 107 ಭಾರತೀಯರು ಸೇರಿದಂತೆ ಒಟ್ಟು 168 ಜನರು ವಾಪಸ್ ಆಗಿದ್ದಾರೆ.
ಆಫ್ಘನ್‌ನ ಕಾಬೂಲ್‌ನಲ್ಲಿ ಸಿಲುಕಿದ್ದ 87 ಭಾರತೀಯರ ರಕ್ಷಣೆ ಮಾಡಲಾಗಿರುವ ಬಗ್ಗೆಯೂ ತಿಳಿದುಬಂದಿದೆ. 87 ಭಾರತೀಯರನ್ನು ರಕ್ಷಿಸಿ ತಜಕಿಸ್ತಾನದಿಂದ ಏರ್‌ಲಿಫ್ಟ್ ಮಾಡಲಾಗಿದೆ. ತಜಕಿಸ್ತಾನದಿಂದ ದೆಹಲಿಗೆ 87 ಭಾರತೀಯರ ಏರ್‌ಲಿಫ್ಟ್ ಮಾಡಲಾಗುತ್ತದೆ. ಭಾರತೀಯರ ಜತೆ ಇಬ್ಬರು ನೇಪಾಳಿಗರು ಕೂಡ ಸ್ಥಳಾಂತರ ಎಂದು ತಿಳಿದುಬಂದಿದೆ. ಅಫ್ಘಾನಿಸ್ತಾನದಲ್ಲಿ ನೆಲೆಸಿರುವ ಭಾರತೀಯರ ರಕ್ಷಣೆ ಮಾಡುವುದಾಗಿ ಭಾರತೀಯ ವಿದೇಶಾಂಗ ವ್ಯವಹಾರಗಳ ಇಲಾಖೆ ಭರವಸೆ ನೀಡಿದೆ.
ಭಾರತೀಯರ ರಕ್ಷಣೆಗೆ ವಾಯುಪಡೆಯ C-17 ಗ್ಲೋಬ್ ಮಾಸ್ಟರ್, C-130J ವಿಮಾನ ಸನ್ನದ್ಧವಾಗಿತ್ತು. ಭಾರತದ 2 ವಿಮಾನಗಳ ಹಾರಾಟಕ್ಕೆ ಅಮೆರಿಕ ಒಪ್ಪಿಗೆ ನೀಡಿತ್ತು. ಅಮೆರಿಕದ ನಿಯಂತ್ರಣದಲ್ಲಿ ಕಾಬೂಲ್ ಏರ್‌ಪೋರ್ಟ್ ಇದೆ. 107 ಭಾರತೀಯರು ಸೇರಿದಂತೆ 168 ಜನರ ಏರ್‌ಲಿಫ್ಟ್ ಮಾಡಲಾಗಿರುವ ಬಗ್ಗೆ ಮಾಹಿತಿ ದೊರಕಿತ್ತು. ಇದೀಗ ಅವರು ಭಾರತಕ್ಕೆ ಬಂದಿಳಿದಿದ್ದಾರೆ.
ಕಿಡ್ನ್ಯಾಪ್ ಆಗಿದ್ದಾರೆ ಎನ್ನಲಾದ 150 ಮಂದಿ ರಕ್ಷಣೆ
ಅಫ್ಘಾನಿಸ್ತಾನದ ಕಾಬೂಲ್ ಏರ್ಪೋರ್ಟ್ನಿಂದ ಕಿಡ್ನ್ಯಾಪ್ ಆಗಿದ್ದಾರೆ ಎನ್ನಲಾಗಿದ್ದ 150 ಭಾರತೀಯರು ಸುರಕ್ಷಿತವಾಗಿರುವ ಕುರಿತು ಶನಿವಾರ (ಆಗಸ್ಟ್ 21) ಮಾಹಿತಿ ಲಭ್ಯವಾಗಿತ್ತು. ಭಾರತೀಯರ ಪಾಸ್ಪೋರ್ಟ್ ಪರಿಶೀಲಿಸಿದ ತಾಲಿಬಾನಿಗಳು ಕಾಬೂಲ್ ಏರ್‌ಪೋರ್ಟ್ ಬಳಿ ವಾಪಸ್ ಬಿಡುವ ಭರವಸೆ ನೀಡಿದ್ದರು. ಬಳಿಕ, ಅವರೆಲ್ಲರೂ ಸುರಕ್ಷಿತವಾಗಿದ್ದು ಕಾಬೂಲ್ ವಿಮಾನ ನಿಲ್ದಾಣದ ಬಳಿ ಇರುವ ಗ್ಯಾರೇಜ್ನಲ್ಲಿ ಇದ್ದಾರೆ ಎಂದು ತಿಳಿದುಬಂದಿತ್ತು.
150 ಭಾರತೀಯರನ್ನು ಕಿಡ್ನ್ಯಾಪ್ ಮಾಡಿರುವ ಬಗ್ಗೆ ಕಾಬೂಲ್ನ ಭಾರತೀಯ ದೂತಾವಾಸದ ಸಿಬ್ಬಂದಿ ಕೆಲ ಗಂಟೆಗಳ ಹಿಂದಷ್ಟೇ ಮಾಹಿತಿ ನೀಡಿದ್ದರು. ರಾಯಭಾರ ಕಚೇರಿಯ ಸ್ಥಳೀಯ ಸಿಬ್ಬಂದಿಯಿಂದ ಮಾಹಿತಿ ದೊರೆತಿದ್ದು, ಈ ಬಗ್ಗೆ ಅಫ್ಘಾನಿಸ್ತಾನದ ಮುಸ್ಲಿಂ ಶಿರಜಾದ್ನಿಂದ ಮಾಡಿರುವ ಟ್ವೀಟ್ ಲಭ್ಯವಾಗಿತ್ತು. ಆದರೆ, ಭಾರತೀಯರ ಕಿಡ್ನ್ಯಾಪ್ ಆಗಿರುವ ಬಗ್ಗೆ ಭಾರತ ಸರ್ಕಾರ ತಕ್ಷಣ ಯಾವುದೇ ಖಚಿತತೆ ನೀಡಿರಲಿಲ್ಲ. ಜತೆಗೆ, ಭಾರತದ ವಿದೇಶಾಂಗ ಇಲಾಖೆ ಕೂಡಾ ಅಧಿಕೃತ ಮಾಹಿತಿ ನೀಡಿರಲಿಲ್ಲ. ಅಫ್ಘಾನಿಸ್ತಾನದ ಸ್ಥಳೀಯ ಮಾಧ್ಯಮಗಳಲ್ಲಿ ಈ ಬಗ್ಗೆ ಬಿತ್ತರವಾದ ಮಾಹಿತಿ ಆಧರಿಸಿ ಘಟನೆಯ ಬಗ್ಗೆ ತಿಳಿದುಕೊಳ್ಳಲಾಗಿತ್ತು.
ಇದನ್ನೂ ಓದಿ: ಅಮೆರಿಕ ಘೋಷಿತ ಜಾಗತಿಕ ಉಗ್ರಗಾಮಿ ಖಲೀಲ್ ಹಕ್ಕಾನಿ ಕಾಬೂಲ್‌ನಲ್ಲಿ ರಾಜಾರೋಷವಾಗಿ ಓಡಾಟ
Published On - 10:30 am, Sun, 22 August 21