ಮಾನವ್ ರಚನಾ ಇಂಟರ್ನ್ಯಾಶನಲ್ನಿಂದ ಟಿವಿ9 ನೆಟ್ವರ್ಕ್ ಎಂಡಿ ಬರುಣ್ ದಾಸ್ ಸೇರಿದಂತೆ ಗಣ್ಯರಿಗೆ ಗೌರವ ಡಾಕ್ಟರೇಟ್
ಟಿವಿ9 ನೆಟ್ವರ್ಕ್ ಎಂಡಿ ಹಾಗೂ ಸಿಇಒ ಬರುಣ್ ದಾಸ್, ಪದ್ಮ ವಿಭೂಷಣ ಡಾ. ರಘುನಾಥ್ ಅನಂತ್ ಮಶೇಲ್ಕರ್, ದೆಹಲಿ ವಿವಿಯ ವಿಸಿ ಪ್ರೊ. ಯೋಗೇಶ್ ಸಿಂಗ್, ಖೇಲ್ ರತ್ನ ಗಗನ್ ನಾರಂಗ್ ಸೇರಿದಂತೆ ಹತ್ತು ಮಂದಿ ಗಣ್ಯರಿಗೆ ಮಾನವ್ ರಚನಾ ಇಂಟರ್‌ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ರಿಸರ್ಚ್ ಆ್ಯಂಡ್ ಸ್ಟಡೀಸ್ (ಎಂಆರ್ಐಐಆರ್ಎಸ್, ಮಾನವ್ ರಚನಾ ಡೆಂಟಲ್ ಕಾಲೇಜು ಒಳಗೊಂಡಂತೆ {MRDC}) ಹಾಗೂ ಮಾನವ್ ರಚನಾ ಯೂನಿವರ್ಸಿಟಿ ಜಂಟಿಯಾಗಿ ಆಯೋಜಿಸಿದ ಪದವಿ ಪ್ರದಾನ ಸಮಾರಂಭದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
ನೋಯ್ಡಾ: ಮಾನವ್ ರಚನಾ ಇಂಟರ್‌ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ರಿಸರ್ಚ್ ಆ್ಯಂಡ್ ಸ್ಟಡೀಸ್ (ಎಂಆರ್ಐಐಆರ್ಎಸ್, ಮಾನವ್ ರಚನಾ ಡೆಂಟಲ್ ಕಾಲೇಜು ಒಳಗೊಂಡಂತೆ {MRDC}) ಹಾಗೂ ಮಾನವ್ ರಚನಾ ಯೂನಿವರ್ಸಿಟಿ ಜಂಟಿಯಾಗಿ ಆಯೋಜಿಸಿದ ಪದವಿ ಪ್ರದಾನ ಸಮಾರಂಭದಲ್ಲಿ ಟಿವಿ9 ನೆಟ್ವರ್ಕ್ ಎಂಡಿ ಹಾಗೂ ಸಿಇಒ ಬರುಣ್ ದಾಸ್ (Barun Das) ಸೇರಿದಂತೆ ಹತ್ತು ಮಂದಿ ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ವಿಶ್ವವಿದ್ಯಾಲಯದ 18ನೇ ಪದವಿ ಪ್ರದಾನ ಸಮಾರಂಭ ಬುಧವಾರ ನಡೆಯಿತು. ಸಮಾರಂಭದಲ್ಲಿ 1500 ಪದವಿ ಪ್ರದಾನ ಮಾಡಲಾಯಿತು. ಒಟ್ಟು 91 ಮಂದಿಗೆ ಪಿಎಚ್ಡಿ ಪದವಿ ಪ್ರದಾನ ಮಾಡಲಾಯಿತು ಈ ಪೈಕಿ 29 ಎಂಆರ್ಯು ಹಾಗೂ 62 ಮಂದಿ ಎಂಆರ್ಐಐಆರ್ಎಸ್ನವರಾಗಿದ್ದಾರೆ. ತಮ್ಮ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಹತ್ತು ಮಂದಿಗೆ ಪ್ರತಿಷ್ಠಿತ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.ಪದ್ಮ ವಿಭೂಷಣ ಡಾ. ರಘುನಾಥ್ ಅನಂತ್ ಮಶೇಲ್ಕರ್, ದೆಹಲಿ ವಿವಿಯ ವಿಸಿ ಪ್ರೊ. ಯೋಗೇಶ್ ಸಿಂಗ್, ಖೇಲ್ ರತ್ನ ಗಗನ್ ನಾರಂಗ್, ಸೆಲೆಬ್ರಿಟಿ ಚೆಫ್ ಮನೀಷ್ ಮೆಹ್ರೋತ್ರಾ, ಮಾರುತಿ ಸುಜುಕಿಯ ಚೀಫ್ ಮೆಂಟರ್ ಸಾಖ್ಯುಲೆನ್ ಯಾಸಿನ್ ಸಿದ್ದಿಕಿ, ಕೂಡಾ ಗೌರವ ಡಾಕ್ಟರೇಟ್ಗೆ ಭಾಜನರಾಗಿದ್ದಾರೆ. ಕೋಟಾದ ಅಲೆನ್ ಕೆರೀರ್ ಇನ್ಸ್ಟಿಟ್ಯೂಟ್ನ ನಿರ್ದೇಶಕ ನವೀನ್ ಮಾಹೇಶ್ವರಿ, ಆ್ಯಕ್ಸಿಸ್ ಬ್ಯಾಂಕ್ನ ಇವಿಪಿ, ಹೆಚ್ಆರ್ ಮುಖ್ಯಸ್ಥ ರಾಜ್ಕಮಲ್ ವೆಂಪತಿ, ಏರ್ ಇಂಡಿಯಾದ ಚೀಫ್ ರಿಸೋರ್ಸ್ ಆಫೀಸರ್ ಸುರೇಶ್ ದತ್ ತ್ರಿಪಾಠಿ, ಶಿವಾಲಿಕ್ ಪ್ರಿಂಟ್ಸ್ ಲಿಮಿಟೆಡ್ನ ಎಂಡಿ, ಚೇರ್ಮನ್ ನರೇಂದ್ರ ಅಗರ್ವಾಲ್ ಗೌರವ ಡಾಕ್ಟರೇಟ್ಗೆ ಭಾಜನರಾದ ಇತರರಾಗಿದ್ದಾರೆ.
ಮಾಧ್ಯಮ ಮತ್ತು ಶೈಕ್ಷಣಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಟಿವಿ9 ನೆಟ್ವರ್ಕ್ ಎಂಡಿ, ಸಿಇಒ ಬರುಣ್ ದಾಸ್ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗಿದೆ.
ಜಾಗತಿಕ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿರುವ ಭಾರತ; ಬರುಣ್ ದಾಸ್
ಮಾನವ್ ರಚನಾ ಇಂಟರ್‌ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ರಿಸರ್ಚ್ ಆ್ಯಂಡ್ ಸ್ಟಡೀಸ್ ಆ್ಯಂಡ್ ಮಾನವ್ ರಚನಾ ಯೂನಿವರ್ಸಿಟಿಯ ಕಾರ್ಯಕ್ರಮದಲ್ಲಿ ಹಾಜರಿದ್ದ ಯುವ ಮನಸುಗಳನ್ನು ಉದ್ದೇಶಿಸಿ ಮಾತನಾಡಿದ ಬರುಣ್ ದಾಸ್, ಸಂಸ್ಥೆಗೆ ಕೃತಜ್ಞತೆ ತಿಳಿಸಿದರು.
‘ನಾನು ನಿಜವಾಗಿಯೂ ವಿನಮ್ರನಾಗಿದ್ದೇನೆ. ಒಂದು ದೇಶವಾಗಿ ನಾವೀ ಅತ್ಯುತ್ತಮ ಸಮಯದಲ್ಲಿ ಇದ್ದೇವೆ ಎಂದು ಭಾವಿಸುತ್ತೇನೆ. ಯಾಕೆಂದರೆ ಜಾಗತಿಕ ಮಟ್ಟದಲ್ಲಿ ಭಾರತ ಸ್ಥಿರವಾಗಿದೆ. ಆರ್ಥಿಕವಾಗಿ ಭಾರತವು ಜಗತ್ತಿನಲ್ಲಿ ಉತ್ತಮ ಭವಿಷ್ಯ ಹೊಂದಿರುವ ಬಗ್ಗೆ ಐಎಂಎಫ್, ವಿಶ್ವಬ್ಯಾಂಕ್ ಹಾಗೂ ಇತರ ಅನೇಕ ಪ್ರತಿಷ್ಠಿತ ಸಂಸ್ಥೆಗಳು ಮೆಚ್ಚುಗೆ ವ್ಯಕ್ತಪಡಿಸಿವೆ. ಆ ನಿಟ್ಟಿನಲ್ಲಿ ನಾವು ಮುನ್ನುಗ್ಗುತ್ತಿರುವುದಕ್ಕೆ ಜಿ20 ಅಧ್ಯಕ್ಷತೆ ಒಂದು ಸಂಕೇತವಾಗಿದೆ ಎಂದು ಬರುಣ್ ದಾಸ್ ಹೇಳಿದರು.
ಇದನ್ನೂ ಓದಿ: News9 Plus: ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ತರಲಿದೆ ನ್ಯೂಸ್9 ಪ್ಲಸ್; ಟಿವಿ9 ಸಿಇಒ, ಎಂಡಿ ಬರುಣ್ ದಾಸ್
ವಿದ್ಯಾರ್ಥಿಗಳಿಗೆ ವಿಶೇಷ ಸಂದೇಶವನ್ನು ನೀಡಿದ ಅವರು, ವಿದ್ಯಾರ್ಥಿಗಳು ಈ ಗೌರವಾನ್ವಿತ ಸಂಸ್ಥೆಯಿಂದ ಪದವಿ ಪಡೆಯುವುದನ್ನು ನಾವು ಎದುರು ನೋಡುತ್ತಿದ್ದೇವೆ. ಜತೆಗೆ, ಈ ಸಂಸ್ಥೆಯಿಂದ ವೃತ್ತಿಪರ ಪಯಣವನ್ನು ಪ್ರಾರಂಭಿಸುವುದು ಅತ್ಯಂತ ಆಶಾವಾದದಿಂದ ಕೂಡಿರುವ ವಿಚಾರವಾಗಿದೆ. ನಾವು ವಿದ್ಯಾರ್ಥಿಗಳ ಯಶಸ್ಸನ್ನು ನಿರೀಕ್ಷಿಸುತ್ತೇವೆ ಎಂದು ಹೇಳಿದ್ದಾರೆ.
ಆದಾಗ್ಯೂ, ಡಿಜಿಟಲ್ ಯುಗದಲ್ಲಿ ಗಮನ ಮತ್ತು ಬದ್ಧತೆ ವಿರಳವಾಗುತ್ತಿದೆ. ನಮ್ಮ ಬೆರಳ ತುದಿಯಲ್ಲಿ ಮಾಹಿತಿ ಸ್ಫೋಟವಾಗುತ್ತಿದೆ. ನಾವು ಪ್ರಜ್ಞಾಪೂರ್ವಕವಾಗಿ ಕಾರ್ಯನಿರ್ವಹಿಸಬೇಕಾಗಿದೆ. ನಿರಂತರ ಸದ್ಗುಣ, ಬದ್ಧತೆಯೊಂದಿಗೆ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು.
ಶಿಕ್ಷಣದಲ್ಲಿ ‘ಇ’ ಎಂಬುದು ‘ಎಫ್’ಗೆ ಸಮ, ಅಂದರೆ ಶಿಕ್ಷಣ ಭವಿಷ್ಯಕ್ಕೆ ಸಮ. ವಿಜೇತರು ಎಂದಿಗೂ ತಮ್ಮ ಕಾರ್ಯವನ್ನು ಅರ್ಧದಲ್ಲೇ ಬಿಟ್ಟುಬಿಡುವುದಿಲ್ಲ ಮತ್ತು ಬಿಟ್ಟರೆ ಎಂದಿಗೂ ಗೆಲ್ಲುವುದಿಲ್ಲ. ನನಗೆ ಈಗ 81 ವರ್ಷ ವಯಸ್ಸು. ಉತ್ತಮವಾದದ್ದು ಇನ್ನಷ್ಟೇ ಬರಬೇಕಿದೆ ಎಂಬ ಆಶಾವಾದವನ್ನು ಪ್ರತಿದಿನ ನಾನು ಎಚ್ಚರಗೊಂಡಾಗ ಹೇಳುತ್ತೇನೆ. ಭಾರತದ 1.4 ಬಿಲಿಯನ್ ಜನರು ಇದನ್ನು ಹೇಳಿದರೆ ಮತ್ತು ಇದನ್ನು ಅನುಸರಿಸಿದರೆ ಭಾರತವು ಶಕ್ತಿ ಕೇಂದ್ರವಾಗಿ ಬದಲಾಗುತ್ತದೆ ಎಂದು ಡಾ. ಮಶೇಲ್ಕರ್ ಹೇಳಿದರು.
ಅವಿರತವಾಗಿ ಶ್ರಮಿಸುವ ಮೂಲಕ ತಮ್ಮ ಶೈಕ್ಷಣಿಕ ಗುರಿಗಳನ್ನು ಈ ದಿನವನ್ನು ಸಾಧ್ಯವಾಗಿಸಿದ ಎಲ್ಲಾ ವಿದ್ಯಾರ್ಥಿಗಳು, ಅವರ ಪೋಷಕರು ಮತ್ತು ಉಪನ್ಯಾಸಕರ ಶ್ರಮಕ್ಕೆ ನಾನು ಅಪಾರ ಗೌರವವನ್ನು ಸಲ್ಲಿಸುತ್ತೇನೆ. ಎಂಆರ್ಐಐಆರ್ಎಸ್ ಮತ್ತು ಎಂಆರ್ಯು ಎರಡೂ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳನ್ನು ಉದ್ಯಮಕ್ಕೆ ಸೂಕ್ತವಾಗಿ ಸೂಕ್ತ ಕೌಶಲಗಳನ್ನು ಅಳವಡಿಸಿಕೊಳ್ಳುವಂತೆ ಸಿದ್ಧಗೊಳಿಸಿವೆ. 2022ರ ಬ್ಯಾಚ್ ಅವರ ಪ್ರತಿಯೊಂದು ಸಾಧನೆಯೊಂದಿಗೆ ಅವರ ಅಧ್ಯಯನದ ಮೂಲಕ ನಮ್ಮನ್ನು ಹೆಮ್ಮೆಪಡುವಂತೆ ಮಾಡಿದೆ ಎಂದು ಎಂಆರ್ಇಐ ಅಧ್ಯಕ್ಷ ಡಾ. ಪ್ರಶಾಂತ್ ಭಲ್ಲಾ ಹೇಳಿದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:22 pm, Thu, 27 April 23