ಪ್ರಧಾನಿ ನರೇಂದ್ರ ಮೋದಿಯವರ ಸಲಹೆಗಾರರಾಗಿ ನಿವೃತ್ತ ಐಎಎಸ್ ಅಧಿಕಾರಿ ಅಮಿತ್ ಖರೆ ಇಂದು ನೇಮಕವಾಗಿದ್ದಾರೆ. ಇವರು 1985ನೇ ಬ್ಯಾಚ್ನ ಐಎಎಸ್ ಅಧಿಕಾರಿಯಾಗಿದ್ದು, ಮಾಹಿತಿ ಮತ್ತು ಪ್ರಸಾರ ಇಲಾಖೆಯ ಮಾಜಿ ಕಾರ್ಯದರ್ಶಿಯಾಗಿದ್ದಾರೆ. ಹಾಗೇ ಉನ್ನತ ಶಿಕ್ಷಣ ಕಾರ್ಯದರ್ಶಿಯಾಗಿದ್ದ ಅವರು ಸೆಪ್ಟೆಂಬರ್ 30ರಂದು ನಿವೃತ್ತರಾಗಿದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿಯವರ ಸಲಹೆಗಾರರಾಗಿ ನೇಮಕವಾಗಿದ್ದಾರೆ.
1985ನೇ ಬ್ಯಾಚ್ನ ಐಎಎಸ್ ಅಧಿಕಾರಿಯಾಗಿರುವ ಅಮಿತ್ ಖರೆಯವರನ್ನು ಪ್ರಧಾನಿ ನರೇಂದ್ರ ಮೋದಿಯವರ ಸಲಹೆಗಾರರನ್ನಾಗಿ ನೇಮಕ ಮಾಡಲು ಕ್ಯಾಬಿನೆಟ್ನ ನೇಮಕಾತಿ ಸಮಿತಿ ಅನುಮೋದನೆ ನೀಡಿದೆ. ಅದರ ಅನ್ವಯ ಇನ್ನುಮುಂದೆ ಅಮಿತ್ ಖರೆ ಪ್ರಧಾನಿ ಸಲಹೆಗಾರರಾಗಿ ಪ್ರಧಾನಮಂತ್ರಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಭಾರತ ಸರ್ಕಾರದ ಕಾರ್ಯದರ್ಶಿಯ ಶ್ರೇಣಿ ಮತ್ತು ಸ್ಕೇಲ್ನಲ್ಲಿ, ಗುತ್ತಿಗೆ ಆಧಾರದ ಅನ್ವಯ ಮತ್ತು ಇತರ ಸಾಮಾನ್ಯ ನಿಯಮಗಳಿಗೆ ಅನುಗುಣವಾಗಿ ಅವರ ನೇಮಕಾತಿ ನಡೆದಿದೆ. ಕಾರ್ಯದರ್ಶಿ ಶ್ರೇಣಿಗೆ ಅನ್ವಯ ಆಗುವ ಎಲ್ಲ ಷರತ್ತುಗಳೂ ಅನ್ವಯ ಆಗುತ್ತವೆ. ಎರಡು ವರ್ಷಗಳ ಅವಧಿಗೆ ಸದ್ಯ ನೇಮಕ ಮಾಡಲಾಗಿದ್ದು, ಮುಂದಿನ ಆದೇಶದವರೆಗೂ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಲಾಗಿದೆ.
ಅಮಿತ್ ಖರೆ ಅತ್ಯಂತ ಸಮರ್ಥ ಅಧಿಕಾರಿಯಾಗಿದ್ದಾರೆ. ಈ ಹಿಂದೆ ಕೆಲಸ ಮಾಡಿದ ವಿಭಾಗಗಳಲ್ಲಿ ತಮ್ಮ ವೃತ್ತಿಪರತೆ ಮತ್ತು ಸಮರ್ಥತೆಯನ್ನು ತೋರಿಸಿದ್ದಾರೆ. ಈ ಹಿಂದೆ ಕಾರ್ಯದರ್ಶಿಯಾಗಿ ಕೆಲಸ ಮಾಡಿದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದಲ್ಲಿ ಡಿಜಿಟಲ್ ಮೀಡಿಯಾ ನಿಯಮಗಳಲ್ಲಿ ಬಹುಮುಖ್ಯ ಬದಲಾವಣೆಗಳನ್ನು ತರಲು ಶ್ರಮಿಸಿದ್ದರು. ಅಷ್ಟೇ ಅಲ್ಲ, ಉನ್ನತ ಶಿಕ್ಷಣ ಕಾರ್ಯದರ್ಶಿಯಾಗಿದ್ದಾಗ ಪ್ರಧಾನಿ ಮೋದಿ ಮಾರ್ಗದರ್ಶನದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಮೇಲ್ವಿಚಾರಣೆ ನೋಡಿಕೊಂಡಿದ್ದರು.
ಇದನ್ನೂ ಓದಿ: ಏಷ್ಯಾದಲ್ಲೇ ದೊಡ್ಡ ಆರ್ಥಿಕ ಶಕ್ತಿ ಭಾರತ ಎಂದು ಪ್ರಧಾನಿ ನರೇಂದ್ರ ಮೋದಿಯನ್ನೂ ಹೊಗಳಿದ ಅಮೆರಿಕದ ಕಾರ್ಪೊರೇಟ್ ನಾಯಕ
ಶಿಲ್ಪಾ ಶೆಟ್ಟಿ ಮನೆಯಲ್ಲಿ ನವರಾತ್ರಿ ವೈಭವ; ಮಕ್ಕಳಿಗೆ ಕಲಿಸುತ್ತಿರುವ ಪಾಠ ಎಂಥದ್ದು?
Published On - 4:16 pm, Tue, 12 October 21