Operation Kaveri: ಆಪರೇಷನ್ ಕಾವೇರಿ ಮೂಲಕ ಸುಡಾನ್​​ನಿಂದ ಸೌದಿ ಅರೇಬಿಯಾದ ಜೆಡ್ಡಾಕ್ಕೆ 135 ಭಾರತೀಯರ ಸ್ಥಳಾಂತರ

|

Updated on: Apr 28, 2023 | 11:28 AM

ಆಪರೇಷನ್ ಕಾವೇರಿ ಮೂಲಕ 135 ಭಾರತೀಯ ನಾಗರಿಕರನ್ನು ಹೊಂದಿರುವ 10ನೇ ಬ್ಯಾಚ್ ಪೋರ್ಟ್ ಸುಡಾನ್‌ನಿಂದ ಐಎಎಫ್ ಸಿ 130 ಜೆ ವಿಮಾನದಲ್ಲಿ ಯಶಸ್ವಿಯಾಗಿ ಕರೆತರಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಶುಕ್ರವಾರ ಬೆಳಿಗ್ಗೆ ತಿಳಿಸಿದೆ. ಇದೀಗ ಈ ವಿಮಾನ ಸೌದಿ ಅರೇಬಿಯಾದ ಜೆಡ್ಡಾ ಕಡೆಗೆ ಹೋಗುತ್ತಿದೆ ಎಂದು ಹೇಳಿದ್ದಾರೆ.

Operation Kaveri: ಆಪರೇಷನ್ ಕಾವೇರಿ ಮೂಲಕ ಸುಡಾನ್​​ನಿಂದ ಸೌದಿ ಅರೇಬಿಯಾದ ಜೆಡ್ಡಾಕ್ಕೆ 135 ಭಾರತೀಯರ ಸ್ಥಳಾಂತರ
ಆಪರೇಷನ್ ಕಾವೇರಿ ಮೂಲಕ ಸುಡಾನ್​​ನಿಂದ ಸೌದಿ ಅರೇಬಿಯಾದ ಜೆಡ್ಡಾಕ್ಕೆ 135 ಭಾರತೀಯರ ಸ್ಥಳಾಂತರ
Follow us on

ಖಾರ್ಟೂಮ್‌: ಸುಡಾನ್ ಆಂತರಿಕ ಯುದ್ಧದಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಮರಳಿ ಭಾರತಕ್ಕೆ ತರಲು ಕೇಂದ್ರ ಸರ್ಕಾರ ಆಪರೇಷನ್ ಕಾವೇರಿ (Operation Kaveri) ಮೂಲಕ ಈಗಾಗಲೇ ಅನೇಕರನ್ನು ಸ್ಥಳಾಂತರ ಮಾಡಿದೆ. ಇದೀಗ ಈ ಆಪರೇಷನ್ ಮೂಲಕ 135 ಭಾರತೀಯ ನಾಗರಿಕರನ್ನು ಹೊಂದಿರುವ 10ನೇ ಬ್ಯಾಚ್ ಪೋರ್ಟ್ ಸುಡಾನ್‌ನಿಂದ ಐಎಎಫ್ ಸಿ 130 ಜೆ ವಿಮಾನದಲ್ಲಿ ಯಶಸ್ವಿಯಾಗಿ ಕರೆತರಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಶುಕ್ರವಾರ ಬೆಳಿಗ್ಗೆ ತಿಳಿಸಿದೆ. ಇದೀಗ ಈ ವಿಮಾನ ಸೌದಿ ಅರೇಬಿಯಾದ ಜೆಡ್ಡಾ ಕಡೆಗೆ ಹೋಗುತ್ತಿದೆ ಎಂದು ಹೇಳಿದ್ದಾರೆ. ಸುಡಾನ್​​ನಲ್ಲಿ ಸೇನೆ ಮತ್ತು ಅರೆಸೇನಾ ಪಡೆಗಳ ನಡುವಿನ ಘರ್ಷಣೆಯ ಪರಿಣಾಮವಾಗಿ ಸುಡಾನ್‌ನಲ್ಲಿ ಸಿಲುಕಿರುವ ಎಲ್ಲಾ ನಾಗರಿಕರನ್ನು ಭಾರತಕ್ಕೆ ಕರೆತರುವ ಉದ್ದೇಶದಿಂದ ಭಾರತವು ಆಪರೇಷನ್ ಕಾವೇರಿ ಎಂಬ ಕಾರ್ಯಚರಣೆಯನ್ನು ಪ್ರಾರಂಭಿಸಿದೆ.

ಆಪರೇಷನ್ ಕಾವೇರಿ ಕಾರ್ಯಚರಣೆ ಈಗಾಗಲೇ ತ್ವರಿತವಾಗಿ ಮುಂದುವರೆದಿದೆ. IAF C-130J ಫ್ಲೈಟ್‌ನಲ್ಲಿ 135 ಪ್ರಯಾಣಿಕರೊಂದಿಗೆ 10ನೇ ಬ್ಯಾಚ್ ಸ್ಥಳಾಂತರಿಸಿವ ಕಾರ್ಯ ಮುಂದುವರಿದಿದೆ. ಪೋರ್ಟ್ ಸುಡಾನ್‌ನಿಂದ ಜೆಡ್ಡಾಕ್ಕೆ ಕಡೆಗೆ ಭಾರತದ ಸೇನಾ ವಿಮಾನ ಹೋಗುತ್ತಿದೆ ಎಂದು MEA ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿದ್ದಾರೆ. INS ತರ್ಕಾಶ್ ಆಪರೇಷನ್ ಕಾವೇರಿ ತುಂಬಾ ಪ್ರಬಲವಾಗಿ ಕೆಲಸ ಮಾಡುತ್ತಿದೆ. 9 ನೇ ಬ್ಯಾಚ್ ಭಾರತೀಯರು 326 ಪ್ರಯಾಣಿಕರೊಂದಿಗೆ ಪೋರ್ಟ್ ಸುಡಾನ್‌ನಿಂದ ಜೆಡ್ಡಾಕ್ಕೆ ಈಗಾಗಲೇ ಹೋಗಿದೆ ಎಂದು ಬಾಗ್ಚಿ ಹಿಂದಿನ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಇದಕ್ಕೂ ಮೊದಲು, ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಅವರು ಎಂಟನೇ ಬ್ಯಾಚ್ ಭಾರತೀಯ ಪ್ರಜೆಗಳನ್ನು ಸುಡಾನ್‌ನಿಂದ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಮತ್ತು ಜೆಡ್ಡಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ ಎಂದು ಹೇಳಿದ್ದರು. ಈ ಬ್ಯಾಚ್​​ನಲ್ಲಿ ಸುಡಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳ ಕುಟುಂಬ ಸದಸ್ಯರು ಸೇರಿದಂತೆ 121 ವ್ಯಕ್ತಿಗಳನ್ನು ಒಳಗೊಂಡಿತ್ತು.

ಇದನ್ನೂ ಓದಿ:Operation Kaveri: 2ನೇ ಸುತ್ತಿನ ಆಪರೇಷನ್ ಕಾವೇರಿ ಮೂಲಕ ಸುಡಾನ್​​ನಿಂದ ಮುಂಬೈಗೆ ತಲುಪಿದ 246 ಭಾರತೀಯರು

8ನೇ ಬ್ಯಾಚ್ 121 ಭಾರತೀಯರು IAF C 130 J ಮೂಲಕ ಸುಡಾನ್‌ನ ವಾಡಿ ಸೆಡ್ನಾದಿಂದ ಜೆಡ್ಡಾಕ್ಕೆ ಆಗಮಿಸಿದ್ದಾರೆ. ಈ ಸ್ಥಳವು ಖಾರ್ಟೂಮ್‌ನ ಸಮೀಪದಲ್ಲಿರುವುದರಿಂದ ಈ ಸ್ಥಳಾಂತರವು ಹೆಚ್ಚು ಕಷ್ಟಕರವಾಗಿತ್ತು. ನಮ್ಮ ರಾಯಭಾರ ಕಚೇರಿಯ ಅಧಿಕಾರಿಗಳ ಕುಟುಂಬ ಸದಸ್ಯರು ಸಹ ಬ್ಯಾಚ್​​ನಲ್ಲಿದ್ದರು ಮುರಳೀಧರನ್ ಟ್ವೀಟ್ ಮಾಡಿದ್ದಾರೆ.

ಖಾರ್ಟೂಮ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ವೆಬ್‌ಸೈಟ್ ಪ್ರಕಾರ, ಸುಡಾನ್‌ನಲ್ಲಿ ಸುಮಾರು 2,800 ಭಾರತೀಯ ಪ್ರಜೆಗಳಿದ್ದಾರೆ. ಮಂಗಳವಾರ, INS ಸುಮೇಧಾ 278 ಭಾರತೀಯರ ಮೊದಲ ಬ್ಯಾಚ್​​ನ್ನು ಪೋರ್ಟ್ ಸುಡಾನ್‌ನಿಂದ ಜೆಡ್ಡಾಕ್ಕೆ ಸಾಗಿಸಲಾಗಿತ್ತು. ಭಾನುವಾರ ಬಿಡುಗಡೆ ಮಾಡಿದ ಹೇಳಿಕೆಗಳ ಪ್ರಕಾರ, ಪ್ರಸ್ತುತ ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯ ನಾಗರಿಕರ ಸುರಕ್ಷತೆ ಖಚಿತಪಡಿಸಿಕೊಳ್ಳಲು ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು MEA ಭರವಸೆ ನೀಡಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:28 am, Fri, 28 April 23