Pitru Paksha 2023: ಸನಾತನ ಧರ್ಮದಲ್ಲಿ ನಂಬಿಕೆ, ಗಯಾದಲ್ಲಿ ಪಿಂಡದಾನ ಮಾಡಿದ ಜರ್ಮನ್ ಮಹಿಳೆಯರು

|

Updated on: Oct 13, 2023 | 10:53 AM

ಸನಾತನ ಧರ್ಮದಲ್ಲಿ ನಂಬಿಕೆ, ಮಹಿಳೆಯರೂ ಸೇರಿದಂತೆ ಜರ್ಮನಿಯ 12 ಜನರ ತಂಡವು ಗಯಾದಲ್ಲಿ ಪಿಂಡದಾನ ಮಾಡಿ ತಮ್ಮ ಪೂರ್ವಜರನ್ನು ಸ್ಮರಿಸಿದ್ದಾರೆ. ಎಲ್ಲರೂ ಜರ್ಮನಿಯಿಂದ ಗಯಾವನ್ನು ತಲುಪಿದ್ದರು, ಭಾರತೀಯ ಸಂಸ್ಕೃತಿಯಂತೆ ವೇಷಭೂಷಣವನ್ನು ತೊಟ್ಟು ವಿಧಿ ವಿಧಾನಗಳ ಪ್ರಕಾರವೇ ಪಿಂಡದಾನ ಮಾಡಿದ್ದಾರೆ.  ರಷ್ಯಾ, ಉಕ್ರೇನ್ ಮತ್ತು ಜರ್ಮನಿಯಂತಹ ದೇಶಗಳಿಂದ ಡಜನ್‌ಗಟ್ಟಲೆ ಯಾತ್ರಾರ್ಥಿಗಳು ಪಿಂಡದಾನಕ್ಕಾಗಿ ಪ್ರತಿ ವರ್ಷವೂ ಗಯಾಗೆ ಬರುತ್ತಾರೆ.

Pitru Paksha 2023: ಸನಾತನ ಧರ್ಮದಲ್ಲಿ ನಂಬಿಕೆ, ಗಯಾದಲ್ಲಿ ಪಿಂಡದಾನ ಮಾಡಿದ ಜರ್ಮನ್ ಮಹಿಳೆಯರು
ಪಿಂಡದಾನ
Follow us on

ಸನಾತನ ಧರ್ಮದಲ್ಲಿ ನಂಬಿಕೆ, ಮಹಿಳೆಯರೂ ಸೇರಿದಂತೆ ಜರ್ಮನಿಯ 12 ಜನರ ತಂಡವು ಗಯಾದಲ್ಲಿ ಪಿಂಡದಾನ ಮಾಡಿ ತಮ್ಮ ಪೂರ್ವಜರನ್ನು ಸ್ಮರಿಸಿದ್ದಾರೆ. ಎಲ್ಲರೂ ಜರ್ಮನಿಯಿಂದ ಗಯಾವನ್ನು ತಲುಪಿದ್ದರು, ಭಾರತೀಯ ಸಂಸ್ಕೃತಿಯಂತೆ ವೇಷಭೂಷಣವನ್ನು ತೊಟ್ಟು ವಿಧಿ ವಿಧಾನಗಳ ಪ್ರಕಾರವೇ ಪಿಂಡದಾನ ಮಾಡಿದ್ದಾರೆ.  ರಷ್ಯಾ, ಉಕ್ರೇನ್ ಮತ್ತು ಜರ್ಮನಿಯಂತಹ ದೇಶಗಳಿಂದ ಡಜನ್‌ಗಟ್ಟಲೆ ಯಾತ್ರಾರ್ಥಿಗಳು ಪಿಂಡದಾನಕ್ಕಾಗಿ ಪ್ರತಿ ವರ್ಷವೂ ಗಯಾಗೆ ಬರುತ್ತಾರೆ.

ವಾಸ್ತವವಾಗಿ ಪಿಂಡದಾನದ ಬಗ್ಗೆ ವಿದೇಶಿಯರಲ್ಲೂ ನಂಬಿಕೆ ಹೆಚ್ಚಾಗಿದೆ, ಸನಾತನ ಧರ್ಮದ ಮೇಲೂ ಸಾಕಷ್ಟು ನಂಬಿಕೆ ಇಟ್ಟಿದ್ದಾರೆ.
ಮೃತಪಟ್ಟವರ ಆತ್ಮಕ್ಕೆ ಶಾಂತಿ ಸಿಗಲೆಂದು ಪಿಂಡ ದಾನ ಮಾಡುತ್ತಾರೆ ಎಂಬುದು ನಮಗೆ ತಿಳಿದಿರಲಿಲ್ಲ, ಅದರ ಮಾಹಿತಿ ಸಿಗುತ್ತಿದ್ದಂತೆ ನಾವು ಗಯಾಗೆ ಬಂದಿದ್ದೇವೆ ಎಂದು ಹೇಳಿದ್ದಾರೆ.

ಇದೇ ವೇಳೆ ವಿದೇಶಗಳಲ್ಲಿ ಸನಾತನ ಧರ್ಮದ ಪ್ರಚಾರ ಮಾಡುತ್ತಿರುವ ಇಸ್ಕಾನ್​ನ ಧಾರ್ಮಿಕ ಪ್ರಚಾರಕ ಲೋಕನಾಥ್​ ಮಾತನಾಡಿ, ಮಹಿಳೆಯರಲ್ಲಿ ಪಿಂಡ ದಾನದ ಮೇಲಿನ ನಂಬಿಕೆ ಹೆಚ್ಚಿದೆ ಇದೇ ಕಾರಣಕ್ಕೆ ಪ್ರತಿ ವರ್ಷ ಸಾಕಷ್ಟು ಸಂಖ್ಯೆಯಲ್ಲಿ ಮಹಿಳೆಯರು ಗಯಾಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ಹೇಳಿದರು.

ಮತ್ತಷ್ಟು ಓದಿ: Pitru Paksha 2023; ಪಿತೃಪಕ್ಷ ಆರಂಭವಾಗುವುದು ಯಾವಾಗ, ಯಾವ ದಿನಾಂಕದಂದು ಯಾವ ಶ್ರಾದ್ಧ? ಇಲ್ಲಿದೆ ಮಾಹಿತಿ

ಭಾರತೀಯ ಸಾಂಪ್ರದಾಯಿಕ ಸೀರೆಗಳನ್ನು ಧರಿಸಿದ ಎಲ್ಲಾ ಮಹಿಳೆಯರು ವಿಷ್ಣುಪಾದ್ ದೇವಸ್ಥಾನ ಮತ್ತು ದೇವ್ ಘಾಟ್‌ನಲ್ಲಿ ಪಿಂಡ ದಾನ ಆಚರಣೆ ಮತ್ತು ಜಲ ತರ್ಪಣವನ್ನು ಮಾಡಿದರು. ಪಿಂಡದಾನ ಮಾಡಿದ ಜರ್ಮನ್ ಪ್ರಜೆಗಳಲ್ಲಿ ನಟಾಲಿಯಾ, ಸ್ವೆಟ್ಲಾನಾ, ಒಕ್ಸಾನಾ, ಶಾಸಾ, ಐರಿನಾ, ಮಾರ್ಗರಿಟಾ, ಗ್ರಿಚ್ಕೆವಿಚ್, ಅಲಿಸೆಂಟ್ರಾ ಮತ್ತು ಕೆವಿನ್ ಸೇರಿದ್ದಾರೆ.

ಗಯಾದಲ್ಲಿ ಸೆಪ್ಟೆಂಬರ್ 29 ರಿಂದ ಪ್ರಾರಂಭವಾಗಿರುವ ಪಿತೃ ಪಕ್ಷದ ಸಮಯದಲ್ಲಿ ಪಿತೃ ಪೂಜೆ ಮತ್ತು ಪಿಂಡ ದಾನವನ್ನು ಮಾಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ ಈ ದಿನಗಳಲ್ಲಿ ಪಿಂಡ ದಾನ ಮತ್ತು ತರ್ಪಣ ವಿಧಾನವನ್ನು ಮಾಡುವುದರ ಮೂಲಕ ಪೂರ್ವಜರನ್ನು ಸ್ಮರಿಸಲಾಗುತ್ತದೆ.

ಪಿತೃ ಪಕ್ಷದಲ್ಲಿ, ಪೂರ್ವಜರು ಭೂಮಿಯಲ್ಲಿ ತಮ್ಮ ಕುಟುಂಬ ವರ್ಗದವರನ್ನು ನೋಡಲು ಬರುತ್ತಾರೆ ಎಂದು ನಂಬಲಾಗಿದೆ. ಪೂರ್ವಜರನ್ನು ಗೌರವಿಸಿ, ಕುಟುಂಬದವರು ಶ್ರಾದ್ಧ ಮತ್ತು ತರ್ಪಣ ಆಚರಣೆಗಳನ್ನು ಮಾಡುತ್ತಾರೆ. ಪಿತೃ ಪಕ್ಷದಲ್ಲಿ ಶ್ರಾದ್ಧ ಮಾಡುವುದರಿಂದ ಪೂರ್ವಜರ ಋಣ ತೀರುತ್ತದೆ. ಶ್ರಾದ್ಧ ಕರ್ಮ, ಪಿಂಡ ದಾನ ಮತ್ತು ತರ್ಪಣ ಆಚರಣೆಗಳನ್ನು ಮಾಡಲು ಮಗನು ಮಾತ್ರ ಅರ್ಹನೆಂದು ಪರಿಗಣಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ