ಸಿಆರ್​ಪಿಎಫ್​ನ 122 ಯೋಧರಿಗೆ ತಗುಲಿದ ಕೊರೊನಾ ಸೋಂಕು!

|

Updated on: May 02, 2020 | 12:15 PM

ದೆಹಲಿ: ಮಹಾಮಾರಿ ಕೊರೊನಾ ವೈರಸ್ ಬಿಟ್ಟೂ ಬಿಡದೆ ಎಲ್ಲರನ್ನೂ ಕಾಡುತ್ತಿದೆ. 31ನೇ ಸಿಆರ್‌ಪಿಎಫ್ ಬೆಟಾಲಿಯನ್‌ನ 480 ಯೋಧರ ಪೈಕಿ 122 ಯೋಧರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದುವರೆಗೂ 368 ಮಂದಿಯ ಸ್ಯಾಂಪಲ್ ಪರೀಕ್ಷೆ ‌ನಡೆಸಲಾಗಿದ್ದು, ಶೇಕಡಾ 33 ರಷ್ಟು ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. 31ನೇ ಬೆಟಾಲಿಯನ್‌ನಲ್ಲಿರುವ‌ ಎಲ್ಲರನ್ನೂ ದೆಹಲಿಯ ಮಾಂಡೋಲಿ ಕ್ವಾರಂಟೈನ್ ಸೆಂಟರ್​ಗೆ ರವಾನೆ ಮಾಡಲಾಗಿದೆ. 368 ಮಂದಿಯ ಪೈಕಿ 112 ಮಂದಿಯ ಕೊರೊನಾ ಸ್ಯಾಂಪಲ್ ಪರೀಕ್ಷೆಯ ವರದಿ ಬರಬೇಕಿದೆ. ಸದ್ಯ ಬೆಟಾಲಿಯನ್‌ನಲ್ಲಿರುವ ಎಲ್ಲರನ್ನೂ […]

ಸಿಆರ್​ಪಿಎಫ್​ನ 122 ಯೋಧರಿಗೆ ತಗುಲಿದ ಕೊರೊನಾ ಸೋಂಕು!
Follow us on

ದೆಹಲಿ: ಮಹಾಮಾರಿ ಕೊರೊನಾ ವೈರಸ್ ಬಿಟ್ಟೂ ಬಿಡದೆ ಎಲ್ಲರನ್ನೂ ಕಾಡುತ್ತಿದೆ. 31ನೇ ಸಿಆರ್‌ಪಿಎಫ್ ಬೆಟಾಲಿಯನ್‌ನ 480 ಯೋಧರ ಪೈಕಿ 122 ಯೋಧರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದುವರೆಗೂ 368 ಮಂದಿಯ ಸ್ಯಾಂಪಲ್ ಪರೀಕ್ಷೆ ‌ನಡೆಸಲಾಗಿದ್ದು, ಶೇಕಡಾ 33 ರಷ್ಟು ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ.

31ನೇ ಬೆಟಾಲಿಯನ್‌ನಲ್ಲಿರುವ‌ ಎಲ್ಲರನ್ನೂ ದೆಹಲಿಯ ಮಾಂಡೋಲಿ ಕ್ವಾರಂಟೈನ್ ಸೆಂಟರ್​ಗೆ ರವಾನೆ ಮಾಡಲಾಗಿದೆ. 368 ಮಂದಿಯ ಪೈಕಿ 112 ಮಂದಿಯ ಕೊರೊನಾ ಸ್ಯಾಂಪಲ್ ಪರೀಕ್ಷೆಯ ವರದಿ ಬರಬೇಕಿದೆ. ಸದ್ಯ ಬೆಟಾಲಿಯನ್‌ನಲ್ಲಿರುವ ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ.