₹ 200 ಕೋಟಿ ಮೌಲ್ಯದ 2 ಲಕ್ಷ ಕೆಜಿ ಗಾಂಜಾಕ್ಕೆ ಬೆಂಕಿ ಹಚ್ಚಿ ನಾಶ ಮಾಡಿದ ಆಂಧ್ರಪ್ರದೇಶ ಪೊಲೀಸ್; ವಿಡಿಯೊ ನೋಡಿ
ಒಡಿಶಾದ 23 ಜಿಲ್ಲೆಗಳು ಮತ್ತು ವಿಶಾಖಪಟ್ಟಣಂ ಜಿಲ್ಲೆಯ 11 ಮಂಡಲಗಳಲ್ಲಿ ಅಕ್ರಮ ಮಾವೋವಾದಿಗಳು ಗಾಂಜಾ ಕೃಷಿಯನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂದು ಪೊಲೀಸ್ ಮಹಾನಿರ್ದೇಶಕ ಗೌತಮ್ ಸವಾಂಗ್ ಹೇಳಿದ್ದಾರೆ.
ವಿಶಾಖಪಟ್ಟಣಂ: ₹ 200 ಕೋಟಿಗೂ ಅಧಿಕ ಮೌಲ್ಯದ ಎರಡು ಲಕ್ಷ ಕೆಜಿ ಗಾಂಜಾವನ್ನು (Ganja) ನಾಶಪಡಿಸಿರುವುದಾಗಿ ಆಂಧ್ರಪ್ರದೇಶ (Andhra Pradesh) ಪೊಲೀಸರು ಶನಿವಾರ ತಿಳಿಸಿದ್ದಾರೆ. ಕಳೆದೆರಡು ವರ್ಷಗಳಲ್ಲಿ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ವಶಪಡಿಸಿದ ಮಾದಕ ವಸ್ತು (narcotic) ಇದು ಎಂದು ಅವರು ಹೇಳಿದರು. ಒಡಿಶಾದ 23 ಜಿಲ್ಲೆಗಳು ಮತ್ತು ವಿಶಾಖಪಟ್ಟಣಂ ಜಿಲ್ಲೆಯ 11 ಮಂಡಲಗಳಲ್ಲಿ ಅಕ್ರಮ ಮಾವೋವಾದಿಗಳು ಗಾಂಜಾ ಕೃಷಿಯನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂದು ಪೊಲೀಸ್ ಮಹಾನಿರ್ದೇಶಕ ಗೌತಮ್ ಸವಾಂಗ್ ಹೇಳಿದ್ದಾರೆ. ‘ಪರಿವರ್ತನ್’ ಕಾರ್ಯಾಚರಣೆಯ ಭಾಗವಾಗಿ 406 ವಿಶೇಷ ಪೊಲೀಸ್ ತಂಡಗಳು 11 ಮಂಡಲಗಳ 313 ಗ್ರಾಮಗಳಲ್ಲಿ ಗಾಂಜಾ ತೋಟಗಳನ್ನು ನಾಶಪಡಿಸಿದವು. ಆಂಧ್ರ-ಒಡಿಶಾ ಗಡಿಯಲ್ಲಿ ವಿವಿಧ ರಾಜ್ಯಗಳ ಹಲವಾರು ಗುಂಪುಗಳು ಗಾಂಜಾ ಕೃಷಿ ಮತ್ತು ಮಾದಕ ದ್ರವ್ಯದ ಅಕ್ರಮ ಸಾಗಣೆಯಲ್ಲಿ ತೊಡಗಿವೆ ಎಂದು ಅವರು ಹೇಳಿದ್ದಾರೆ. ಗಿಡ ಬೆಳೆಸಿದ್ದಕ್ಕಾಗಿ 1,500 ಜನರನ್ನು ಬಂಧಿಸಲಾಗಿದೆ ಮತ್ತು 577 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅವರು ಹೇಳಿದರು. ಗಾಂಜಾ ಸಾಗಾಟದಲ್ಲಿ ತೊಡಗಿದ್ದ 314 ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
Historic occasion in the annals of #APPolice: An unprecedented 2La Kgs of seized Ganja Destruction by #APPolice along with Drug Disposable Committee, Special Enforcement Bureau at Koduru(V),Anakapalli(M), #Visakhapatnam District.#MissionDrugFreeIndia @narcoticsbureau pic.twitter.com/IMHlPmilP2
— Andhra Pradesh Police (@APPOLICE100) February 12, 2022
ಮಾದವಸ್ತುಗಳನ್ನು ಗುಡ್ಡೆಹಾಕಿ ಸುಡುತ್ತಿರುವ ವಿಡಿಯೊವನ್ನು ಆಂಧ್ರಪ್ರದೇಶ ಪೊಲೀಸರು ಟ್ವೀಟ್ ಮಾಡಿದ್ದು, ಆಂಧ್ರಪ್ರದೇಶದ ಪೊಲೀಸರಿಗೆ ಐತಿಹಾಸಿಕ ಕ್ಷಣ. 2 ಲಕ್ಷ ಕೆಜಿ ಗಾಂಜಾವನ್ನು ಆಂಧ್ರ ಪೊಲೀಸರ ಜತೆ ಮಾದಕ ವಸ್ತು ನಿರ್ಮೂಲನ ಸಮಿತಿ, ಕೊಡೂರು ಮತ್ತು ಅನಕಪಲ್ಲಿ ವಿಶೇಷ ಜಾರಿ ಬ್ಯುರೊ ನಾಶಮಾಡುತ್ತಿರುವುದಾಗಿ ಟ್ವೀಟ್ ನಲ್ಲಿ ಹೇಳಿದೆ.
ಇದನ್ನೂ ಓದಿ: ರಾಹುಲ್ ಗಾಂಧಿ ರಾಜೀವ್ ಗಾಂಧಿಯವರ ಮಗನೋ ಅಲ್ಲವೋ ಎಂಬುದಕ್ಕೆ ಪುರಾವೆ ಕೇಳಿದ್ದೇವಾ?: ಅಸ್ಸಾಂ ಸಿಎಂ