ಮೈಕೊರೆಯುವ ಚಳಿಯಲ್ಲಿ ಮನುಕುಲದ ಒಳಿತಿಗಾಗಿ ಪ್ರಾರ್ಥನೆ!
ಕೇದಾರನಾಥ: ಕೊರೊನಾ ಪಿಡುಗಿನಿಂದ ಕಂಗೆಟ್ಟಿರುವ ಮಾನವ ಕುಲದ ಒಳಿತಿಗಾಗಿ 7ರಿಂದ 8 ಡಿಗ್ರಿ ತಾಪಮಾನದ ಹಿಮಾಲಯದ ತಪ್ಪಲಿನ ಕೇದಾರನಾಥದ ಮೈಕೊರೆಯುವ ಚಳಿಯಲ್ಲಿ ಧ್ಯಾನ, ಪ್ರಾರ್ಥನೆ ಮಾಡುತ್ತಿರುವುದಾಗಿ ಪಂಚಮಸಾಲಿ ಜಗದ್ಗುರು ಪೀಠದ ವಚನಾನಂದ ಸ್ವಾಮೀಜಿ ತಿಳಿಸಿದ್ದಾರೆ. ತಮ್ಮ ಫೇಸ್ಬುಕ್ ಖಾತೆಯಲ್ಲಿ ನಸುಕಿನ 4.30ರಿಂದ 5.30ರವೆಗಿನ ಬ್ರಾಹ್ಮಿ ಮುಹೂರ್ತದಲ್ಲಿ ಧ್ಯಾನದಲ್ಲಿ ನಿರತರಾಗಿರುವ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸುದ್ದಿ ಮಾಡುತ್ತಿದೆ. ಜೊತೆಗೆ ಮಾತೃಭೂಮಿಯ ಒಳಿತಿಗಾಗಿಯೂ ಪ್ರಾರ್ಥನೆ ಸಲ್ಲಿಸಿರುವುದಾಗಿಯೂ ತಿಳಿಸಿದ್ದಾರೆ. ಬ್ರಾಹ್ಮಿ ಮುಹೂರ್ತ ಸಾಧುಗಳಿಗೆ ಮತ್ತು ಋಷಿಗಳಿಗೆ ಅತ್ಯಂತ ಪ್ರಮುಖವಾದುದು. […]
ಕೇದಾರನಾಥ: ಕೊರೊನಾ ಪಿಡುಗಿನಿಂದ ಕಂಗೆಟ್ಟಿರುವ ಮಾನವ ಕುಲದ ಒಳಿತಿಗಾಗಿ 7ರಿಂದ 8 ಡಿಗ್ರಿ ತಾಪಮಾನದ ಹಿಮಾಲಯದ ತಪ್ಪಲಿನ ಕೇದಾರನಾಥದ ಮೈಕೊರೆಯುವ ಚಳಿಯಲ್ಲಿ ಧ್ಯಾನ, ಪ್ರಾರ್ಥನೆ ಮಾಡುತ್ತಿರುವುದಾಗಿ ಪಂಚಮಸಾಲಿ ಜಗದ್ಗುರು ಪೀಠದ ವಚನಾನಂದ ಸ್ವಾಮೀಜಿ ತಿಳಿಸಿದ್ದಾರೆ.
ತಮ್ಮ ಫೇಸ್ಬುಕ್ ಖಾತೆಯಲ್ಲಿ ನಸುಕಿನ 4.30ರಿಂದ 5.30ರವೆಗಿನ ಬ್ರಾಹ್ಮಿ ಮುಹೂರ್ತದಲ್ಲಿ ಧ್ಯಾನದಲ್ಲಿ ನಿರತರಾಗಿರುವ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸುದ್ದಿ ಮಾಡುತ್ತಿದೆ. ಜೊತೆಗೆ ಮಾತೃಭೂಮಿಯ ಒಳಿತಿಗಾಗಿಯೂ ಪ್ರಾರ್ಥನೆ ಸಲ್ಲಿಸಿರುವುದಾಗಿಯೂ ತಿಳಿಸಿದ್ದಾರೆ.
ಬ್ರಾಹ್ಮಿ ಮುಹೂರ್ತ ಸಾಧುಗಳಿಗೆ ಮತ್ತು ಋಷಿಗಳಿಗೆ ಅತ್ಯಂತ ಪ್ರಮುಖವಾದುದು. ಬ್ರಾಹ್ಮಿ ಜಾವದಲ್ಲಿ ನಿದ್ರಿಸುವವರು ಪುಣ್ಯ ಗಳಿಸುವ ಅವಕಾಶದಿಂದ ವಂಚಿತರಾಗುತ್ತಾರೆ. ದೀಪಾವಳಿಯ ಹೊತ್ತಲ್ಲಿ ಮಹಾದೇವ ಕೇದಾರನಾಥ ದೇಗುಲದ ಬಳಿ ಕೌಪೀನಧಾರಿಯಾಗಿ ತಪಸ್ಸಿಗೆ ಕೂರುತ್ತಾನೆ.
ಋಷಿಗಳು ಈ ಸಮಯದಲ್ಲಿ ನಾಡಿ ಚಕ್ರಗಳನ್ನು ಸಕ್ರಿಯಗೊಳಿಸಲು ಧ್ಯಾನ, ಪ್ರಾಣಾಯಾಮಗಳಲ್ಲಿ ತೊಡಗಿಕೊಳ್ಳುತ್ತಾರೆ. ಹಿಮಪಾತ, ಚಳಿಗಳ ನಡುವೆ ಪ್ರತಿ ವರ್ಷದಂತೆ ಈ ವರ್ಷವೂ ತಾವು ಕೇದಾರನಾಥದಲ್ಲಿ ಧ್ಯಾನ ಮಾಡುತ್ತಿರುವಾಗಿ ತಿಳಿಸಿದ್ದಾರೆ. ಈ ವಿಡಿಯೋ ಫೇಸ್ಬುಕ್ನಲ್ಲಿ 23ಸಾವಿರಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ.
ಬೆಳಗಾವಿಯ ಅಥಣಿಯಲ್ಲಿ ಜನಿಸಿದ ಅವರು ಚಿಕ್ಕ ವಯಸ್ಸಲ್ಲೇ ಸನ್ಯಾಸ ಸ್ವೀಕರಿಸಿ ಶ್ವಾಸ ಗುರುವೆಂದೇ ಖ್ಯಾತರಾಗಿದ್ದಾರೆ. ತಮ್ಮ ಶ್ವಾಸ ಯೋಗ ಫೌಂಡೇಶನ್ನಿನ ಮೂಲಕ ಪ್ರಾಣಾಯಾಮ, ಯೋಗಕ್ಕೆ ಸಂಬಧಿಸಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಮಾಜಿ ಸಚಿವ ವಿನಯ್ ಕುಲಕರ್ಣಿ ಬಂಧನವಾದಾಗ ಅವರ ಮನೆಗೆ ಭೇಟಿ ನೀಡಿದ ಕಾರಣ ವಚನಾನಂದ ಸ್ವಾಮೀಜಿ ಇತ್ತೀಚೆಗೆ ವಿವಾದಕ್ಕೀಡಾಗಿದ್ದರು.
Published On - 5:14 pm, Mon, 9 November 20