Shocking News: ಪಿಎಂ ಆವಾಸ್ ಯೋಜನೆಯ ಹಣದೊಂದಿಗೆ 11 ವಿವಾಹಿತ ಮಹಿಳೆಯರು ಪ್ರೇಮಿಗಳೊಂದಿಗೆ ಪರಾರಿ!

ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮೊದಲ ಕಂತಿನ 40,000 ರೂ.ಗಳನ್ನು ಪಡೆದ ನಂತರ ತನ್ನ ಪತ್ನಿ ಕಾಣೆಯಾಗಿದ್ದಾರೆ ಎಂದು ವ್ಯಕ್ತಿಯೊಬ್ಬರು ದೂರು ನೀಡಿದ ನಂತರ ಈ ವಿಷಯ ಬೆಳಕಿಗೆ ಬಂದಿದೆ. ಕೇಂದ್ರ ಸರ್ಕಾರದ ಯೋಜನೆಯ ಹಣ ಪಡೆದು ಇದೇ ರೀತಿ 11 ಮಹಿಳೆಯರು ತಮ್ಮ ಗಂಡನನ್ನು ಬಿಟ್ಟು ಪ್ರೇಮಿಯೊಂದಿಗೆ ಪರಾರಿಯಾಗಿರುವ ಶಾಕಿಂಗ್ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

Shocking News: ಪಿಎಂ ಆವಾಸ್ ಯೋಜನೆಯ ಹಣದೊಂದಿಗೆ 11 ವಿವಾಹಿತ ಮಹಿಳೆಯರು ಪ್ರೇಮಿಗಳೊಂದಿಗೆ ಪರಾರಿ!
ಸಾಂದರ್ಭಿಕ ಚಿತ್ರ

Updated on: Jul 09, 2024 | 8:24 PM

ನವದೆಹಲಿ: ಪ್ರಧಾನಮಂತ್ರಿ ಆವಾಸ್ ಗ್ರಾಮೀಣ ಯೋಜನೆಯ ಮೊದಲ ಕಂತು ಪಡೆದ ನಂತರ ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಜಿಲ್ಲೆಯಲ್ಲಿ 11 ವಿವಾಹಿತ ಮಹಿಳೆಯರು ತಮ್ಮ ಪ್ರೇಮಿಗಳೊಂದಿಗೆ ಪರಾರಿಯಾಗಿರುವ ವಿಚಿತ್ರವಾದ ಘಟನೆ ಬೆಳಕಿಗೆ ಬಂದಿದೆ. ಸರ್ಕಾರದ ಈ ಯೋಜನೆಯು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಶಾಶ್ವತ ಮನೆ ನಿರ್ಮಿಸಲು ಆರ್ಥಿಕ ನೆರವು ನೀಡುತ್ತದೆ.

ಈ ಯೋಜನೆಯ ಮೊದಲ ಕಂತಿನ 40,000 ರೂ.ಗಳನ್ನು ಪಡೆದ ನಂತರ ಸಂಜಯ್ ಎಂಬ ವ್ಯಕ್ತಿ ತನ್ನ ಪತ್ನಿ ಸುನಿಯಾ ಕಾಣೆಯಾಗಿದ್ದಾರೆ ಎಂದು ದೂರು ದಾಖಲಿಸಿದ್ದರು. ಇದಾದ ನಂತರ ಈ ವಿಷಯ ಬೆಳಕಿಗೆ ಬಂದಿದೆ. ಸರ್ಕಾರ ಇತ್ತೀಚೆಗೆ ಬಿಡುಗಡೆ ಮಾಡಿದ 40,000 ರೂ.ಗಳನ್ನು ತೆಗೆದುಕೊಂಡು ಸುನಿಯಾ ಅಪರಿಚಿತ ವ್ಯಕ್ತಿಯೊಂದಿಗೆ ಪಲಾಯನ ಮಾಡಿರುವುದು ಬ್ಲಾಕ್ ಅಭಿವೃದ್ಧಿ ಅಧಿಕಾರಿಯ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಇತ್ತೀಚೆಗೆ ಮಹಾರಾಜಗಂಜ್ ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಅವಾಸ್ ಯೋಜನೆ (PMAY) ಯೋಜನೆಯಡಿ ಸುಮಾರು 2,350 ಫಲಾನುಭವಿಗಳು ಕಂತು ಪಡೆದಿದ್ದಾರೆ. ಇದಾದ ನಂತರ ಇದೇ ರೀತಿಯ 10 ಪ್ರಕರಣಗಳು ಬೆಳಕಿಗೆ ಬಂದಿವೆ. ಅಲ್ಲಿ ಗಂಡಂದಿರು ತಮ್ಮ ಹೆಂಡತಿಯರು ಕಾಣೆಯಾಗಿದ್ದಾರೆ ಎಂದು ದೂರು ನೀಡಿದ್ದಾರೆ.

ಇದನ್ನೂ ಓದಿ: Crime News: ಪ್ರೇಮಿಯ ಮೇಲಿನ ಕೋಪಕ್ಕೆ 7 ವರ್ಷದ ಮಗುವನ್ನು ಗೋಡೆಗೆ ಬಡಿದು ಕೊಲೆ

ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಉಳಿದ 2 ಕಂತುಗಳನ್ನು ತಮ್ಮ ಮಗ ಸಂಜಯ್ ಖಾತೆಗೆ ವರ್ಗಾಯಿಸುವಂತೆ ಸುನಿಯಾ ಅವರ ಮಾವ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. “ಹಣವನ್ನು ನಮ್ಮ ಸೊಸೆಯ ಖಾತೆಗೆ ಕಳುಹಿಸಲಾಗಿದೆ. ಅವಳು ಹುಡುಗನೊಂದಿಗೆ ಓಡಿಹೋಗಿದ್ದಾಳೆಂದು ನಮಗೆ ನಂತರ ತಿಳಿದುಬಂದಿದೆ. ನನ್ನ ಮಗನ ಖಾತೆಗೆ ಹಣವನ್ನು ಕಳುಹಿಸಲು ನಾವು ಸರ್ಕಾರವನ್ನು ಒತ್ತಾಯಿಸುತ್ತೇವೆ” ಎಂದು ಅವರು ಹೇಳಿದ್ದಾರೆ.

ಇತ್ತೀಚೆಗೆ ಮಹಾರಾಜ್‌ಗಂಜ್ ಜಿಲ್ಲೆಯಲ್ಲಿ PMAY ಯೋಜನೆಯಡಿ ಸುಮಾರು 2,350 ಫಲಾನುಭವಿಗಳು ಹಣವನ್ನು ಸ್ವೀಕರಿಸಿದ್ದಾರೆ. ಫಲಾನುಭವಿಗಳು ತುತಿಬರಿ, ಶೀಟ್ಲಾಪುರ, ಚಾಟಿಯಾ, ರಾಮನಗರ, ಬಕುಲ್ ದಿಹಾ, ಖಾಸ್ರಾ, ಕಿಶುನ್‌ಪುರ ಮತ್ತು ಮೆಧೌಲಿ ಗ್ರಾಮಗಳಿಗೆ ಸೇರಿದವರು ಎಂದು ವರದಿಯಾಗಿದೆ.

ಕೇಂದ್ರ ಸರ್ಕಾರದ ಯೋಜನೆಯನ್ನು ದುರ್ಬಳಕೆ ಮಾಡಿಕೊಂಡಿರುವುದನ್ನು ಖಂಡಿಸಿದ ಮಹಾರಾಜಗಂಜ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಅನುನಯ್ ಝಾ, ‘ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮೊದಲ ಕಂತನ್ನು 11 ಮಹಿಳೆಯರು ಮನೆ ಕಟ್ಟಲು ಬಳಸದೆ ದುರ್ಬಳಕೆ ಮಾಡಿಕೊಂಡಿರುವುದು ಗಮನಕ್ಕೆ ಬಂದಿದ್ದು, ಸಂಬಂಧಪಟ್ಟ ಇಲಾಖೆಗೆ ನಿರ್ದೇಶನ ನೀಡಲಾಗಿದೆ. ಫಲಾನುಭವಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ ಹಣ ವಸೂಲಿ ಮಾಡುವಂತೆ ಸೂಚಿಸಿದ್ದಾರೆ ಎಂದು ಹಿಂದುಸ್ತಾನ್ ಟೈಮ್ಸ್​ ವರದಿ ಮಾಡಿದೆ.

ಇದನ್ನೂ ಓದಿ: Viral Video: ಟೋಲ್​ ಗೇಟ್​ ಸಿಬ್ಬಂದಿ ಮೇಲೆ ಕಾರು ಹರಿಸಿ ಪರಾರಿಯಾದ ವ್ಯಕ್ತಿ; ಸಿಸಿಟಿವಿಯಲ್ಲಿ ಸೆರೆ

ಆದರೆ, ಇಂತಹ ಘಟನೆ ಇದೇ ಮೊದಲಲ್ಲ. ಈ ಹಿಂದೆ ಬಾರಾಬಂಕಿ ಜಿಲ್ಲೆಯ ನಾಲ್ವರು ಮಹಿಳೆಯರು ಪ್ರಧಾನಮಂತ್ರಿ ಆವಾಸ್ ಯೋಜನೆಯ ಭಾಗವಾಗಿ 50,000 ರೂಪಾಯಿ ಪಡೆದು ತಮ್ಮ ಪ್ರೇಮಿಗಳೊಂದಿಗೆ ಓಡಿ ಹೋಗಿದ್ದರು.

PMAY ಯೋಜನೆಯಡಿ, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಶಾಶ್ವತ ಮನೆ ನಿರ್ಮಿಸಲು ಸರ್ಕಾರದಿಂದ ಸಹಾಯವನ್ನು ಪಡೆಯುತ್ತವೆ. ಕುಟುಂಬದ ಆದಾಯಕ್ಕೆ ಅನುಗುಣವಾಗಿ ಸರ್ಕಾರ 2.5 ಲಕ್ಷ ರೂ.ವರೆಗೆ ಸಹಾಯಧನವನ್ನೂ ನೀಡುತ್ತದೆ. ಯಾವುದೇ ವ್ಯತ್ಯಾಸಗಳಿದ್ದಲ್ಲಿ ಅಧಿಕಾರಿಗಳು ಫಲಾನುಭವಿಗಳಿಂದ ಹಣವನ್ನು ವಾಪಸ್ ಕೇಳಬಹುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:20 pm, Tue, 9 July 24