ಪಕ್ಕದ ಮನೆಯ ಟೆರೇಸ್ ಮೇಲೆ ಆಟವಾಡಲು ಹೋಗಿದ್ದ ಇಬ್ಬರು ಬಾಲಕಿಯರ ನಿಗೂಢ ಸಾವು
ಪಕ್ಕದ ಮನೆಯ ಟೆರೇಸ್ನಲ್ಲಿ ಆಡವಾಡಲು ಹೋಗಿದ್ದ ಇಬ್ಬರು ಬಾಲಕಿಯರು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ, ಟೆರೇಸ್ ಮೇಲೆ ಬಿದ್ದಿದ್ದ ಚಾಕೊಲೇಟ್ ತಿಂದು ಇಬ್ಬರು ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ಕಡಧಾಮ್ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಧನಾ (7) ಮತ್ತು ಅವರ ಸಹೋದರಿ ಶಾಲಿನಿ (4) ಅವರು ಬೆಳಗ್ಗೆ ಚಾಕೊಲೇಟ್ನ್ನು ಸೇವಿಸಿದ ನಂತರ ಅಸ್ವಸ್ಥರಾಗಿದ್ದರು. ಪೋಷಕರು ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಆದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಪಕ್ಕದ ಮನೆಯ ಇನ್ನೂ ಇಬ್ಬರು ಬಾಲಕಿಯರು ಕೂಡ ಚಾಕೊಲೇಟ್ ಅನ್ನು ಸೇವಿಸಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗ್ಗೆ 6 ಗಂಟೆ ವೇಳೆಗೆ ಘಟನೆ ನಡೆದಿದೆ, ಟೆರೇಸ್ ಮೇಲೆ ಬಿದ್ದಿದ್ದ ಚಾಕೊಲೇಟ್ ಅನ್ನು ನಾಲ್ವರು ತಿಂದಿದ್ದರು, ತಕ್ಷಣವೇ ಹೊಟ್ಟೆ ನೋಡು ಶುರುವಾಗಿತ್ತು. ಎದೆ ಉರಿಯೂ ಇತ್ತು. ಬಾಲಕಿಯರ ಸ್ಥಿತಿ ಕಂಡು ಪೋಷಕರು ಕಂಗಾಲಾಗಿದ್ದರು.
ಮತ್ತಷ್ಟು ಓದಿ: ಮುಂಬೈ ರೈಲು ನಿಲ್ದಾಣದಲ್ಲಿ ವ್ಯಕ್ತಿಯನ್ನು ಥಳಿಸಿ, ಎದುರಿನಿಂದ ಬರುತ್ತಿದ್ದ ರೈಲಿನ ಕೆಳಗೆ ತಳ್ಳಿದ್ರು
ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಕ್ಕ ಪಕ್ಕದ ಮನೆಯವರು ವಿಷಪೂರಿತ ಮಿಠಾಯಿಯನ್ನು ಎಸೆದಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ. ಮರಣೋತ್ತರ ಪರೀಕ್ಷೆ ಬಳಿಕವೇ ನಿಜವಾದ ಕಾರಣ ತಿಳಿದುಬರಲಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ