2003ರ ಮಾನವ ಕಳ್ಳಸಾಗಣೆ ಪ್ರಕರಣ: ಗಾಯಕ ದಲೇರ್ ಮೆಹಂದಿಗೆ ಜಾಮೀನು

| Updated By: ರಶ್ಮಿ ಕಲ್ಲಕಟ್ಟ

Updated on: Sep 15, 2022 | 6:57 PM

Singer Daler Mehndi ಜುಲೈ 14 ರಂದು ನ್ಯಾಯಾಲಯವು ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ನಂತರ ಗಾಯಕನನ್ನು ಪಟಿಯಾಲಾ ಜೈಲಿನಲ್ಲಿ ಇರಿಸಲಾಗಿತ್ತು

2003ರ ಮಾನವ ಕಳ್ಳಸಾಗಣೆ ಪ್ರಕರಣ: ಗಾಯಕ ದಲೇರ್ ಮೆಹಂದಿಗೆ ಜಾಮೀನು
ದಲೇರ್ ಮೆಹಂದಿ
Follow us on

2003ರ ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ಜೈಲು ಸೇರಿದ್ದ ಗಾಯಕ ದಲೇರ್ ಮೆಹಂದಿಗೆ  (Daler Mehndi) ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ (Punjab and Haryana High Court) ಗುರುವಾರ ಜಾಮೀನು ನೀಡಿದೆ. ಜುಲೈ 14 ರಂದು ನ್ಯಾಯಾಲಯವು ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ನಂತರ ಗಾಯಕನನ್ನು ಪಟಿಯಾಲಾ ಜೈಲಿನಲ್ಲಿ ಇರಿಸಲಾಗಿತ್ತು. ತನ್ನ ತಂಡದ ಸದಸ್ಯರಂತೆ ಜನರನ್ನು ಅಕ್ರಮವಾಗಿ ವಿದೇಶಕ್ಕೆ ಕಳುಹಿಸಿದ್ದಕ್ಕಾಗಿ ಗಾಯಕನ್ನು ಅಪರಾಧಿ ಎಂದು ಘೋಷಿಸಲಾಗಿತ್ತು.

2003 ಮಾನವ ಕಳ್ಳಸಾಗಣೆ ಪ್ರಕರಣ

2003ರಲ್ಲಿ ದಲೇರ್ ಮೆಹಂದಿ ಮತ್ತು ಅವರ ಸಹೋದರ ಶಂಶೇರ್ ಸಿಂಗ್ ವಿರುದ್ಧ ಒಟ್ಟು 31 ಪ್ರಕರಣಗಳನ್ನು ದಾಖಲಿಸಲಾಗಿದೆ. ಬಕ್ಷೀಶ್ ಸಿಂಗ್ ಎಂಬ ವ್ಯಕ್ತಿ ನೀಡಿದ ದೂರಿನ ಮೇರೆಗೆ ಪಟಿಯಾಲ ಪೊಲೀಸರು ಮೆಹಂದಿ ಸಹೋದರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮೆಹಂದಿ ಸಹೋದರರು  ಅಕ್ರಮವಾಗಿ ಯುಎಸ್‌ಗೆ ವಲಸೆ ಹೋಗಲು ಸಹಾಯ ಮಾಡಲು ‘ಪಾಸ್ಸೇಜ್ ಮನಿ’ ತೆಗೆದುಕೊಂಡಿದ್ದಾರೆ .ಆದರೆ ಅದನ್ನು ಮಾಡಲು ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಇದಲ್ಲದೆ, ಗಾಯಕ ತನ್ನನ್ನು ಕೆನಡಾಕ್ಕೆ ಕರೆದೊಯ್ಯಲು ಹಣವನ್ನು ತೆಗೆದುಕೊಂಡಿದ್ದಾನೆ ಎಂದು ದೂರುದಾರರು ಆರೋಪಿಸಿದ್ದಾರೆ.

ಪಟಿಯಾಲ ನ್ಯಾಯಾಲಯವು ಮಾರ್ಚ್ 16, 2018 ರಂದು ಗಾಯಕನಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ಆದರೆ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಈ ವರ್ಷ ಜುಲೈ 14 ರಂದು, ಪಟಿಯಾಲ ನ್ಯಾಯಾಲಯವು 2018 ರ ತೀರ್ಪನ್ನು ಎತ್ತಿಹಿಡಿದ್ದು ಗಾಯಕನನ್ನು ತಕ್ಷಣವೇ ಬಂಧಿಸುವಂತೆ ಆದೇಶಿಸಿತು.

Published On - 5:29 pm, Thu, 15 September 22