Gujarat Riots 2002: ಗುಜರಾತ್​ ಗಲಭೆಯಲ್ಲಿ ಮೋದಿಗೆ ಕ್ಲೀನ್​ಚಿಟ್ ಪ್ರಶ್ನಿಸಿ ಅರ್ಜಿ; ಸುಪ್ರೀಂ ಕೋರ್ಟ್​ನಿಂದ ಇಂದು ಮಹತ್ವದ ತೀರ್ಪು

2002ರ ಗುಜರಾತ್ ಗಲಭೆ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಕ್ಲೀನ್ ಚಿಟ್ ನೀಡಿದ್ದನ್ನು ಪ್ರಶ್ನಿಸಿ ಕಾಂಗ್ರೆಸ್ ಮಾಜಿ ಸಂಸದ ಇಶಾನ್ ಜಫ್ರಿ ಅವರ ಪತ್ನಿ ಜಾಕಿಯಾ ಜಫ್ರಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ಬಗ್ಗೆ ಇಂದು ತೀರ್ಪು ಪ್ರಕಟವಾಗಲಿದೆ.

Gujarat Riots 2002: ಗುಜರಾತ್​ ಗಲಭೆಯಲ್ಲಿ ಮೋದಿಗೆ ಕ್ಲೀನ್​ಚಿಟ್ ಪ್ರಶ್ನಿಸಿ ಅರ್ಜಿ; ಸುಪ್ರೀಂ ಕೋರ್ಟ್​ನಿಂದ ಇಂದು ಮಹತ್ವದ ತೀರ್ಪು
ನರೇಂದ್ರ ಮೋದಿImage Credit source: Hindustan Times
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Jun 24, 2022 | 9:46 AM

ನವದೆಹಲಿ: 2002ರ ಗುಜರಾತ್​ ಗಲಭೆಯ (Gujarat Violence) ಕುರಿತು ಆಗಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರಿಗೆ (Narendra Modi) ಎಸ್‌ಐಟಿ ನೀಡಿದ್ದ ಕ್ಲೀನ್‌ಚಿಟ್‌ ಅನ್ನು ಪ್ರಶ್ನಿಸಿ ಜಾಕಿಯಾ ಜಫ್ರಿ (Zakia Jafri) ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್‌ (Supreme Court) ಇಂದು ಬೆಳಗ್ಗೆ 10.30ಕ್ಕೆ ಮಹತ್ವದ ತೀರ್ಪು ನೀಡಲಿದೆ. ನ್ಯಾಷನಲ್ ಹೆರಾಲ್ಡ್​ ಪ್ರಕರಣದಲ್ಲಿ (National Herald Case) ರಾಹುಲ್ ಗಾಂಧಿ ವಿಚಾರಣೆ ನಡೆಯುತ್ತಿರುವ ನಡುವೆಯೇ 20 ವರ್ಷಗಳ ಹಿಂದಿನ ಗುಜರಾತ್ ದಂಗೆ ಪ್ರಕರಣವೂ ಮತ್ತೆ ಮುನ್ನೆಲೆಗೆ ಬಂದಿದೆ.

2002ರ ಗುಜರಾತ್ ಗಲಭೆ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಕ್ಲೀನ್ ಚಿಟ್ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ಬಗ್ಗೆ ಇಂದು ತೀರ್ಪು ಪ್ರಕಟವಾಗಲಿದೆ. ಕಾಂಗ್ರೆಸ್ ಪಕ್ಷದ ಮಾಜಿ ಸಂಸದ ಇಶಾನ್ ಜಫ್ರಿ ಅವರ ಪತ್ನಿ ಜಾಕಿಯಾ ಜಫ್ರಿ ಸಲ್ಲಿಸಿರುವ ಅರ್ಜಿ ಬಗ್ಗೆ ಇಂದು ತೀರ್ಪು ಪ್ರಕಟವಾಗಲಿದೆ.

ಇದನ್ನೂ ಓದಿ: ವ್ಯತ್ಯಾಸ ನೋಡಿ!; ED ನೋಟಿಸ್​ಗೆ ಹೋರಾಟಕ್ಕೆ ಕರೆ ಕೊಟ್ಟ ರಾಹುಲ್ ಗಾಂಧಿ: 2010ರಲ್ಲಿ SIT ತನಿಖೆಗೆ ಸಹಕರಿಸಿದ್ದ ಮೋದಿ

ಸುಪ್ರೀಂ ಕೋರ್ಟ್​ ನ್ಯಾಯಮೂರ್ತಿಗಳಾದ ಎಎಂ ಖಾನ್ವಿಲ್ಕರ್, ದಿನೇಶ್ ಮಾಹೇಶ್ವರಿ ಮತ್ತು ಸಿಟಿ ರವಿಕುಮಾರ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ನ್ಯಾಯಪೀಠವು ಗುಜರಾತ್ ಹತ್ಯಾಕಾಂಡದ ಹಿಂದಿನ ಪಿತೂರಿಯನ್ನು ತನಿಖೆ ಮಾಡಬೇಕೆಂದು 2021ರ ಡಿಸೆಂಬರ್ 9ರಂದು ಜಾಕಿಯಾ ಜಫ್ರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ತೀರ್ಪನ್ನು ಕಾಯ್ದಿರಿಸಿತ್ತು. ಆ ತೀರ್ಪು ಇಂದು ಹೊರಬೀಳಲಿದೆ.

ಜಾಕಿಯಾ ಜಫ್ರಿ ಪರ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಗುಜರಾತ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಹಲವು ದಿನಗಳ ಕಾಲ ವಾದ ಮಂಡಿಸಿದ್ದರು. ಹಿರಿಯ ವಕೀಲ ಮುಕುಲ್ ರೋಹ್ಟಗಿ ಎಸ್​ಐಟಿ ಪರವಾಗಿ ವಾದ ಮಂಡಿಸಿದ್ದರು. ಸಾಲಿಟರ್ ಜನರಲ್ ಆಫ್ ಇಂಡಿಯಾ ತುಷಾರ್ ಮೆಹ್ತಾ ಗುಜರಾತ್ ಸರ್ಕಾರದ ಪರವಾಗಿ ವಾದ ಮಂಡಿಸಿ, ಈ ಅರ್ಜಿಯನ್ನು ವಿರೋಧಿಸಿದ್ದರು.

Published On - 9:43 am, Fri, 24 June 22