10 ನೇ ತರಗತಿ ಪಠ್ಯದಲ್ಲಿ ಸೋನಿಯಾ ಗಾಂಧಿ ಬಗ್ಗೆ ಉಲ್ಲೇಖಿಸಿ; ಕಾಂಗ್ರೆಸ್​ ಆಗ್ರಹ

ತೆಲಂಗಾಣ ನಿರ್ಮಾಣದಲ್ಲಿ ಕೆಸಿಆರ್​ ಹಾಗೂ ಇತರ ನಾಯಕರ ಪಾತ್ರದ ಬಗ್ಗೆ 10ನೇ ತರಗತಿ ಸಾಮಾಜಿಕ ಅಧ್ಯಯನ ಪಠ್ಯ ಪುಸ್ತಕದಲ್ಲಿ ಉಲ್ಲೇಖ ಮಾಡಲಾಗಿದೆ. ಅದೇ ರೀತಿ ಸೋನಿಯಾ ಹೆಸರು ಇರಬೇಕು ಅನ್ನೋದು ಕಾಂಗ್ರೆಸ್​ ಆಗ್ರಹ.

10 ನೇ ತರಗತಿ ಪಠ್ಯದಲ್ಲಿ ಸೋನಿಯಾ ಗಾಂಧಿ ಬಗ್ಗೆ ಉಲ್ಲೇಖಿಸಿ; ಕಾಂಗ್ರೆಸ್​ ಆಗ್ರಹ
ಸೋನಿಯಾ ಗಾಂಧಿ
Rajesh Duggumane

| Edited By: Ghanashyam D M | ಡಿ.ಎಂ.ಘನಶ್ಯಾಮ

Dec 10, 2020 | 10:21 PM

ಹೈದರಾಬಾದ್​: ತೆಲಂಗಾಣ ರಾಜ್ಯ ಸ್ಥಾಪನೆಯಲ್ಲಿ ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿ ಪಾತ್ರ ಪ್ರಮುಖವಾಗಿದ್ದು, ಆ ಬಗ್ಗೆ 10ನೇ ತರಗತಿ ಪಠ್ಯದಲ್ಲಿ ಉಲ್ಲೇಖಿಸಬೇಕು ಎಂದು ಕೈ ಪಕ್ಷ ಆಗ್ರಹಿಸಿದೆ. ಸೋನಿಯಾ ಅವರ 74 ನೇ ಜನ್ಮದಿನಾಚರಣೆ ಅಂಗವಾಗಿ ತೆಲಂಗಾಣದಲ್ಲಿ ನಡೆದ ಕಾರ್ಯಕ್ರಮದ ವೇಳೆ ಈ ಆಗ್ರಹ ಕೇಳಿ ಬಂದಿದೆ.

ಬುಧವಾರ ಸೋನಿಯಾ ಗಾಂಧೀ ತಮ್ಮ 74ನೇ ಜನ್ಮದಿನವನ್ನು ಆಚರಿಸಿಕೊಂಡರು. ಈ ವೇಳೆ ಕಾಂಗ್ರೆಸ್​ ವಕ್ತಾರ ಸರ್ವನ್ ದಾಸೋಜು, ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಬಳಿ ಈ ಬೇಡಿಕೆ ಇಟ್ಟಿದ್ದಾರೆ. ತೆಲಂಗಾಣ ಸ್ಥಾಪನೆಯಲ್ಲಿ ಸೋನಿಯಾ ಗಾಂಧಿ ಅವರ ಪಾತ್ರ ತುಂಬಾ ದೊಡ್ಡದು. ಹೀಗಾಗಿ ಆ ಬಗ್ಗೆ ಶಾಲಾ ಪಠ್ಯಕ್ರಮದಲ್ಲಿ ಹೇಳಬೇಕು ಎಂದಿದ್ದಾರೆ.

ತೆಲಂಗಾಣ ರಾಜ್ಯ ನಿರ್ಮಾಣದಲ್ಲಿ ಕೆಸಿಆರ್​ ಅವರ ಪಾತ್ರ ದೊಡ್ಡದು ಎನ್ನುವುದರಲ್ಲಿ ಎರಡು ಮಾತಿಲ್ಲ. ಈಗಾಗಲೇ ಪಠ್ಯಕ್ರಮದಲ್ಲಿ ಅವರ ಹೆಸರು ಉಲ್ಲೇಖಿಸಲ್ಪಟ್ಟಿದೆ. ಆದರೆ, ಸೋನಿಯಾ ಗಾಂಧಿ ಅವರ ಹೆಸರೇಕೆ ಇಲ್ಲ ಎಂದು ಸರ್ವನ್ ದಾಸೋಜು ಪ್ರಶ್ನೆ ಮಾಡಿದ್ದಾರೆ.

ತೆಲಂಗಾಣ ನಿರ್ಮಾಣದಲ್ಲಿ ಕೆಸಿಆರ್​ ಹಾಗೂ ಇತರ ನಾಯಕರ ಪಾತ್ರದ ಬಗ್ಗೆ 10ನೇ ತರಗತಿ ಸಾಮಾಜಿಕ ಅಧ್ಯಯನ ಪಠ್ಯ ಪುಸ್ತಕದಲ್ಲಿ ಉಲ್ಲೇಖ ಮಾಡಲಾಗಿದೆ. 2013ರ ಜುಲೈ ತಿಂಗಳಲ್ಲಿ ತೆಲಂಗಾಣ ರಾಜ್ಯ ಸ್ಥಾಪನೆಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಒಪ್ಪಿಗೆ ನೀಡಿತ್ತು. ತೆಲಂಗಾಣ ಪ್ರತ್ಯೇಕ ರಾಜ್ಯ ನಿರ್ಮಾಣ ಮಾಡುವ ಮಸೂದೆಗೆ 2014ರಲ್ಲಿ ಸಂಸತ್ತು ಒಪ್ಪಿಗೆ ನೀಡಿತ್ತು. 2014ರ ಜೂನ್​ ತಿಂಗಳಲ್ಲಿ ಅಧಿಕೃತವಾಗಿ ತೆಲಂಗಾಣ ಸ್ಥಾಪನೆಗೊಂಡಿತ್ತು.

Fact Check | ಸೋನಿಯಾಗಾಂಧಿ ‘ಬಾರ್ ಡ್ಯಾನ್ಸರ್’‌ ಎಂದು ತೋರಿಸಲು ಟ್ವೀಟಿಗರು ಬಳಸಿದ್ದು ಹಾಲಿವುಡ್ ನಟಿಯರ ಫೋಟೊ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada