ಪ್ರಧಾನಿ ಮೋದಿಯವರಲ್ಲಿ ಮನವಿ ಮಾಡುತ್ತಾ ಕಣ್ಣೀರಿಟ್ಟ ಮೃತ ಐಎಎಸ್ ಅಧಿಕಾರಿ ಕೃಷ್ಣಯ್ಯ ಮಗಳು

ನಮ್ಮ ತಂದೆಯ ಬಗ್ಗೆ ನಿಮಗೆ ತಿಳಿದಿಲ್ಲದಿದ್ದರೆ, ದಯವಿಟ್ಟು ಬಿಹಾರದ ಜನರನ್ನು ಕೇಳಿ. ಇಂದು,29 ವರ್ಷಗಳ ನಂತರ, ಜನರು ಇದಕ್ಕಾಗಿ ಹೋರಾಡಲು ಸಿದ್ಧರಾಗಿದ್ದಾರೆ, ಇದು ನಮಗೆ ಪ್ರತಿಫಲ ಎಂಬ ಕಾರಣದಿಂದಲ್ಲ ಎಂದು ಹೇಳುತ್ತಾ ಪದ್ಮ ಕಣ್ಣೀರಾಗಿದ್ದಾರ.

ಪ್ರಧಾನಿ ಮೋದಿಯವರಲ್ಲಿ ಮನವಿ ಮಾಡುತ್ತಾ ಕಣ್ಣೀರಿಟ್ಟ ಮೃತ ಐಎಎಸ್ ಅಧಿಕಾರಿ ಕೃಷ್ಣಯ್ಯ ಮಗಳು
ಪದ್ಮ ಕೃಷ್ಣಯ್ಯ
Follow us
ರಶ್ಮಿ ಕಲ್ಲಕಟ್ಟ
|

Updated on:Apr 27, 2023 | 6:23 PM

ಹೈದರಾಬಾದ್: 29 ವರ್ಷಗಳ ಹಿಂದೆ ಬಿಹಾರದಲ್ಲಿ ಹತ್ಯೆಗೀಡಾದ ಐಎಎಸ್ ಅಧಿಕಾರಿ ಜಿ.ಕೃಷ್ಣಯ್ಯ (G Krishnaiah)  ಅವರ ಪುತ್ರಿ ಪದ್ಮಾ ಕೃಷ್ಣಯ್ಯ (Padma Krishnaiah) ಹತ್ಯೆಪ್ರಕರಣದಲ್ಲಿ ಅಪರಾಧಿಯಾ ಆನಂದ್ ಮೋಹನ್ ಸಿಂಗ್ ನ್ನು ಬಿಡುಗಡೆ ಮಾಡಿದ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಮನವಿ ಮಾಡಿದ್ದಾರೆ. ಬಿಹಾರದ ಜೈಲು ನಿಯಮಗಳಲ್ಲಿ ತಿದ್ದುಪಡಿ ಮಾಡಿದ ನಂತರ ಗ್ಯಾಂಗ್ ಸ್ಟರ್, ರಾಜಕಾರಣಿಯಾಗಿರುವ ಆನಂದ್ ಮೋಹನ್ ಸಿಂಗ್ ನ್ನು ಇಂದು(ಗುರುವಾರ) ಮುಂಜಾನೆ 3 ಗಂಟೆಗೆ ಬಿಡುಗಡೆ ಮಾಡಲಾಗಿದೆ. ಈ ವಿಷಯ ದೊಡ್ಡ ರಾಜಕೀಯ ವಿವಾದವಾಗಿ ಮಾರ್ಪಟ್ಟಿದ್ದು, ದೇಶದ ಐಎಎಸ್ ಅಧಿಕಾರಿಗಳ ಉನ್ನತ ಮಂಡಳಿ ಮತ್ತು ಬಿಜೆಪಿ ನಾಯಕರು, ನಿತೀಶ್ ಕುಮಾರ್ ಸರ್ಕಾರವನ್ನು ಟೀಕಿಸಿದ್ದಾರೆ. ಅಂತಹ ಜನರು ಸಮಾಜಕ್ಕೆ ಮರಳಿ ಬರಬಾರದು ಎಂದು ನಾನು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ವಿನಂತಿಸುತ್ತೇನೆ. ಇದರ ವಿರುದ್ಧ ಹೋರಾಡುವ ಶಕ್ತಿ ನನಗಿಲ್ಲ.ದಯವಿಟ್ಟು ಅಂತಹ ಗ್ಯಾಂಗ್​​ಸ್ಟರ್ ಮತ್ತು ಮಾಫಿಯಾಗಳು ಬಿಹಾರ ಅಥವಾ ಯಾವುದೇ ರಾಜ್ಯದಲ್ಲಿ ಮುಕ್ತವಾಗಿ ತಿರುಗಾಡದಂತೆ ಕಾನೂನನ್ನು ತನ್ನಿ. ದಯವಿಟ್ಟು ಪರಿಸ್ಥಿತಿಯನ್ನು ಮರುಪರಿಶೀಲಿಸಿ ಎಂದು ಪದ್ಮಾ ಎನ್ ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.

ನಮ್ಮ ತಂದೆಯ ಬಗ್ಗೆ ನಿಮಗೆ ತಿಳಿದಿಲ್ಲದಿದ್ದರೆ, ದಯವಿಟ್ಟು ಬಿಹಾರದ ಜನರನ್ನು ಕೇಳಿ. ಇಂದು,29 ವರ್ಷಗಳ ನಂತರ, ಜನರು ಇದಕ್ಕಾಗಿ ಹೋರಾಡಲು ಸಿದ್ಧರಾಗಿದ್ದಾರೆ, ಇದು ನಮಗೆ ಪ್ರತಿಫಲ ಎಂಬ ಕಾರಣದಿಂದಲ್ಲ ಎಂದು ಹೇಳುತ್ತಾ ಪದ್ಮ ಕಣ್ಣೀರಾಗಿದ್ದಾರ.

1994 ರಲ್ಲಿ, ಆನಂದ್ ಮೋಹನ್ ಅವರ ಬಿಪಿಪಿ ಪಕ್ಷದ ಮುಜಾಫರ್‌ಪುರದ ದರೋಡೆಕೋರ-ರಾಜಕಾರಣಿ ಛೋಟಾನ್ ಶುಕ್ಲಾ ಅವರ ಮೃತದೇಹ ಹೊತ್ತು ಗುಂಪೊಂದು ಪ್ರತಿಭಟನೆ ನಡೆಸುತ್ತಿತ್ತು. ಡಿಸೆಂಬರ್ 4 ರಂದು ಮುಜಾಫರ್‌ಪುರದ ಭಗವಾನ್‌ಪುರ್ ಚೌಕ್‌ನಲ್ಲಿ ಅಪರಿಚಿತ ದುಷ್ಕರ್ಮಿಗಳು ಅವರ ವಾಹನದ ಮೇಲೆ ಗುಂಡು ಹಾರಿಸಿ ಶುಕ್ಲಾ ಸಾವಿಗೀಡಾಗಿದ್ದರು. ಗುಂಡಿನ ದಾಳಿಯಲ್ಲಿ ಓರ್ವ ಪೊಲೀಸ್ ಸಹ ಭಾಗಿಯಾಗಿದ್ದಾನೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ತಿಳಿಸಿದೆ.

ಛೋಟಾನ್ ಹತ್ಯೆಯಲ್ಲಿ ಪೊಲೀಸರೊಬ್ಬರು ಭಾಗಿಯಾಗಿದ್ದಾರೆ ಎಂಬ ಸುದ್ದಿ ಹರಡುತ್ತಿದ್ದಂತೆ ಆತನ ಬೆಂಬಲಿಗರು ನಗರದಲ್ಲಿ ಆಕ್ರೋಶ ವ್ಯಕ್ತಪಡಿಸಿ ವಾಹನಗಳನ್ನು ಧ್ವಂಸಗೊಳಿಸಿದ್ದಾರೆ. ಮರುದಿನ, ಮುಜಫರ್‌ಪುರದಿಂದ ವೈಶಾಲಿಯ ಲಾಲ್‌ಗಂಜ್‌ನಲ್ಲಿರುವ ಅವನ ತಂದೆಯ ಗ್ರಾಮವಾದ ಖಂಜಾಹಚಕ್‌ಗೆ ಛೋಟಾನ್‌ನ ಮೃತದೇಹ ಹೊತ್ತು ಬೆಂಬಲಿಗರು ಹೋಗಿದ್ದರು.

ಆನಂದ್ ಮೋಹನ್ ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡು ನೆರೆದಿದ್ದ ಜನರನ್ನುದ್ದೇಶಿಸಿ ಆವೇಶಭರಿತ ಭಾಷಣ ಮಾಡಿದರು. ಆ ಸಮಯದಲ್ಲಿ ಗೋಪಾಲಗಂಜ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿದ್ದ ಜಿ ಕೃಷ್ಣಯ್ಯ ಅವರು ಹಾಜಿಪುರದಿಂದ ಗೋಪಾಲಗಂಜ್‌ಗೆ ಹಿಂತಿರುಗುತ್ತಿದ್ದರು. 1985ರ ಬ್ಯಾಚ್‌ನ ಐಎಎಸ್ ಅಧಿಕಾರಿ ಆಗಿರುವ ಜಿ ಕೃಷ್ಣಯ್ಯ ತೆಲಂಗಾಣದ ಮಹೆಬೂಬ್‌ನಗರದವರು.

ಕೆಂಪು ದೀಪವಿರುವ ಸರ್ಕಾರಿ ವಾಹನದ ನೋಡಿ ರೊಚ್ಚಿಗೆದ್ದ ಪ್ರತಿಭಟನಾಕಾರರು ಖಬ್ರಾ ಗ್ರಾಮದ ಬಳಿ ಕೃಷ್ಣಯ್ಯ ಅವರನ್ನು ಘೇರಾವ್ ಮಾಡಿ ಕಾರಿಗೆ ಕಲ್ಲು ತೂರಾಟ ಆರಂಭಿಸಿದರು. ಈ ನಡುವೆ ಛೋಟಾನ್ ಸಹೋದರ ಭುತ್ಕುನ್ ಶುಕ್ಲಾ ಕೃಷ್ಣಯ್ಯ ಅವರ ಮೇಲೆ ಗುಂಡು ಹಾರಿಸಿದ್ದು, ಜನರ ಗುಂಪು ಕೃಷ್ಣಯ್ಯ ಅವರನ್ನು ಥಳಿಸಿ ಹತ್ಯೆಗೈದಿದೆ.

ಕೃಷ್ಣಯ್ಯ ಅವರನ್ನು ಪೊಲೀಸರು ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಿಲ್ಲ. ಐಎಎಸ್ ಅಧಿಕಾರಿಯನ್ನು ಹತ್ಯೆ ಮಾಡಲು ಆನಂದ್ ಮೋಹನ್ ಜನಸಮೂಹವನ್ನು ಪ್ರಚೋದಿಸಿದರು ಎಂದು ಆರೋಪಿಸಲಾಗಿದೆ. 2007 ರಲ್ಲಿ ಆನಂದ್ ಮೋಹನ್ಗೆ ಮರಣದಂಡನೆ ವಿಧಿಸಲಾಯಿತು. ಆದರೆ ನಂತರ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಲಾಯಿತು. ಇದಾದ ನಂತರ ಅವರು 15 ವರ್ಷಗಳ ಕಾಲ ಜೈಲಿನಲ್ಲಿದ್ದರು.

ಇದನ್ನೂ ಓದಿ: ಜಿ ಕೃಷ್ಣಯ್ಯ ಹಂತಕರ ಬಿಡುಗಡೆ; ಬಿಹಾರ ಸರ್ಕಾರದ ನಿರ್ಧಾರ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ಕರ್ನಾಟಕ ಐಎಎಸ್ ಅಧಿಕಾರಿಗಳ ಸಂಘಟನೆ

ಈ ತಿಂಗಳ ಆರಂಭದಲ್ಲಿ, ಬಿಹಾರ ಸರ್ಕಾರವು ಜೈಲು ನಿಯಮಗಳನ್ನು ತಿದ್ದುಪಡಿ ಮಾಡಿತ್ತು. ಹಿಂದಿನ ನಿಯಮ ಪ್ರಕಾರ ಕರ್ತವ್ಯ ನಿರತ ಸರ್ಕಾರಿ ನೌಕರನ ಹತ್ಯೆಗೆ ಸಂಬಂಧಿಸಿದಂತೆ ಶಿಕ್ಷೆಗೊಳಗಾದವರು ಶಿಕ್ಷೆಗೆ ಅರ್ಹರಾಗಿಲಿಲ್ಲ. ಇದಕ್ಕೆ ಬಿಹಾರ ಸರ್ಕಾರ ತಿದ್ದುಪಡಿ ತಂದಿತ್ತು. ಹಾಗಾಗಿ 14 ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಶಿಕ್ಷೆ ಅನುಭವಿಸಿದ ಕೈದಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿತ್ತು. ನಿತೀಶ್ ಕುಮಾರ್ ಸರ್ಕಾರದ ನಡೆಯನ್ನು ರಾಜ್ಯದ ಪ್ರತಿಪಕ್ಷ ಬಿಜೆಪಿ ನಾಯಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಮಾಯಾವತಿಯವರ ಬಹುಜನ ಸಮಾಜ ಪಕ್ಷವು ನಿಯಮಗಳಲ್ಲಿನ ತಿದ್ದುಪಡಿ ದಲಿತ ವಿರೋಧ ಎಂದು ಹೇಳಿದ್ದು ತ್ತು ನಿರ್ಧಾರವನ್ನು ಮರುಪರಿಶೀಲಿಸುವಂತೆ ರಾಜ್ಯ ಸರ್ಕಾರವನ್ನು ವಿನಂತಿಸಿದೆ.

ಈ ಕ್ರಮವನ್ನು ಖಂಡಿಸಿರುವ ಕೇಂದ್ರೀಯ ಐಎಎಸ್ ಅಸೋಸಿಯೇಷನ್, ಸಾರ್ವಜನಿಕ ಸೇವಕರ ನೈತಿಕ ಸ್ಥೈರ್ಯವನ್ನು ಕುಗ್ಗಿಸುತ್ತದೆ. ಸಾರ್ವಜನಿಕ ಸುವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ ಮತ್ತು ನ್ಯಾಯದ ಆಡಳಿತವನ್ನು ಅಪಹಾಸ್ಯ ಮಾಡುತ್ತದೆ ಎಂದು ಹೇಳಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:13 pm, Thu, 27 April 23

ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ