Breaking News ನ್ಯಾಯಾಂಗ ನಿಂದನೆ ಪ್ರಕರಣ: ಯುಟ್ಯೂಬರ್ ಸವುಕ್ಕು ಶಂಕರ್‌ಗೆ 6 ತಿಂಗಳು ಜೈಲು ಶಿಕ್ಷೆ
ನ್ಯಾಯಾಂಗ ನಿಂದನೆ ಮಾಡಿದ ತಮಿಳುನಾಡಿನ ಯುಟ್ಯೂಬರ್ ಸವುಕ್ಕು ಶಂಕರ್‌ಗೆ ಮದ್ರಾಸ್ ಹೈಕೋರ್ಟ್ ಗುರುವಾರ 6 ತಿಂಗಳು ಜೈಲು ಶಿಕ್ಷೆ ವಿಧಿಸಿದೆ.
ಮದ್ರಾಸ್ ಹೈಕೋರ್ಟ್ (Madras High Court) ಇಂದು (ಗುರುವಾರ) ಯುಟ್ಯೂಬರ್ ಸವುಕ್ಕು ಶಂಕರ್ (Savukku Shankar) ನ್ಯಾಯಾಲಯದ ನಿಂದನೆ ಆರೋಪದಲ್ಲಿ ತಪ್ಪಿತಸ್ಥರೆಂದು ಘೋಷಿಸಿತು. ಶಂಕರ್ ವಿರುದ್ಧ ದಾಖಲಿಸಲಾದ ನಿಂದನೆ ಪ್ರಕರಣದಲ್ಲಿ ಅವರಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿತು. ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠದ ನ್ಯಾಯಮೂರ್ತಿ ಜಿಆರ್ ಸ್ವಾಮಿನಾಥನ್ ಅವರು “ಇಡೀ ಉನ್ನತ ನ್ಯಾಯಾಂಗವು ಭ್ರಷ್ಟಾಚಾರದಿಂದ ಕೂಡಿದೆ” ಎಂದು ಹೇಳಿಕೆ ನೀಡಿದ್ದಕ್ಕಾಗಿ ಯೂಟ್ಯೂಬರ್ ವಿರುದ್ಧ ಸ್ವಯಂ ಪ್ರೇರಿತವಾಗಿ ನಿಂದನೆ ಮೊಕದ್ದಮೆ ಹೂಡಿದ್ದರು. ಶಂಕರ್ ತಮ್ಮ ಶಿಕ್ಷೆಯನ್ನು ಸ್ಥಗಿತಗೊಳಿಸುವಂತೆ ನ್ಯಾಯಾಲಯವನ್ನು ಕೋರಿದ್ದು ನ್ಯಾಯಾಲಯವು ಅವರ ಮನವಿಯನ್ನು ನಿರಾಕರಿಸಿದೆ. ಕ್ರಿಮಿನಲ್ ಪ್ರೊಸೀಜರ್ ಸಂಹಿತೆಯ ಸೆಕ್ಷನ್ 389 ಪ್ರಕಾರ ಅಪರಾಧಿ ವ್ಯಕ್ತಿಯು ನ್ಯಾಯಾಲಯದ ತೀರ್ಪನ್ನು ಮೇಲ್ಮನವಿ ಸಲ್ಲಿಸಲು ಯೋಜಿಸುತ್ತಿದ್ದರೆ ಶಿಕ್ಷೆಯನ್ನು ತಡೆಯಲು ಅನುಮತಿಸುತ್ತದೆ. ಮೂರು ವರ್ಷ ಅಥವಾ ಅದಕ್ಕಿಂತ ಕಡಿಮೆ ಜೈಲು ಶಿಕ್ಷೆಗೆ ಒಳಗಾದವರಿಗೆ ಇದನ್ನು ಹೆಚ್ಚಾಗಿ ಅನುಮತಿಸಲಾಗಿದೆ. ಆದರೆ ಹೈಕೋರ್ಟ್ ಶಂಕರ್ ಅವರ ಮನವಿಯನ್ನು ತಿರಸ್ಕರಿಸಿದೆ.
ಶಂಕರ್ ಅವರು ಹೈಕೋರ್ಟ್‌ನ ನ್ಯಾಯಮೂರ್ತಿ ಜಿಆರ್ ಸ್ವಾಮಿನಾಥನ್ ಮತ್ತು ನ್ಯಾಯಮೂರ್ತಿ ಬಿ ಪುಗಲೇಂಧಿ ಮಧುರೈ ಪೀಠದ ಮುಂದೆ ಹಾಜರಾಗಿದ್ದು ನ್ಯಾಯಾಂಗವು “ಭ್ರಷ್ಟಾಚಾರದಿಂದ ಕೂಡಿದೆ” ಎಂಬ ಅವರ ಹೇಳಿಕೆಯಿಂದ ನಾನು ಹಿಂದೆ ಸರಿಯುವುದಿಲ್ಲ ಎಂದಿದ್ದಾರೆ. ನನ್ನ ಕೆಲವು ಹೇಳಿಕೆಗಳನ್ನು ಪ್ರತ್ಯೇಕವಾಗಿ ನೋಡಿದಾಗ ಸಮಸ್ಯೆ ರೀತಿಯಲ್ಲಿ ಕಾಣಿಸಬಹುದು. ಆದರೆ, ಅದರ ಹಿನ್ನೆಲೆಯಲ್ಲಿ ನೋಡಿದಾಗ ಸತ್ಯ ಸ್ಪಷ್ಟವಾಗುತ್ತದೆ. ನ್ಯಾಯಾಂಗದ ಘನತೆಗೆ ಕುಂದು ತರುವುದು ನನ್ನ ಉದ್ದೇಶವಲ್ಲ,” ಎಂದು ಶಂಕರ್ ನ್ಯಾಯಾಲಯದಲ್ಲಿ ಹೇಳಿದ್ದಾರೆ.
ಟ್ವೀಟ್ ಒಂದರಲ್ಲಿ ಶಂಕರ್ ‘ಲಕ್ಷ್ಮಣ ರೇಖೆ ದಾಟಿದ್ದಾರೆ’ ಎಂದು ತಮಿಳುನಾಡು ವಿಜಿಲೆನ್ಸ್ ಇಲಾಖೆಯ ಮಾಜಿ ಅಧಿಕಾರಿಯೊಬ್ಬರು ಹೇಳಿದ ನಂತರ ದ ಹೈಕೋರ್ಟ್ ಮೊದಲ ಬಾರಿ ಶಂಕರ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆಗಳನ್ನು ಪ್ರಾರಂಭಿಸಿತು. ನ್ಯಾಯಮೂರ್ತಿ ಜಿಆರ್ ಸ್ವಾಮಿನಾಥನ್ ಅವರು ಶಂಕರ್ ಅವರ ನಿರ್ದಿಷ್ಟ ಟ್ವೀಟ್ ಅನ್ನು ಉಲ್ಲೇಖಿಸಿದ್ದಾರೆ, ಅಲ್ಲಿ ಯೂಟ್ಯೂಬರ್ ಬಲಪಂಥೀಯ ಯೂಟ್ಯೂಬರ್ ಮರಿಧಾಸ್ ವಿರುದ್ಧದ ಪ್ರಕರಣದಲ್ಲಿ ಅನುಕೂಲಕರ ತೀರ್ಪು ಪಡೆಯಲು ನ್ಯಾಯಾಧೀಶರು ಯಾರನ್ನೋ ಭೇಟಿ ಮಾಡಿದ್ದಾರೆ ಎಂದು ಆರೋಪಿಸಿದ್ದರು.
ಮಾರಿಧಾಸ್ ಪ್ರಕರಣದ ಫಲಿತಾಂಶವು ನಾನು ಭೇಟಿಯಾದೆನ್ನಲಾದ ವ್ಯಕ್ತಿಯಿಂದ ಪ್ರಭಾವಿತವಾಗಿದೆ ಎಂದು ಶಂಕರ್ ಸೂಚಿಸುತ್ತಿದ್ದಾರೆ. ಇದು ಸ್ಪಷ್ಟವಾಗಿ ನ್ಯಾಯಾಂಗವನ್ನು ನಿಂದಿಸುತ್ತಿದೆ. ಮೇಲ್ನೋಟಕ್ಕೆ, ಶಂಕರ್ ಅವರು ಕ್ರಿಮಿನಲ್ ನಿಂದನೆ ಮಾಡಿದ್ದಾರೆ ಎಂದು ನ್ಯಾಯಮೂರ್ತಿ ಸ್ವಾಮಿನಾಥನ್ ಅವರ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣವನ್ನು ಆದೇಶಿಸುವ ಆದೇಶದಲ್ಲಿ ತಿಳಿಸಿದ್ದಾರೆ.
ಇದಾದ ನಂತರ ‘ಸವುಕ್ಕು’ ಶಂಕರ್ ವಿರುದ್ಧ ಎರಡನೇ ಅವಹೇಳನ ಪ್ರಕರಣ ದಾಖಲಾಗಿತ್ತು. ನ್ಯಾಯಮೂರ್ತಿ ಸ್ವಾಮಿನಾಥನ್ ಅವರು ಜುಲೈ 22 ರಂದು ತಮ್ಮ ವಿರುದ್ಧ ಮೊದಲ ನ್ಯಾಯಾಂಗ ನಿಂದನೆ ಪ್ರಕರಣವನ್ನು ದಾಖಲಿಸಿದ ಮೂರು ದಿನಗಳ ನಂತರ, ಶಂಕರ್ ಅವರು ತಮ್ಮ ಯೂಟ್ಯೂಬ್ ಚಾನೆಲ್ ರೆಡ್ ಪಿಕ್ಸ್‌ನಲ್ಲಿ ಇಡೀ ಉನ್ನತ ನ್ಯಾಯಾಂಗವು ಭ್ರಷ್ಟಾಚಾರದಿಂದ ಕೂಡಿದೆ ಎಂದು ಹೇಳಿದ್ದರು.
ಒಬ್ಬರು ವೈಯಕ್ತಿಕ ನ್ಯಾಯಾಧೀಶರು ಅಥವಾ ಒಟ್ಟಾರೆಯಾಗಿ ನ್ಯಾಯಾಲಯದ ಮೇಲೆ ದಾಳಿ ಮಾಡಿದರೆ, ನಿರ್ದಿಷ್ಟ ಪ್ರಕರಣವನ್ನು ಉಲ್ಲೇಖಿಸಿ ಅತವಾ ಉಲ್ಲೇಖಿಸದೆ ಅನಗತ್ಯ ಮತ್ತು ಮಾನಹಾನಿಕರ ಹೇಳಿಕೆಗಳನ್ನು ನೀಡಿದರೆ ಇದು “ನ್ಯಾಯಾಲಯವನ್ನು ಅವಮಾನಿಸುವುದು ಆಗಿದೆ. ಹಾಗಾಗಿ ಇದು ನ್ಯಾಯಾಂಗ ನಿಂದನೆ ಎಂದು ಸುಪ್ರೀಂ ಹೇಳಿರುವುದಾಗಿ ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶರು ಹೇಳಿದ್ದಾರೆ. ಕೆಲವು ದಿನಗಳ ಹಿಂದೆ, ಮದ್ರಾಸ್ ಹೈಕೋರ್ಟ್‌ನ ಮತ್ತೊಂದು ಪೀಠವು ಜಿ ಸ್ಕ್ವೇರ್ ರಿಯಾಲ್ಟರ್‌ಗಳ ಕುರಿತು ಪ್ರತಿಕ್ರಿಯೆ ನೀಡದಂತೆ ಶಂಕರ್‌ಗೆ ತಡೆ ನೀಡಿತ್ತು. ಜಿ ಸ್ಕ್ವೇರ್ ರಿಯಾಲ್ಟರ್ಸ್ ಕಂಪನಿಯು ಶಂಕರ್ ಅವರಿಗೆ ತಡೆಯಾಜ್ಞೆ ನೀಡಬೇಕು ಹಾಗೂ ಸುಮಾರು 1 ಕೋಟಿ ರೂಪಾಯಿ ನಷ್ಟ ಪರಿಹಾರ ಕೋರಿ ಪ್ರಕರಣ ದಾಖಲಿಸಿತ್ತು.
Published On - 5:47 pm, Thu, 15 September 22