Pitru Paksha 2023; ಪಿತೃಪಕ್ಷ ಆರಂಭವಾಗುವುದು ಯಾವಾಗ, ಯಾವ ದಿನಾಂಕದಂದು ಯಾವ ಶ್ರಾದ್ಧ? ಇಲ್ಲಿದೆ ಮಾಹಿತಿ
Pitru Paksha Dates and other details; ಪಿತೃಪಕ್ಷ ದಿನವು ಪೂರ್ವಜರಿಗೆ ಶ್ರಾದ್ಧವನ್ನು ಮಾಡಲು ಪ್ರಮುಖ ದಿನವೆಂದು ಪರಿಗಣಿಸಲಾಗಿದೆ. ಪಿತೃ ಪಕ್ಷದ ದಿನದಂದು ಪೂರ್ವಜರು ಭೂಮಿಗೆ ಬರುತ್ತಾರೆ ಎಂದು ನಂಬಲಾಗಿದೆ. ಆದ್ದರಿಂದ ಪಿತೃಪಕ್ಷದ ಸಮಯದಲ್ಲಿ ತರ್ಪಣ ಮತ್ತು ಶ್ರಾದ್ಧವನ್ನು ಮಾಡುವುದರಿಂದ ಪೂರ್ವಜರ ಕೃಪೆಯು ದೊರೆಯುತ್ತದೆ ಎಂಬ ನಂಬಿಕೆ ಇದೆ.
ಪಿತೃ ಪಕ್ಷದಲ್ಲಿ (Pitru Paksha), ಪೂರ್ವಜರ ಆತ್ಮ ಶಾಂತಿಗಾಗಿ ಶ್ರಾದ್ಧ ಆಚರಣೆಗಳನ್ನು ಮಾಡಲಾಗುತ್ತದೆ. ಈ ಬಾರಿ ಪಿತೃ ಪಕ್ಷ ಅಥವಾ ಮಹಾಲಯ (Mahalaya) ಸೆಪ್ಟೆಂಬರ್ 29 ರಿಂದ ಆರಂಭವಾಗಲಿದ್ದು ಅಕ್ಟೋಬರ್ 14 ರವರೆಗೆ ಇರಲಿದೆ. ಪ್ರತಿ ವರ್ಷ ಪಿತೃ ಪಕ್ಷವು ಭಾದ್ರಪದ ಮಾಸದ ಹುಣ್ಣಿಮೆಯ ದಿನದಿಂದ ಪ್ರಾರಂಭವಾಗಿ ಅಮಾಸದ ಹುಣ್ಣಿಮೆಯವರೆಗೂ ಇರುತ್ತದೆ. ಇದನ್ನು ಸರ್ವ ಪಿತೃ ಅಮಾವಾಸ್ಯೆ ಎಂದೂ ಕರೆಯುತ್ತಾರೆ.
ಪಿತೃ ಪಕ್ಷವು ಭಾದ್ರಪದ ಮಾಸದ ಹುಣ್ಣಿಮೆಯ ತಿಥಿಯಿಂದ ಪ್ರಾರಂಭವಾಗುತ್ತದೆ. ಪಿತೃಪಕ್ಷದ ನಿಜವಾದ ಅರ್ಥವೆಂದರೆ ಪಿತೃಗಳಿಗೆ ಪಿಂಡವನ್ನು ಅರ್ಪಿಸುವ ಮೂಲಕ ಪೂರ್ವಜರಿಗೆ ಗೌರವ ಸಲ್ಲಿಸುವ ಸಮಯ ಎಂದಾಗಿದೆ.
ಪಿತೃಪಕ್ಷ ಶ್ರಾದ್ಧ ದಿನಾಂಕ
ಪೂರ್ಣಿಮಾ ಶ್ರಾದ್ಧ – 29 ಸೆಪ್ಟೆಂಬರ್ 2023, ಪ್ರತಿಪದ ಮತ್ತು ದ್ವಿತೀಯ 30 ಸೆಪ್ಟೆಂಬರ್ 2023, ಬೀಜ ಶ್ರಾದ್ಧ 1 – ಅಕ್ಟೋಬರ್ 2023, ತೃತೀಯ ಶ್ರಾದ್ಧ 2 – ಅಕ್ಟೋಬರ್ 2023, ನಾಲ್ಕನೇ ಶ್ರಾದ್ಧ 3 – ಅಕ್ಟೋಬರ್ 2023, ಐದನೇ ಶ್ರಾದ್ಧ – 3 ಅಕ್ಟೋಬರ್ 2023, ಐದನೇ ಶ್ರಾದ್ಧ – 4 ಅಕ್ಟೋಬರ್ 2023 ರಂದು ನಡೆಯಲಿದೆ.
ಆರನೇ ಶ್ರಾದ್ಧ – 6 ಅಕ್ಟೋಬರ್ 2023, ಎಂಟನೆಯ ಶ್ರಾದ್ಧ – 7 ಅಕ್ಟೋಬರ್ 2023, ನಾಮದ ಶ್ರಾದ್ಧ – 8 ಅಕ್ಟೋಬರ್ 2023, ಹತ್ತನೆಯ ಶ್ರಾದ್ಧ – 9 ಅಕ್ಟೋಬರ್ 2023, ಹನ್ನೊಂದನೆಯ ಶ್ರಾದ್ಧ – 10 ಅಕ್ಟೋಬರ್ 2023, ಹನ್ನೆರಡರ ಶ್ರಾದ್ಧ – 11 ಅಕ್ಟೋಬರ್ 2023, ಹದಿಮೂರನೇ ಶ್ರಾದ್ಧ – 12 ಅಕ್ಟೋಬರ್ 2023, ಅಮವಾಸ್ಯೆಯ ಶ್ರಾದ್ಧ – 14 ಅಕ್ಟೋಬರ್ 2023ರಂದು ನಡೆಯಲಿದೆ.
ಪಿತೃಪಕ್ಷದ ಪ್ರಾಮುಖ್ಯತೆ
ಪಿತೃಪಕ್ಷ ದಿನವು ಪೂರ್ವಜರಿಗೆ ಶ್ರಾದ್ಧವನ್ನು ಮಾಡಲು ಪ್ರಮುಖ ದಿನವೆಂದು ಪರಿಗಣಿಸಲಾಗಿದೆ. ಪಿತೃ ಪಕ್ಷದ ದಿನದಂದು ಪೂರ್ವಜರು ಭೂಮಿಗೆ ಬರುತ್ತಾರೆ ಎಂದು ನಂಬಲಾಗಿದೆ. ಆದ್ದರಿಂದ ಪಿತೃಪಕ್ಷದ ಸಮಯದಲ್ಲಿ ತರ್ಪಣ ಮತ್ತು ಶ್ರಾದ್ಧವನ್ನು ಮಾಡುವುದರಿಂದ ಪೂರ್ವಜರ ಕೃಪೆಯು ದೊರೆಯುತ್ತದೆ ಎಂಬ ನಂಬಿಕೆ ಇದೆ. ಅದೇ ಸಮಯದಲ್ಲಿ ಪಿತೃಪಕ್ಷದಲ್ಲಿ ತಿಥಿಗಳಿಗನುಸಾರವಾಗಿ ಪಿತೃಗಳ ಶ್ರಾದ್ಧವನ್ನು ಮಾಡುವುದರಿಂದ ವಿಶೇಷ ಫಲಗಳು ದೊರೆಯುತ್ತವೆ. ಆದ್ದರಿಂದ ಪೂರ್ವಜರ ಶಾಂತಿಗಾಗಿ ಪಿತೃಪಕ್ಷದ ದಿನದಂದು ಶ್ರಾದ್ಧದ ಜೊತೆಗೆ ಬ್ರಾಹ್ಮಣರಿಗೂ ಅನ್ನ ನೀಡಬೇಕು ಎನ್ನಲಾಗಿದೆ.
ಇದನ್ನೂ ಓದಿ: Kakatiya era temple: ಶಿವಲೀಲೆ! ಗಣೇಶನ ಹಬ್ಬದ ಸಂದರ್ಭದಲ್ಲಿ ಮಾತ್ರ ಆ ಶಿವಲಿಂಗದ ಮೇಲೆ ಸೂರ್ಯ ರಶ್ಮಿ ಬೀಳುತ್ತದೆ
ಯಾರು ತರ್ಪಣ ಬಿಡಬಹುದು?
ಬ್ರಹ್ಮವೈವರ್ತ ಪುರಾಣವು ಪೂರ್ವಜರ ಆತ್ಮವನ್ನು ತೃಪ್ತಿಪಡಿಸಲು ಹಿರಿಯ ಮಗ ತನ್ನ ತಂದೆ ಮತ್ತು ಅವನ ವಂಶಸ್ಥರಿಗೆ ಶ್ರಾದ್ಧ, ಪಿಂಡ ಮತ್ತು ತರ್ಪಣವನ್ನು ಬಿಡಬೇಕು ಎಂದು ವಿವರಿಸುತ್ತದೆ. ಪಿತೃಗಳ ಮೋಕ್ಷಕ್ಕಾಗಿ ಪುತ್ರರು ಪಿಂಡ ದಾನ ಮಾಡುವುದು ಅಗತ್ಯವೆಂದು ಪರಿಗಣಿಸಲಾಗಿದೆ. ಆದರೆ ಒಬ್ಬ ವ್ಯಕ್ತಿಗೆ ಮಗನಿಲ್ಲದಿದ್ದರೆ, ಅಂತಹ ಸಂದರ್ಭದಲ್ಲಿ ಆತನ ಮಗಳು, ಹೆಂಡತಿ ಮತ್ತು ಸೊಸೆ ಕೂಡ ಶ್ರಾದ್ಧ ಮತ್ತು ಪಿಂಡದಾನವನ್ನು ಮಾಡಬಹುದು ಎನ್ನಲಾಗಿದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ