ರೈಲ್ವೆ ಹಳಿ ಮೇಲೆ ನಿಂತು ಸೆಲ್ಫಿ ತೆಗೆಯುತ್ತಿದ್ದವರಿಗೆ ಡಿಕ್ಕಿ ಹೊಡೆದ ರೈಲು; ಇಬ್ಬರು ಸಾವು, ಇನ್ನೊಬ್ಬನ ಸ್ಥಿತಿ ಗಂಭೀರ

ಈ ಪ್ರದೇಶದಲ್ಲಿ ರೈಲ್ವೆ ಹಳಿಯ ಮೇಲೆ ಹತ್ತುವುದನ್ನು ನಿಷೇಧಿಸಲಾಗಿದೆ. ಹಾಗಿದ್ದಾಗ್ಯೂ ಅನೇಕರು ಇಲ್ಲಿಗೆ ಬಂದು ಫೋಟೋ ತೆಗೆಯಲು ಮುಂದಾಗುತ್ತಾರೆ ಎಂದು ರೈಲ್ವೆ ಸೀನಿಯರ್​ ಸೆಕ್ಷನ್​ ಇಂಜಿನಿಯರ್​ ಬಿಸ್ವಜಿತ್​ ಬಾಲಾ ಹೇಳಿದ್ದಾರೆ. 

ರೈಲ್ವೆ ಹಳಿ ಮೇಲೆ ನಿಂತು ಸೆಲ್ಫಿ ತೆಗೆಯುತ್ತಿದ್ದವರಿಗೆ ಡಿಕ್ಕಿ ಹೊಡೆದ ರೈಲು; ಇಬ್ಬರು ಸಾವು, ಇನ್ನೊಬ್ಬನ ಸ್ಥಿತಿ ಗಂಭೀರ
ಪ್ರಾತಿನಿಧಿಕ ಚಿತ್ರ
Edited By:

Updated on: Feb 13, 2022 | 10:34 AM

ಪ್ರಪಾತದಂಚಿಗೆ ಸೆಲ್ಫಿ(selfie) ತೆಗೆಯಲು ಹೋಗಿ ಜೀವ ಕಳೆದುಕೊಂಡವರು, ರೈಲ್ವೆ ಹಳಿ ಬಳಿ ನಿಂತು ಫೋಟೋ ತೆಗೆಯಲು ಹೋಗಿ ಮೃತಪಟ್ಟ ಉದಾಹರಣೆಗಳು ಸಾಕಷ್ಟಿವೆ. ಇದೀಗ ಮತ್ತೆ ಪಶ್ಚಿಮ ಬಂಗಾಳದ ಪಶ್ಚಿಮ ಮೇದಿನಿಪುರದಲ್ಲಿ (West Medinipur) ಅಂಥದ್ದೇ ಘಟನೆ ನಡೆದಿದೆ. ರೈಲ್ವೆ ಹಳಿಯ ಮೇಲೆ ಸೆಲ್ಫೀ ತೆಗೆಯುತ್ತಿದ್ದ ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದು, ಇನ್ನೊಬ್ಬಾತನ ಸ್ಥಿತಿ ಗಂಭೀರವಾಗಿದೆ.  ಮೇದಿನಿಪುರ ಪಟ್ಟಣದ ಹೊರವಲಯದಲ್ಲಿರುವ, ಕಂಗ್ಸವತಿ ನದಿ ದಡದಲ್ಲಿರುವ ರಂಗಮತಿ ಎಂಬ ಸ್ಥಳಕ್ಕೆ ಒಂದಷ್ಟು ಜನ ಹುಡುಗರು ಪಿಕ್ನಿಕ್​ಗೆ ತೆರಳಿದ್ದರು. ಅಲ್ಲೇ ಒಂದು ರೈಲ್ವೆ ಹಳಿಯೂ ಇದೆ.

ಪಿಕ್ನಿಕ್​ಗೆ ಹೋಗಿ ಫುಲ್ ಮಜಾ ಮಾಡಿದ ಯುವಕರಲ್ಲಿ ಮಿಥುನ್ ಖಾನ್​, ಅಬ್ದುಲ್​ ಖಾನ್​ ಹಾಗೂ ಇನ್ನೊಬ್ಬಾತ ಅಲ್ಲಿಯೇ ಇರುವ ರೈಲ್ವೆ ಹಳಿಯ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳಲು ಶುರು ಮಾಡಿದರು. ಈ ವೇಳೆ ಮೇದಿನಿಪುರದಿಂದ ಹೌರಾಹ್​ಗೆ ಹೋಗುವ ಸ್ಥಳೀಯ ರೈಲು ಅವರಿಗೆ ಬಡಿದಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಈ ರೈಲು ಚಾಲಕ ಒಂದೇ ಸಮನೆ ಹಾರ್ನ್​ ಮಾಡುತ್ತ ಬಂದಿದ್ದರೂ ಕೂಡ ಹುಡುಗರು ಸರಿಯಲಲ್ಲಿ. ಫೋಟೋ ತೆಗೆಯುವುದರಲ್ಲಿ ಮಗ್ನವಾಗಿಬಿಟ್ಟಿದ್ದರು. ರೈಲು ಬಂದು ಡಿಕ್ಕಿ ಹೊಡೆದ ರಭಸಕ್ಕೆ ಹುಡುಗರು ಹಳಿಯಿಂದ ಹಾರಿ ಬಿದ್ದಿದ್ದಾರೆ ಎಂದು ಹೇಳಲಾಗಿದೆ.  ಮಿಥುನ್​ ಮತ್ತು ಅಬ್ದುಲ್​ ಇಬ್ಬರೂ ಮೃತಪಟ್ಟಿದ್ದಾರೆ.

ಘಟನೆ ನಡೆಯುತ್ತಿದ್ದಂತೆ ರೈಲ್ವೆ ಡಿಪಾರ್ಟ್​ಮೆಂಟ್​ನ ವಿವಿಧ ಅಧಿಕಾರಿಗಳು ಅಲ್ಲಿಗೆ ಭೇಟಿ ಕೊಟ್ಟಿದ್ದಾರೆ. ಈ ಪ್ರದೇಶದಲ್ಲಿ ರೈಲ್ವೆ ಹಳಿಯ ಮೇಲೆ ಹತ್ತುವುದನ್ನು ನಿಷೇಧಿಸಲಾಗಿದೆ. ಹಾಗಿದ್ದಾಗ್ಯೂ ಅನೇಕರು ಇಲ್ಲಿಗೆ ಬಂದು ಫೋಟೋ ತೆಗೆಯಲು ಮುಂದಾಗುತ್ತಾರೆ ಎಂದು ರೈಲ್ವೆ ಸೀನಿಯರ್​ ಸೆಕ್ಷನ್​ ಇಂಜಿನಿಯರ್​ ಬಿಸ್ವಜಿತ್​ ಬಾಲಾ ಹೇಳಿದ್ದಾರೆ.  ಹಾಗೇ, ಈ ಹುಡುಗರು ರೈಲಿನ ಹಾರ್ನ್​ ಕೇಳಿದರೂ ಸರಿಯಲೂ ಇಲ್ಲ, ದೂರ ಓಡಲೂ ಇಲ್ಲ. ಹೀಗಾಗಿ ಅಪಘಾತವಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Gehraiyaan: ‘ಗೆಹರಾಯಿಯಾ’, ‘ಖಿಲಾಡಿ’ಗೂ ಪೈರಸಿ ಕಾಟ; ತೆರೆ ಕಂಡ ಒಂದೇ ದಿನಕ್ಕೆ ಲೀಕ್ ಆಯ್ತು ಚಿತ್ರಗಳು

Published On - 9:53 am, Sun, 13 February 22