12 ಕಂದಮ್ಮಗಳಿಗೆ ಪೋಲಿಯೋ ಲಸಿಕೆ ಬದಲು ಸ್ಯಾನಿಟೈಸರ್ ಹನಿ ಹಾಕಿದ ಆರೋಗ್ಯ ಸಿಬ್ಬಂದಿ; ಮೂವರು ಅಮಾನತು

ನಮ್ಮ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಿದ ಸ್ಥಳದಲ್ಲಿ ಮೂವರು ಸಿಬ್ಬಂದಿ ಇ ದ್ದರು. ಮೊದಲು ಸ್ಯಾನಿಟೈಸರ್​ ಡ್ರಾಪ್​ ನೀಡಿದರು. ಆದರೆ ಅವರಿಗೆ ನಂತರ ಅದು ಗೊತ್ತಾದ ಕೂಡಲೇ, ವಾಪಸ್ ಕರೆದು ಮತ್ತೆ ಪೋಲಿಯೋ ಹನಿ ಹಾಕಿದ್ದಾರೆ ಎಂದು ಪಾಲಕ ಶಾಮಾರಾವ್​ ಗೇಡಂ ತಿಳಿಸಿದ್ದಾರೆ.

12 ಕಂದಮ್ಮಗಳಿಗೆ ಪೋಲಿಯೋ ಲಸಿಕೆ ಬದಲು ಸ್ಯಾನಿಟೈಸರ್ ಹನಿ ಹಾಕಿದ ಆರೋಗ್ಯ ಸಿಬ್ಬಂದಿ; ಮೂವರು ಅಮಾನತು
ಪ್ರಾತಿನಿಧಿಕ ಚಿತ್ರ
Lakshmi Hegde

| Edited By: Rajesh Duggumane

Feb 02, 2021 | 4:18 PM

ಮುಂಬೈ​: ಭಾನುವಾರ ದೇಶಾದ್ಯಂತ ಮಕ್ಕಳಿಗೆ ಪೊಲೀಯೋ ಲಸಿಕೆ ನೀಡಲಾಗಿದೆ. ಈ ವೇಳೆ ಮಹಾರಾಷ್ಟ್ರದಲ್ಲಿ ಮಹಾ ದುರಂತವೊಂದು ನಡೆದುಹೋಗಿದೆ. 12 ಶಿಶುಗಳಿಗೆ ಪೋಲಿಯೋ ಹನಿಯ ಬದಲು ಸ್ಯಾನಿಟೈಸರ್​ ಹನಿಯನ್ನು ಹಾಕಲಾಗಿದ್ದು, ಸದ್ಯ ಅವರನ್ನೆಲ್ಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಪುಟ್ಟ ಮಕ್ಕಳ ಪ್ರಾಣಕ್ಕೇ ಕುತ್ತು ತಂದ ಆರೋಗ್ಯ ಸಿಬ್ಬಂದಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಈ ಎಡವಟ್ಟು ನಡೆದಿದ್ದು, ಯವತ್ಮಲ್​ನ ಘಟಂಜಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ. ಸ್ಯಾನಿಟೈಸರ್​ ಹನಿಯಿಂದಾಗಿ ಆಸ್ಪತ್ರೆಗೆ ಸೇರಿರುವ ಮಕ್ಕಳೆಲ್ಲ 1-5ವರ್ಷದವರೆಗಿನವರು. ಭಾನುವಾರ ಮುಂಜಾನೆಯಿಂದಲೇ ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪೋಲಿಯೋ ಲಸಿಕೆ ಅಭಿಯಾನ ಶುರುವಾಗಿತ್ತು. ಅದರಲ್ಲಿ 12 ಮಕ್ಕಳಿಗೆ ಹ್ಯಾಂಡ್​ಸ್ಯಾನಿಟೈಸರ್​ ಹನಿಯನ್ನು ಬಾಯಿಗೆ ಹಾಕಲಾಗಿದೆ. ಅವರಿಗೆಲ್ಲ ರಾತ್ರಿ ಹೊತ್ತಿಗೆ ವಾಂತಿ ಶುರುವಾಗಿ, ಅಸ್ವಸ್ಥರಾಗಿದ್ದಾರೆ.

ನಮ್ಮ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಿದ ಸ್ಥಳದಲ್ಲಿ ಮೂವರು ಸಿಬ್ಬಂದಿ ಇ ದ್ದರು. ಮೊದಲು ಸ್ಯಾನಿಟೈಸರ್​ ಡ್ರಾಪ್​ ನೀಡಿದರು. ಆದರೆ ಅವರಿಗೆ ನಂತರ ಅದು ಗೊತ್ತಾದ ಕೂಡಲೇ, ವಾಪಸ್ ಕರೆದು ಮತ್ತೆ ಪೋಲಿಯೋ ಹನಿ ಹಾಕಿದ್ದಾರೆ. ನನ್ನ ಮಗ ಮತ್ತು ಮಗಳು ಇಬ್ಬರಿಗೂ ವಾಂತಿ ಶುರುವಾಗಿತ್ತು ಎಂದು ಸ್ಯಾನಿಟೈಸರ್​ ಹನಿ ಹಾಕಲಾದ ಇಬ್ಬರು ಮಕ್ಕಳ ತಂದೆ ಶಾಮಾರಾವ್​ ಗೇಡಂ ತಿಳಿಸಿದ್ದಾರೆ.

ಅಂದು ಹಾಜರಿದ್ದ ಅಂಗನವಾಡಿ ಕಾರ್ಯಕರ್ತೆ, ಆಶಾ ಕಾರ್ಯಕರ್ತೆಯರೇ, ಸಮುದಾಯ ಆರೋಗ್ಯ ಅಧಿಕಾರಿಯೇ ಈ ಅವಘಡಕ್ಕೆ ಹೊಣೆ ಎಂದು ಹೇಳಿರುವ ಯವತ್ಮಲ್​ ಜಿಲ್ಲಾ ಪಂಚಾಯಿತಿ ಸಿಇಒ ಡಾ. ಶ್ರೀಕೃಷ್ಣ ಪಾಂಚಾಲ್​, ಪ್ರಕರಣದ ಬಗ್ಗೆ ತನಿಖೆಗೆ ಆದೇಶ ನೀಡಲಾಗಿದೆ ಎಂದು ಹೇಳಿದ್ದಾರೆ.

Petrol Price ಶ್ರೀರಾಮನ ಭಾರತದಲ್ಲಿ ರೂ. 93, ಸೀತೆಯ ನೇಪಾಳದಲ್ಲಿ 53, ರಾವಣನ ಶ್ರೀಲಂಕಾದಲ್ಲಿ ಎಷ್ಟು ಗೊತ್ತಾ..!

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada