ಅತ್ತಿಗೆಯನ್ನು ಕೊಂದು, ಆಕೆಯ ರುಂಡ ಹಿಡಿದು ಪೊಲೀಸರಿಗೆ ಶರಣಾದ ವ್ಯಕ್ತಿ
ಪಶ್ಚಿಮ ಬಂಗಾಳದ ಭಯಾನಕ ಘಟನೆಯೊಂದು ನಡೆದಿದೆ. ತನ್ನ ಅತ್ತಿಗೆಯನ್ನು ಕೊಂದ ವ್ಯಕ್ತಿ ಆಕೆಯ ತಲೆಯನ್ನು ಹಿಡಿದು ಪೊಲೀಸರೆದುರು ಶರಣಾಗಿದ್ದಾನೆ. ಈ ಶಾಕಿಂಗ್ ವಿಡಿಯೋದಲ್ಲಿ ಆ ವ್ಯಕ್ತಿ ಒಂದು ಕೈಯಲ್ಲಿ ಕತ್ತರಿಸಿದ ತಲೆ ಮತ್ತು ಇನ್ನೊಂದು ಕೈಯಲ್ಲಿ ಮಾರಕ ಆಯುಧದೊಂದಿಗೆ ಜನನಿಬಿಡ ರಸ್ತೆಯಲ್ಲಿ ನಡೆದುಕೊಂಡು ಹೋಗುವುದನ್ನು ಕಾಣಬಹುದು.

ಕೊಲ್ಕತ್ತಾ, ಮೇ 31: ಇಂದು ಪಶ್ಚಿಮ ಬಂಗಾಳದಲ್ಲಿ ತನ್ನ ಅತ್ತಿಗೆಯ ಕತ್ತರಿಸಿದ ತಲೆಯೊಂದಿಗೆ ವ್ಯಕ್ತಿಯೊಬ್ಬರು ನಡೆದುಕೊಂಡು ಹೋಗುತ್ತಿರುವ ಆಘಾತಕಾರಿ ಘಟನೆ ನಡೆದಿದೆ. ಈ ಘಟನೆ ಪಶ್ಚಿಮ ಬಂಗಾಳದ ಬಸಂತಿ ಪಟ್ಟಣದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಅತ್ತಿಗೆಯ ಕತ್ತರಿಸಿದ ತಲೆಯೊಂದಿಗೆ ವ್ಯಕ್ತಿ ನಡೆದುಕೊಂಡು ಹೋಗುತ್ತಿರುವ ವೀಡಿಯೊ ವೈರಲ್ ಆಗಿದೆ. ಈ ವೀಡಿಯೊದಲ್ಲಿ, ಆ ವ್ಯಕ್ತಿ ಒಂದು ಕೈಯಲ್ಲಿ ಕತ್ತರಿಸಿದ ತಲೆ ಮತ್ತು ಇನ್ನೊಂದು ಕೈಯಲ್ಲಿ ಮಾರಕ ಆಯುಧದೊಂದಿಗೆ ಜನನಿಬಿಡ ರಸ್ತೆಯಲ್ಲಿ ನಡೆದುಕೊಂಡು ಹೋಗುವುದನ್ನು ಕಾಣಬಹುದು. ಪಕ್ಕದಲ್ಲಿದ್ದವರು ಮತ್ತು ಬೈಕ್ ಸವಾರರು ಆ ವ್ಯಕ್ತಿಯನ್ನು ನಿಲ್ಲಿಸಿ ವಿಡಿಯೋ ರೆಕಾರ್ಡ್ ಮಾಡುವುದನ್ನು ಕೂಡ ಕಾಣಬಹುದು.
ಆರೋಪಿಯನ್ನು ಬಿಮಲ್ ಮಂಡಲ್ ಎಂದು ಗುರುತಿಸಲಾಗಿದೆ. ವರದಿಯ ಪ್ರಕಾರ, ಇಂದು ಬೆಳಿಗ್ಗೆ ಬಿಮಲ್ ಮಂಡಲ್ ತನ್ನ ಅತ್ತಿಗೆಯ ಕತ್ತರಿಸಿದ ತಲೆಯೊಂದಿಗೆ ಪೊಲೀಸ್ ಠಾಣೆಗೆ ಬಂದರು. ಪೊಲೀಸರು ಅವರನ್ನು ಬಂಧಿಸಿದರು. ಕೌಟುಂಬಿಕ ಕಲಹದಿಂದಾಗಿ ಈ ಭೀಕರ ಹತ್ಯೆ ನಡೆದಿದೆ ಎನ್ನಲಾಗಿದೆ. ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಆರೋಪಿಯಿಂದ ಆಯುಧವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
#भाभी_का_कटा_हुआ_सिर लेकर सड़क पर घूमता रहा #देवर….😡#पुलिस_ने_किया गिरफ्तार तो बोला- मैं थाने ही आ रहा था…🚔#घरेलू_विवाद के बाद देवर ने भाभी की विभत्स रूप से की हत्या…!!सड़क पर सिर लेकर टहलने के दौरान लोगो ने दी पुलिस को सुचना…#पश्चिम_बंगाल_के_उत्तर_24 परगना जिले घटना. pic.twitter.com/46niU8Pr1o
— Journalist Shashank Pratap Singh Somvanshi (@Shashan19287844) May 31, 2025
ಇದನ್ನೂ ಓದಿ: ಉತ್ತರ ಪ್ರದೇಶದ ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ನಲ್ಲಿ 4 ಮಹಿಳೆಯರಿಗೆ ಹೆರಿಗೆ!
ಪಶ್ಚಿಮ ಬಂಗಾಳದಲ್ಲಿಯೇ, ಫೆಬ್ರವರಿ 2024ರಲ್ಲಿ, ಪುರ್ಬಾ ಮೇದಿನಿಪುರ ಜಿಲ್ಲೆಯಲ್ಲಿ ಒಬ್ಬ ವ್ಯಕ್ತಿ ತನ್ನ ಹೆಂಡತಿಯ ಕತ್ತರಿಸಿದ ತಲೆಯನ್ನು ಹೊತ್ತುಕೊಂಡು ಹೋದ ಘಟನೆ ನಡೆದಿತ್ತು. ಆತ ಒಂದು ಕೈಯಲ್ಲಿ ಅವಳ ತಲೆ ಮತ್ತು ಇನ್ನೊಂದು ಕೈಯಲ್ಲಿ ಕುಡುಗೋಲು ಹಿಡಿದು ಬಸ್ ನಿಲ್ದಾಣದಲ್ಲಿ ಓಡಾಡುತ್ತಿದ್ದ. ವಿವಾಹೇತರ ಸಂಬಂಧದ ಅನುಮಾನವೇ ಕೊಲೆಗೆ ಕಾರಣವಾಗಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:46 pm, Sat, 31 May 25




