AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುವತಿಯೊಂದಿಗೆ ಶಾಸಕ ಚಾಟ್​ ಮಾಡಿದ್ದೇ ಮಾಡಿದ್ದು, ಆ ಮೇಲೆ ಗೊತ್ತಾಯ್ತು ಆತ ಯುವಕ ಅಂತಾ! ಆದರೆ ಅಷ್ಟೊತ್ತಿಗೆ…

ಶಾಸಕ ದುರ್ಗಂ ಚಿನ್ನಯ್ಯ ಅವರ ವಿರುದ್ಧ ಆರಿಜಿನ್ ಡಯರಿ ಮಾಲೀಕತ್ವದ ವಿಷಯವಾಗಿ ಹೋರಾಟಗಳು ನಡೆದಿದ್ದವು. ಸರಿಯಾಗಿ ಅದನ್ನೇ ಬಳಸಿಕೊಂಡ ಆರೋಪಿ ಇಶಕ್ ಆ ವೇಳೆ ತೆಗೆದಿದ್ದ ಫೋಟೋಗಳು, ವಿಡಿಯೋಗಳು ತನ್ನ ಬಳಿ ಇವೆ ಎಂದು ಬೆದರಿಸಿದ್ದಾನೆ.

ಯುವತಿಯೊಂದಿಗೆ ಶಾಸಕ ಚಾಟ್​ ಮಾಡಿದ್ದೇ ಮಾಡಿದ್ದು, ಆ ಮೇಲೆ ಗೊತ್ತಾಯ್ತು ಆತ ಯುವಕ ಅಂತಾ! ಆದರೆ ಅಷ್ಟೊತ್ತಿಗೆ...
ಶಾಸಕ ದುರ್ಗಂ ಚಿನ್ನಯ್ಯ ಜೊತೆ ಯುವತಿಯಂತೆ ಚಾಟಿಂಗ್
ಸಾಧು ಶ್ರೀನಾಥ್​
|

Updated on:Apr 28, 2023 | 11:04 AM

Share

ಮಂಚಿರ್ಯಾಲ ಜಿಲ್ಲೆ ಬೆಲ್ಲಂಪಲ್ಲಿ ಶಾಸಕ ದುರ್ಗಂ ಚಿನ್ನಯ್ಯ ಅವರನ್ನು (Bellampalli MLA Durgam Chinnaiah) ಹಣಕ್ಕಾಗಿ ಬೆದರಿಸಿರುವ ಘಟನೆ ನಡೆದಿದೆ. ವಿವರಗಳಿಗೆ ಹೋಗುವುದಾದರೆ ಕಾಮರೆಡ್ಡಿ ಜಿಲ್ಲೆ ಎಲ್ಲಾರೆಡ್ಡಿ ಮಂಡಲ ಅಜಮಾಬಾದ್‌ಗೆ ಸೇರಿದ ಎಂಡಿ ಇಶಕ್ ಎಂಬ ವ್ಯಕ್ತಿ ಈ ತಿಂಗಳ 23 ರಂದು ಬೆಲ್ಲಂಪಲ್ಲಿ ಶಾಸಕಗೆ ಸಾಮಾನ್ಯವಾದ ವಾಟ್ಸಪ್ ಸಂದೇಶಗಳನ್ನು ಕಳುಹಿಸಿದ್ದಾರೆ. ಆದರೆ ಒಬ್ಬ ಯುವತಿಯಂತೆ ಚಾಟಿಂಗ್ (chat) ಮಾಡಿದ್ದಾನೆ. ಇದೇ ವೇಳೆ ತನಗೆ 90 ಸಾವಿರ ರೂಪಾಯಿ ಕೊಡುವಂತೆ ಬೆದರಿಸಿದ್ದಾನೆ (Telangana News).

ದುರ್ಗಂ ಚಿನ್ನಯ್ಯ ವಿರುದ್ಧ ಲೈಂಗಿಕ ಕಿರುಕುಳ ಹೋರಾಟ: ಇತ್ತೀಚೆಗೆ ಶಾಸಕ ದುರ್ಗಂ ಚಿನ್ನಯ್ಯ ಅವರ ವಿರುದ್ಧ ಆರಿಜಿನ್ ಡಯರಿ (Origin dairy firm) ನಿರ್ದೇಶಕಿರೊಬ್ಬರು ಲೈಂಗಿಕ ಕಿರುಕುಳದ ಬಗ್ಗೆ ಹೋರಾಟ ನಡೆಸಿದ್ದರು. ಸರಿಯಾಗಿ ಅದೇ ಪ್ರಕರಣವನ್ನು ಬಳಸಿಕೊಂಡ ಆರೋಪಿ ಇಶಕ್ ಆ ವೇಳೆ ತೆಗೆದಿದ್ದ ಫೋಟೋಗಳು, ವಿಡಿಯೋಗಳು ತನ್ನ ಬಳಿ ಇವೆ ಎಂದು ಬೆದರಿಸಿದ್ದಾನೆ.

ಕೊನೆಗೆ ಶಾಸಕ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು, ಶಾಸಕರ ಜೊತೆ ಯುವತಿ ರೂಪದಲ್ಲಿ ಚಾಟ್ ಮಾಡಿದ್ದ ವ್ಯಕ್ತಿಯನ್ನು ಇಶಕ್ ಎಂದು ಗುರುತಿಸಿದ್ದಾರೆ. ತಕ್ಷಣ ಆತನನ್ನು ವಶಕ್ಕೆ ತೆಗೆದುಕೊಂಡು ರಿಮಾಂಡ್‌ಗೆ ಕಳಿಸಿದ್ದಾರೆ.

ನಕಲಿ ಐಪಿಎಲ್ ಟಿಕೆಟ್‌ಗಳನ್ನು ಪ್ರಿಂಟ್ ಮಾಡಿ, ಮಾರಾಟ…

ಹೈದರಾಬಾದ್‌ನಲ್ಲಿ ಅಕ್ರಮವಾಗಿ ನಕಲಿ ಐಪಿಎಲ್ ಟಿಕೆಟ್‌ಗಳನ್ನು ಪ್ರಿಂಟ್ ಮಾಡಿ ಮಾರಾಟ ಮಾಡುತ್ತಿರುವುದು ಸಂಚಲನ ಸೃಷ್ಟಿಸಿದೆ. ಇತ್ತೀಚೆಗೆ ರಾಚಕೊಂಡ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಈವೆಂಟ್ ಮ್ಯಾನೇಜ್​​ಮೆಂಟ್​​ ಕಂಪನಿಯಲ್ಲಿ ಉಪ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿರುವ ಗೋವರ್ಧನ್ ರೆಡ್ಡಿ ಎಂಬ ವ್ಯಕ್ತಿಯನ್ನು ಐಪಿಲ್ ಪಂದ್ಯದ ಮಾಲೀಕರ ಜೊತೆ ಕೆಲಸಕ್ಕೆ ನಿಗದಿಪಡಿಸಲಾಗಿತ್ತು. ಆದರೆ ಗೋವರ್ಧನ್ ರೆಡ್ಡಿ ಐಪಿಎಲ್ ಪಂದ್ಯಗಳಿಗಾಗಿ ಅಖಿಲ್, ವಂಶೀ, ಶ್ರವಣ್, ಅಜೀಜ್ ಗಳನ್ನು ವಾಲಿಡೇಟರ್​​ಗಳಾಗಿ ನೇಮಿಸಿಕೊಂಡು ಕ್ರೀಡಾಂಗಣಕ್ಕೆ ಬರಲು ಅವರಿಗೆ ಅಕ್ರೆಡಿಟೇಶನ್ ಕಾರ್ಡ್‌ಗಳನ್ನು ನೀಡಿದ್ದರು.

ಇದನ್ನೂ ಓದಿ:

ದೇವನಹಳ್ಳಿ ಮಾಜಿ ಶಾಸಕ ಕಾಂಗ್ರೆಸ್ ಪಕ್ಷದ ವೆಂಕಟಸ್ವಾಮಿ ಹೃದಯಾಘಾತದಿಂದ ನಿಧನ, ಕ್ಷೇತ್ರದಿಂದ ಟಿಕೆಟ್ ಬಯಸಿದ್ದರು

ಆದರೆ ಅಖಿಲ್ ಮತ್ತು ವಂಶೀ ಅಕ್ರೆಡಿಟೇಶನ್ ಕಾರ್ಡ್‌ ಮೇಲೆ ಇರುವ ಬಾರ್‌ಕೋಡ್‌ ಅನ್ನು ಫೋಟೋ ತೆಗೆದುಕೊಂಡಿದ್ದಾರೆ. ಆ ನಂತರ ಚಿಕ್ಕಡಪಲ್ಲಿಯಲ್ಲಿರುವ ಫೋಟೋ ಶಾಪ್ ನಡೆಸುತ್ತಿರುವ ಫಾಹೀಮ್ ಎಂಬ ವ್ಯಕ್ತಿಗೆ ಅದನ್ನು ಮೇಲ್ ಮಾಡಿದ್ದಾರೆ. ಐಪಿಲ್ ಪಂದ್ಯದ ಟಿಕೆಟ್‌ಗಾಗಿ ಮತ್ತೊಬ್ಬ ಆರೋಪಿ ಶ್ರವಣ್ ಒಂದು ಖಾಲಿ ಟೆಂಪ್ಲೇಟ್​​​ ಅನ್ನು ಒದಗಿಸಿದ್ದಾನೆ. ಕೊನೆಗೆ ಎಲ್ಲರೂ ಸೇರಿ ಅಕ್ರಮವಾಗಿ ಸುಮಾರು 200 ನಕಲಿ ಟಿಕೆಟ್‌ಗಳನ್ನು ಮುದ್ರಿಸಿಟ್ಟುಕೊಂಡಿದ್ದಾರೆ. ಆ ನಂತರ ಅವುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಿದ್ದಾರೆ. ಈ ಅಕ್ರಮದ ಬಗ್ಗೆ ತಿಳಿದುಕೊಂಡ ಪೊಲೀಸರು ಇಡೀ ಗ್ಯಾಂಗ್​​ ಅನ್ನು ಬಂಧಿಸಿ, ರಿಮಾಂಡ್‌ಗೆ ಕಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:46 am, Fri, 28 April 23

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ