ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಗುರವಾರ ಸಾಯಂಕಾಲ ಲಭ್ಯವಾಗಿರುವ ಮಾಹಿತಿ ಪ್ರಕಾರ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೊನಾ ಸೋಂಕಿನಿಂದ 12 ಜನ ಸಾವನ್ನಪ್ಪಿದ್ದಾರೆ ಮತ್ತು ಹೊಸದಾಗಿ 1,238 ಜನರಲ್ಲಿ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಇದುವರೆಗೆ ಕೊರೊನಾದಿಂದ 11,912 ಜನ ಮೃತಪಟ್ಟಿದ್ದಾರೆ ಮತ್ತು ಸೋಂಕಿತರ ಸಂಖ್ಯೆ 8,97,801ಕ್ಕೇರಿದೆ.
ಸೋಂಕಿತರ ಪೈಕಿ 8,66,664 ಜನ ಗುಣಮುಖರಾಗಿದ್ದಾರೆ ಮತ್ತು ಮಿಕ್ಕಿದ 19,206 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಹಾಗೆಯೇ, ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿಗೆ 8 ಜನ ಬಲಿಯಾಗಿದ್ದಾರೆ ಕಳೆದ 24 ಗಂಟೆಗಳಲ್ಲಿ 701 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ನಗರದಲ್ಲಿ ಕೊರೊನಾದಿಂದ ಈವರೆಗೆ 4,218 ಜನ ಸಾವಿಗೀಡಾಗಿದ್ದು ಸೋಂಕು ಪೀಡಿತರ ಸಂಖ್ಯೆ 3,76,592 ತಲುಪಿದೆ.
ಸೋಂಕಿತರ ಪೈಕಿ 3,58,553 ಜನರು ಗುಣಮುಖರಾಗಿದ್ದಾರೆ ಮತ್ತು ಮಿಕ್ಕಿದ 13,820 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆಯೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ದೊರಕಿರುವ ಮಾಹಿತಿ ತಿಳಿಸುತ್ತದೆ.
ಕೊರೊನಾ ಲಸಿಕೆಗೂ ತಪ್ಪಲಿಲ್ಲ ಹ್ಯಾಕರ್ಸ್ ಕಾಟ; ಸೈಬರ್ ಅಟ್ಯಾಕ್ಗೆ ಬೆದರಿದ ಫೈಜರ್, ಬಯೋಎನ್ಟೆಕ್
Published On - 10:31 pm, Thu, 10 December 20