ಟೀಕಿಸುವ ಭರದಲ್ಲಿ ತಪ್ಪು ಮಾಡಬೇಡಿ; ಶಶಿ ತರೂರ್ ಇಂಗ್ಲಿಷ್ ತಿದ್ದಿದ ಕೇಂದ್ರ ಸಚಿವ ರಾಮದಾಸ್ ಅಠಾವಳೆ
ಸಂಸತ್ತಿನಲ್ಲಿ ಎದ್ದುನಿಂತ ನಿರ್ಮಲಾ ಸೀತಾರಾಮನ್ ಹಿಂದೆಯೇ ಸಚಿವ ರಾಮದಾಸ್ ಅಠಾವಳೆ ಕುಳಿತಿದ್ದು, ಅವರು ತಮ್ಮ ಕೈಯಿಂದ ಮೂಗು-ಬಾಯಿ ಮುಚ್ಚಿಕೊಂಡು, ಕಣ್ಣು ದೊಡ್ಡದಾಗಿ ಬಿಟ್ಟಿರುವ ಫೋಟೋವೊಂದನ್ನು ಶಶಿ ತರೂರ್ ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ಸಂಸದ ಶಶಿ ತರೂರ್ (Shashi Tharoor) ಅವರಿಗೆ ಇಂಗ್ಲಿಷ್ ಭಾಷೆ ಮೇಲೆ ಅಪಾರ ಹಿಡಿತವಿದೆ. ಹೊಸ ಶಬ್ದಗಳನ್ನು ಪರಿಚಯಿಸುತ್ತಾರೆ. ಇಂಗ್ಲಿಷ್ನಲ್ಲಿ ಅಗಾಧ ಪಾಂಡಿತ್ಯ ಹೊಂದಿರುವವರು ಎಂದೇ ಖ್ಯಾತರಾಗಿದ್ದಾರೆ. ಆದರೆ ಅಂಥ ಶಶಿ ತರೂರ್ ಕೂಡ ಇಂಗ್ಲಿಷ್ನಲ್ಲಿ ಈಗ ತಪ್ಪು ಮಾಡಿದ್ದಾರೆ ಮತ್ತು ಕೇಂದ್ರ ಸಚಿವ ರಾಮ್ದಾಸ್ ಅಠಾವಳೆ (Ramdas Athawale)ಅದನ್ನು ತಿದ್ದಿದ್ದಾರೆ. ಅಷ್ಟಕ್ಕೂ ಇದೆಲ್ಲ ಆಗಿದ್ದು, ರಾಜಕೀಯ ಸಂಘರ್ಷದಲ್ಲಿ.
ಇತ್ತೀಚೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಿದ್ದರು. ಈ ವೇಳೆ ನಿರ್ಮಲಾ ಸೀತಾರಾಮನ್ ಭಾರತದ ಆರ್ಥಿಕತೆ ಬಗ್ಗೆ ಹೇಳಿಕೆ ನೀಡುತ್ತಿದ್ದರು. ಸಂಸತ್ತಿನಲ್ಲಿ ಎದ್ದುನಿಂತ ನಿರ್ಮಲಾ ಸೀತಾರಾಮನ್ ಹಿಂದೆಯೇ ಸಚಿವ ರಾಮದಾಸ್ ಅಠಾವಳೆ ಕುಳಿತಿದ್ದು, ಅವರು ತಮ್ಮ ಕೈಯಿಂದ ಮೂಗು-ಬಾಯಿ ಮುಚ್ಚಿಕೊಂಡು, ಕಣ್ಣು ದೊಡ್ಡದಾಗಿ ಬಿಟ್ಟಿರುವ ಫೋಟೋವೊಂದನ್ನು ಶಶಿ ತರೂರ್ ಟ್ವೀಟ್ ಮಾಡಿಕೊಂಡಿದ್ದು, ಅದಕ್ಕೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾತುಗಳನ್ನು ಸ್ವತಃ ಅಠಾವಳೆಯವರೇ ನಂಬುತ್ತಿಲ್ಲ ಎಂದು ಕ್ಯಾಪ್ಷನ್ ಕೊಟ್ಟಿದ್ದರು. Nearly two-hour rely to the Bydget debate. The stunned and incredulous expression on Minister Ramdas Athawale’s face says it all: even the Treasury benches can’t believe FinMin Nirmala Sitharaman’s claims about the economy and her Budget! ಎಂದು ಇಂಗ್ಲಿಷ್ನಲ್ಲಿ ಟ್ವೀಟ್ ಮಾಡಿದ್ದರು. ಇದರ ಅರ್ಥ ಬಜೆಟ್ ಡಿಬೇಟ್ನಲ್ಲಿ ನಿರ್ಮಲಾ ಸೀತಾರಾಮನ್ ಅವರು ಸುಮಾರು ಎರಡು ತಾಸುಗಳ ಪ್ರತಿಕ್ರಿಯೆ ನೀಡಿದ್ದಾರೆ. ಸಚಿವ ಅಠಾವಳೆಯವರ ಮುಖದ ಮೇಲೆ ಮೂಡಿದ ದಿಗ್ಭ್ರಮೆ ಮತ್ತು ಅಪನಂಬಿಕೆಯೆಂಬ ಭಾವ ಎಲ್ಲವನ್ನೂ ಹೇಳುತ್ತಿದೆ. ಸಂಸತ್ತಿನಲ್ಲಿ ಮುಂದೆ ಕುಳಿತುಕೊಳ್ಳುವ ಸಚಿವರೂ ಕೂಡ ನಿರ್ಮಲಾ ಸೀತಾರಾಮನ್ರ ಬಜೆಟ್ ಮತ್ತು ಆರ್ಥಿಕತೆಯ ಮೇಲಿನ ಅವರ ಪ್ರತಿಪಾದನೆಯನ್ನು ನಂಬುತ್ತಿಲ್ಲ ಎಂದು ಶಶಿ ತರೂರ್ ಹೇಳಿದ್ದಾರೆ.
ಆದರೆ ಶಶಿ ತರೂರ್ ಟ್ವೀಟ್ನಲ್ಲಿ ತಪ್ಪಿದೆ ಎಂದು ರಾಮದಾಸ್ ಅಠಾವಳೆ ಹೇಳಿದ್ದಾರೆ. ಅಷ್ಟೇ ಅಲ್ಲ ಅದನ್ನು ತಿದ್ದುವ ಪ್ರಯತ್ನವನ್ನೂ ಮಾಡಿದ್ದಾರೆ. ಶಶಿ ತರೂರ್ ಜೀ, ಅನಗತ್ಯ ಹೇಳಿಕೆಗಳು, ಪ್ರತಿಪಾದನೆಗಳನ್ನು ಮಾಡುವಾಗ ತಪ್ಪಾಗುವುದು ಹೆಚ್ಚು ಎಂದು ದೊಡ್ಡವರು ಹೇಳುತ್ತಾರೆ. ಹಾಗೇ, ನೀವು ಮಾಡಿದ ಟ್ವೀಟ್ನಲ್ಲಿ Bydget ಎಂದು ಬರೆದಿದ್ದೀರಿ, ಆದರೆ ಅದು BUDGET. ಹಾಗೇ, ಇನ್ನೊಂದೆಡೆ rely ಎಂದು ಬರೆದುಕೊಂಡಿದ್ದೀರಿ, ಅದು Reply ಎಂಬುದು ಸರಿಯಾದ ಪ್ರಯೋಗ. ಇರಲಿ ಬಿಡಿ, ನಾವು ಅರ್ಥ ಮಾಡಿಕೊಳ್ಳುತ್ತೇವೆ ಎಂದು ತಿರುಗೇಟು ನೀಡಿದ್ದಾರೆ.
Dear Shashi Tharoor ji, they say one is bound to make mistakes while making unnecessary claims and statements.
It’s not “Bydget” but BUDGET.
Also, not rely but “reply”!
Well, we understand! https://t.co/sG9aNtbykT
— Dr.Ramdas Athawale (@RamdasAthawale) February 10, 2022
ಇದನ್ನೂ ಓದಿ: ‘ಎಷ್ಟೇ ಮೈ ತೋರಿಸಿದರೂ ಈ ಕೆಟ್ಟ ಸಿನಿಮಾ ಗೆಲ್ಲಲ್ಲ’; ದೀಪಿಕಾ ಚಿತ್ರದ ಬಗ್ಗೆ ಕಂಗನಾ ಖಡಕ್ ವಿಮರ್ಶೆ