15ನೇ ಹಣಕಾಸು ಆಯೋಗವು 2020-2021ರಿಂದ2025-2026ರವರೆಗಿನ ತನ್ನ ವರದಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಇಂದು ಸಲ್ಲಿಸಿದೆ. ಎನ್ ಕೆ ಸಿಂಗ್ ಅಧ್ಯಕ್ಷರಾಗಿರುವ ಆಯೋಗ ಕೋವಿಡ್ ಕಾಲದ ಹಣಕಾಸು ಪರಿಸ್ಥಿತಿ ಶೀರ್ಷಿಕೆಯುಳ್ಳ ವರದಿಯನ್ನು ರಾಷ್ಟ್ರಪತಿಗಳಿಗೆ ಸಲ್ಲಿಸಿತು. ಅಜಯ್ ನಾರಾಯಣ್ ಝಾ, ಅನೂಪ್ ಸಿಂಗ್, ಅಶೋಕ್ ಲಹಿರಿ, ಅರವಿಂದ್ ಮೆಹ್ತಾ, ಶಕ್ತಿಕಾಂತದಾಸ್ ಮತ್ತು ರಮೇಶ್ ಚಾಂದ್ ಹಣಕಾಸು ಆಯೋಗದ ಇತರ ಸದಸ್ಯರಾಗಿದ್ದಾರೆ.
ಮುಂದಿನ ಐದು ವರ್ಷಗಳ ಹಣಕಾಸು ಯೋಜನೆಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಈ ವರದಿ ಮಹತ್ವ ಪಡೆದಿದೆ.
ತೆರಿಗೆ ವಿಕೇಂದ್ರೀಕರಣ, ಸ್ಥಳೀಯ ಆಡಳಿತಗಳಿಗೆ ಅನುದಾನ ಬಿಡುಗಡೆ, ವಿಪತ್ತು ನಿಧಿಗಳ ಬಳಕೆ ಮುಂತಾದ ವಿಷಯಗಳ ಕುರಿತು ವರದಿಯಲ್ಲಿ ಉಲ್ಲೇಖಿಸಲಾಗಿದೆ. ನಾಲ್ಕು ಆವೃತ್ತಿಗಳ ವರದಿಯಲ್ಲಿ ಐದು ವರ್ಷಗಳವರೆಗೆ ಘನ ತ್ಯಾಜ್ಯ ನಿರ್ವಹಣೆ, ವಿದ್ಯುತ್ ನಿರ್ವಹಣೆ, ಫಲಾನುಭವಿಗಳಿಗೆ ನೇರ ವರ್ಗಾವಣೆ ಮುಂತಾದವುಗಳ ಬಗ್ಗೆ ಸಹ ವಿವರಿಸಲಾಗಿದೆ.
ಸಂಸತ್ತಿನಲ್ಲಿ ಮಂಡಿಸಿದ ನಂತರವಷ್ಟೇ ಈ ವರದಿ ಸಾರ್ವಜನಿಕರಿಗೆ ಲಭ್ಯವಾಗಲಿದೆ.
Published On - 10:40 pm, Mon, 9 November 20