2002 Gujarat Riots: ನರೋಡಾ ಗಾಮ್ ಹತ್ಯಾಕಾಂಡ ಪ್ರಕರಣ, ಎಲ್ಲಾ ಆರೋಪಿಗಳ ಬಿಡುಗಡೆಗೆ ಕೋರ್ಟ್​ ಆದೇಶ

|

Updated on: Apr 20, 2023 | 6:29 PM

11 ಮುಸ್ಲಿಮರ ನರೋಡಾ ಗಾಮ್ ಹತ್ಯಾಕಾಂಡಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯವು  ಬಿಜೆಪಿಯ ಮಾಯಾ ಕೊಡ್ನಾನಿ ಸೇರಿ ಎಲ್ಲಾ ಆರೋಪಿಗಳನ್ನು ಬಿಡುಗಡೆ ಮಾಡುವಂತೆ ಕೋರ್ಟ್​ ಆದೇಶ ನೀಡಿದೆ. 

2002 Gujarat Riots: ನರೋಡಾ ಗಾಮ್ ಹತ್ಯಾಕಾಂಡ ಪ್ರಕರಣ, ಎಲ್ಲಾ ಆರೋಪಿಗಳ ಬಿಡುಗಡೆಗೆ ಕೋರ್ಟ್​ ಆದೇಶ
ಮಾಯಾ ಕೊಡ್ನಾನಿ
Follow us on

ಗುಜರಾತ್: 2002ರ ಗುಜರಾತ್ ಗಲಭೆಯಲ್ಲಿ (2002 Gujarat Riots) 11 ಮುಸ್ಲಿಮರ ನರೋಡಾ ಗಾಮ್ ಹತ್ಯಾಕಾಂಡಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯವು  ಬಿಜೆಪಿಯ ಮಾಯಾ ಕೊಡ್ನಾನಿ ಸೇರಿ ಎಲ್ಲಾ ಆರೋಪಿಗಳನ್ನು ಇಂದು (ಏ.20) ಬಿಡುಗಡೆ ಮಾಡುವಂತೆ ಕೋರ್ಟ್​ ಆದೇಶ ನೀಡಿದೆ. 2002ರ ಗುಜರಾತ್ ಗಲಭೆಯಲ್ಲಿ ನರೋಡಾ ಗಾಮ್ ಪ್ರಕರಣದಲ್ಲಿ ಖುಲಾಸೆಗೊಂಡಿರುವ ಗುಜರಾತ್​​ನ ಮಾಜಿ ಸಚಿವೆ ಮತ್ತು ಬಿಜೆಪಿ ನಾಯಕಿ ಮಾಯಾ ಕೊಡ್ನಾನಿ ಮತ್ತು ಬಜರಂಗದಳದ ಬಾಬು ಬಜರಂಗಿ ಸೇರಿದಂತೆ 68 ಆರೋಪಿಗಳನ್ನು ಬಿಡುಗಡೆ ಮಾಡುವಂತೆ ಆದೇಶವನ್ನು ಕೋರ್ಟ್​ ಆದೇಶ ನೀಡಿದೆ. ಅಹಮದಾಬಾದ್‌ನ ನರೋಡಾ ಗಾಮ್‌ನಲ್ಲಿ ನಾಯಕಿ ಮಾಯಾ ಕೊಡ್ನಾನಿ ಮತ್ತು ಬಜರಂಗದಳದ ಬಾಬು ಬಜರಂಗಿ ಸೇರಿದಂತೆ 68 ಜನ ಮುಸ್ಲಿಂ ಮನೆಗಳಿಗೆ ಬೆಂಕಿ ಹಚ್ಚಿ ಪರಿಣಾಮ 11 ಮಂದಿ ಮುಸ್ಲಿಮರು ಸಾವನ್ನಪ್ಪಿದ್ದು, ಇದು ಕೋಮು ಗಲಭೆ ಪ್ರಕರಣ ಎಂದು ಅಹಮದಾಬಾದ್‌ನ ವಿಶೇಷ ನ್ಯಾಯಾಲಯವು ತೀರ್ಪು ನೀಡಿದೆ.

ಗೃಹ ಸಚಿವ ಅಮಿತ್ ಶಾ ಅವರು 2017ರಲ್ಲಿ ಮಾಯಾ ಕೊಡ್ನಾನಿ ಅವರ ರಕ್ಷಣಾ ಸಾಕ್ಷಿಯಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದರು. 2002ರಲ್ಲಿ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ನೇತೃತ್ವದ ಗುಜರಾತ್ ಸರ್ಕಾರದಲ್ಲಿ ಸಚಿವರಾಗಿದ್ದರು, ಗುಜರಾತ್‌ನ ಗೋದ್ರಾದಲ್ಲಿ ಎಕ್ಸ್‌ಪ್ರೆಸ್​​ಗೆ ಬೆಂಕಿ ಹಚ್ಚಿದ ನಂತರ ಈ ಗಲಭೆಗಳು ಭುಗಿಲೆದ್ದವು. ಇದೀಗ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ. 97 ಜನರನ್ನು ಕಗ್ಗೊಲೆ ಮಾಡಿದ ನರೋಡಾ ಪಾಟಿಯಾ ಗಲಭೆ ಪ್ರಕರಣದಲ್ಲಿ ಎಂಎಸ್ ಕೊಡ್ನಾನಿ ಅವರನ್ನು ದೋಷಿ ಎಂದು ಘೋಷಿಸಲಾಯಿತು ಮತ್ತು ಅವರಿಗೆ 28 ​​ವರ್ಷಗಳ ಕಾಲ ಶಿಕ್ಷೆ ವಿಧಿಸಲಾಯಿತು. ನಂತರ ಅವರನ್ನು ಗುಜರಾತ್ ಹೈಕೋರ್ಟ್ ಬಿಡುಗಡೆಗೊಳಿಸಿತು.

ನರೋಡಾ ಗಾಮ್‌ನಲ್ಲಿ ನಡೆದ ಹತ್ಯಾಕಾಂಡವು 2002ರ ಒಂಬತ್ತು ಪ್ರಮುಖ ಕೋಮುಗಲಭೆ ಪ್ರಕರಣಗಳಲ್ಲಿ ಒಂದಾಗಿದ್ದು, ವಿಶೇಷ ತಂಡದಿಂದ ತನಿಖೆ ನಡೆಸಲಾಯಿತು ಮತ್ತು ವಿಶೇಷ ನ್ಯಾಯಾಲಯಗಳು ವಿಚಾರಣೆ ನಡೆಸಿದ್ದವು. ಮಾಜಿ ಸಚಿವೆ ಮಾಯಾ ಕೊಡ್ನಾನಿ ಮತ್ತು ಬಜರಂಗದಳ ನಾಯಕ ಬಾಬು ಬಜರಂಗಿ ಕೊಲೆ, ಕ್ರಿಮಿನಲ್ ಪಿತೂರಿ, ಗಲಭೆ ಮತ್ತು ಬೆಂಕಿ ಹಚ್ಚಿದ ಆರೋಪಗಳನ್ನು ಎದುರಿಸುತ್ತಿದ್ದರು.  ಏಳು ನ್ಯಾಯಾಧೀಶರು ಪ್ರಕರಣವನ್ನು ಆಲಿಸಿದ್ದು. ಪ್ರಕರಣದ ಅಂತಿಮ ವಿಚಾರಣೆಯು ಮೂವರು ನ್ಯಾಯಾಧೀಶರ ಮುಂದೆ ನಡೆಯಿತು. ವಾದ ಆಲಿಸಿದ ಇಬ್ಬರು ನ್ಯಾಯಮೂರ್ತಿಗಳ ನಿವೃತ್ತಿಯ ನಂತರ ಈ ಪ್ರಕರಣ ಮತ್ತೆ ವಿಚಾರಣೆ ಬಂದಿತು.

ಇದನ್ನೂ ಓದಿ: Gujarat Riots 2002: ಗುಜರಾತ್​ ಗಲಭೆಯಲ್ಲಿ ಮೋದಿಗೆ ಕ್ಲೀನ್​ಚಿಟ್ ಪ್ರಶ್ನಿಸಿ ಅರ್ಜಿ; ಸುಪ್ರೀಂ ಕೋರ್ಟ್​ನಿಂದ ಇಂದು ಮಹತ್ವದ ತೀರ್ಪು

ಅದೇ ದಿನ ನರೋಡಾ ಗಾಮ್‌ನಿಂದ ಮೂರು ಕಿಲೋಮೀಟರ್ ದೂರದಲ್ಲಿ ನಡೆದ ನರೋಡಾ ಪಾಟಿಯಾ ಹತ್ಯಾಕಾಂಡಕ್ಕಾಗಿ ಕೊಡ್ನಾನಿ ಮತ್ತು ಬಜರಂಗಿ ಸೇರಿದಂತೆ ಐವರು ಆರೋಪಿಗಳನ್ನು ಸಹ ವಿಚಾರಣೆಗೆ ಒಳಪಡಿಸಲಾಯಿತು. ಕೊಡ್ನಾನಿ ಮತ್ತು ಬಜರಂಗಿ ಅವರನ್ನು 2012 ರಲ್ಲಿ ಅಪರಾಧಿಗಳೆಂದು ಘೋಷಿಸಲಾಯಿತು ಮತ್ತು ಜೀವಾವಧಿ ಶಿಕ್ಷೆಗೆ ಗುರಿಪಡಿಸಲಾಯಿತು. ಗುಜರಾತ್ ಉಚ್ಚ ನ್ಯಾಯಾಲಯವು ಬಜರಂಗಿಯ ಅಪರಾಧವನ್ನು ಎತ್ತಿಹಿಡಿದಿದೆ ಆದರೆ ಕೊಡ್ನಾನಿ ಅವರನ್ನು ಖುಲಾಸೆಗೊಳಿಸಿತು.

Published On - 6:07 pm, Thu, 20 April 23