Sign In

By signing in or creating an account, you agree with Associated Broadcasting Company's Terms & Conditions and Privacy Policy.

Operation Kaveri: 2ನೇ ಸುತ್ತಿನ ಆಪರೇಷನ್ ಕಾವೇರಿ ಮೂಲಕ ಸುಡಾನ್​​ನಿಂದ ಮುಂಬೈಗೆ ತಲುಪಿದ 246 ಭಾರತೀಯರು

ಯುದ್ಧ ಪೀಡಿತ ಸುಡಾನ್​​​ನಿಂದ ಮತ್ತಷ್ಟು ಭಾರತೀಯರನ್ನು ಆಪರೇಷನ್ ಕಾವೇರಿ ಮೂಲಕ ಮುಂಬೈಗೆ ಕರೆತರಲಾಗಿದೆ. ಸುಡಾನ್‌ನಿಂದ ಭಾರತೀಯರು ಎರಡನೇ ಬ್ಯಾಚ್ ಇಂದು (ಏ.27) ಮಧ್ಯಾಹ್ನ ಮುಂಬೈಗೆ ಆಗಮಿಸಿದರು.

Operation Kaveri: 2ನೇ ಸುತ್ತಿನ ಆಪರೇಷನ್ ಕಾವೇರಿ ಮೂಲಕ ಸುಡಾನ್​​ನಿಂದ ಮುಂಬೈಗೆ ತಲುಪಿದ 246 ಭಾರತೀಯರು
2ನೇ ಸುತ್ತಿನ ಆಪರೇಷನ್ ಕಾವೇರಿ ಮೂಲಕ ಸುಡಾನ್​​ನಿಂದ ಮುಂಬೈಗೆ ತಲುಪಿದ 246 ಭಾರತೀಯರು
Follow us
ಅಕ್ಷಯ್​ ಪಲ್ಲಮಜಲು​​
|

Updated on:Apr 27, 2023 | 6:11 PM

ಮುಂಬೈ: ಯುದ್ಧ ಪೀಡಿತ ಸುಡಾನ್​​​ನಿಂದ (Sudan) ಮತ್ತಷ್ಟು ಭಾರತೀಯರನ್ನು ಆಪರೇಷನ್ ಕಾವೇರಿ (Operation Kaveri) ಮೂಲಕ ಮುಂಬೈಗೆ ಕರೆತರಲಾಗಿದೆ. ಸುಡಾನ್‌ನಿಂದ ಭಾರತೀಯರು ಎರಡನೇ ಬ್ಯಾಚ್ ಇಂದು (ಏ.27) ಮಧ್ಯಾಹ್ನ ಮುಂಬೈಗೆ ಆಗಮಿಸಿದರು. ಇಂದು ಮುಂಜಾನೆ ಜೆಡ್ಡಾದಿಂದ ಟೇಕ್ ಆಫ್ ಆದ ಭಾರತೀಯ ವಾಯುಪಡೆಯ ವಿಮಾನವು 246 ಭಾರತೀಯರನ್ನು ಆಪರೇಷನ್ ಕಾವೇರಿ ಅಡಿಯಲ್ಲಿ ಕರೆತಂದಿದೆ. ಮತ್ತೊಂದು ಆಪರೇಷನ್ ಕಾವೇರಿ ಮೂಲಕ ಸೈನ್ಯದ ವಿಮಾನದಲ್ಲಿ ಭಾರತೀಯರು ಮುಂಬೈಗೆ ಬರುತ್ತದೆ. ಇನ್ನೂ 246 ಭಾರತೀಯರು ಭಾರತಕ್ಕೆ ಬರುತ್ತಾರೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಟ್ವೀಟ್ ಮಾಡಿದ್ದಾರೆ. ನಿನ್ನೆ, 360 ಭಾರತೀಯರ ಮೊದಲ ಬ್ಯಾಚ್ ನವದೆಹಲಿಗೆ ಆಗಮಿಸಿದೆ.

ಆಪರೇಷನ್ ಕಾವೇರಿ ಎಂಬುದು ಸುಡಾನ್ ಸೇನೆ ಮತ್ತು ಅರೆಸೈನಿಕ ಗುಂಪುಗಳು ಹೋರಾಡುತ್ತಿರುವ ಸುಡಾನ್‌ನಿಂದ ಸಿಲುಕಿರುವ ಭಾರತೀಯ ನಾಗರಿಕರನ್ನು ಸ್ಥಳಾಂತರಿಸಲು ಸರ್ಕಾರವು ಪ್ರಾರಂಭಿಸಿದ ರಕ್ಷಣಾ ಕಾರ್ಯಾಚರಣೆಯಾಗಿದೆ. ಸುಡಾನ್​​ನಲ್ಲಿ ತನ್ನ ಜನರನ್ನು ಮತ್ತೆ ತಮ್ಮ ದೇಶಕ್ಕೆ ಕರೆದುಕೊಂಡು ಬರಬೇಕು ಎಂದು ಹಲವು ದೇಶಗಳ ಒತ್ತಾಯಕ್ಕೆ ಸುಡಾನ್​​ನಿಂದ ಜನರನ್ನು ಸ್ಥಳಾಂತರಿಸುವ ಕಾರ್ಯವನ್ನು ಮಾಡಬೇಕಿದೆ ಎಂದು ಯುಎಸ್ ಮತ್ತು ಸೌದಿ ಅರೇಬಿಯಾ ಮಧ್ಯಸ್ಥಿಕೆ ವಹಿಸಿದ ನಂತರ ಸುಡಾನ್‌ನಲ್ಲಿ 72 ಗಂಟೆಗಳ ಕದನ ವಿರಾಮಕ್ಕೆ ಸುಡಾನ್​​ ಎರಡು ಸೈನ್ಯಗಳು ಒಪ್ಪಿಕೊಂಡಿದೆ.

ಏ. 26ರಂದು ಮಿಲಿಟರಿ ವಿಮಾನ ಮತ್ತು ಯುದ್ಧನೌಕೆಯನ್ನು ಬಳಸಿಕೊಂಡು ಭಾರತ 530ಕ್ಕೂ ಹೆಚ್ಚು ನಾಗರಿಕರನ್ನು ಸುಡಾನ್‌ನಿಂದ ಸ್ಥಳಾಂತರಿಸಿದೆ. ಸುಡಾನ್ ಸೇನಾಪಡೆ ಮತ್ತು ಬಂಡುಕೋರ ಅರೆಸೈನಿಕ ಪಡೆಗಳ ನಡುವಿನ ಹೋರಾಟದ ನಡುವೆ ಈಶಾನ್ಯ ಆಫ್ರಿಕನ್ ದೇಶದಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆದೊಯ್ಯಲು ಕೇಂದ್ರ ಸರ್ಕಾರ ನಿರ್ಧರಿಸಿದೆ.ಸುಡಾನ್ ಸೇನಾ ಮುಖ್ಯಸ್ಥ ಜನರಲ್ ಅಬ್ದೆಲ್ ಫತ್ತಾಹ್ ಅಲ್-ಬುರ್ಹಾನ್ ಮತ್ತು ಅವರ ಪ್ರತಿಸ್ಪರ್ಧಿ, ಅರೆಸೇನಾ ಕ್ಷಿಪ್ರ ಬೆಂಬಲ ಪಡೆಗಳ (RSF) ಮುಖ್ಯಸ್ಥ ಜನರಲ್ ಮೊಹಮ್ಮದ್ ಹಮ್ದಾನ್ ಡಗಾಲೊ ಅವರಿಗೆ ನಿಷ್ಠರಾಗಿರುವ ಪಡೆಗಳು 72 ಗಂಟೆ ರಾಷ್ಟ್ರವ್ಯಾಪಿ ಕದನ ವಿರಾಮ (ceasefire) ಒಪ್ಪಿಗೆ ನೀಡಿದ ನಂತರ ಮಂಗಳವಾರ ಸ್ಥಳಾಂತರಿಸುವ ಕಾರ್ಯ ಪ್ರಾರಂಭವಾಯಿತು.

ಇದನ್ನೂ ಓದಿ: Operation Kaveri: ಆಪರೇಷನ್ ಕಾವೇರಿ; ಸುಡಾನ್​​ನಲ್ಲಿ ಸಿಲುಕಿರುವ ಭಾರತೀಯರ ಸ್ಥಳಾಂತರ ಆರಂಭ

ಐಎನ್‌ಎಸ್ ಸುಮೇಧಾ 278 ಭಾರತೀಯರ ಮೊದಲ ಬ್ಯಾಚ್ ಅನ್ನು ಪೋರ್ಟ್ ಸುಡಾನ್‌ನಿಂದ ಸೌದಿ ಅರೇಬಿಯಾದ ಜಿದ್ದಾಗೆ ಕರೆದೊಯ್ದಿದೆ. ಆಪರೇಷನ್ ಕಾವೇರಿ ಅಡಿಯಲ್ಲಿ, ಭಾರತೀಯ ವಾಯುಪಡೆಯ (IAF) C-130J ಸಾರಿಗೆ ವಿಮಾನದಲ್ಲಿ 121 ಜನರು ಮತ್ತು 135 ಜನರನ್ನು ಒಳಗೊಂಡಿರುವ ಎರಡು ಬ್ಯಾಚ್‌ಗಳನ್ನು ಪೋರ್ಟ್ ಸುಡಾನ್‌ನಿಂದ ಜಿದ್ದಾಗೆ ಕರೆದೊಯ್ಯಲಾಗಿದೆ.

Published On - 5:28 pm, Thu, 27 April 23