Patna Serial Blasts: 2013ರ ಪಾಟ್ನಾ ಸರಣಿ ಬಾಂಬ್ ಸ್ಫೋಟ ಪ್ರಕರಣ; ನಾಲ್ವರಿಗೆ ಗಲ್ಲು ಶಿಕ್ಷೆ, ಇಬ್ಬರಿಗೆ ಜೀವಾವಧಿ ಶಿಕ್ಷೆ ಪ್ರಕಟ
2014ರ ಲೋಕಸಭಾ ಚುನಾವಣೆಯ ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ 2013ರಲ್ಲಿ ಪಾಟ್ನಾದಲ್ಲಿ ಪ್ರಚಾರಕ್ಕೆಂದು ಹೋಗಿದ್ದಾಗ ಸರಣಿ ಬಾಂಬ್ ಸ್ಫೋಟ ಮಾಡಲಾಗಿತ್ತು. ಆ ವೇಳೆ ಕಾಲ್ತುಳಿತದಲ್ಲಿ 6 ಜನರು ಸಾವನ್ನಪ್ಪಿದ್ದರು.
ಪಾಟ್ನಾ: 2013ರರಲ್ಲಿ ಲೋಕಸಭಾ ಚುನಾವಣಾ ಪ್ರಚಾರಕ್ಕೆಂದು ನರೇಂದ್ರ ಮೋದಿ ಪಾಟ್ನಾಗೆ ಹೋಗಿದ್ದಾಗ ಗಾಂಧಿ ಮೈದಾನದಲ್ಲಿ ಸರಣಿ ಬಾಂಬ್ ಸ್ಫೋಟ ಮಾಡಲಾಗಿತ್ತು. ಆ ಪ್ರಕರಣದ 10 ಆರೋಪಿಗಳ ಪೈಕಿ 9 ಜನರನ್ನು ದೋಷಿಗಳೆಂದು ಘೋಷಿಸಿದ್ದ ಸ್ಥಳೀಯ ವಿಶೇಷ ನ್ಯಾಯಾಲಯ ಓರ್ವನನ್ನು ಖುಲಾಸೆಗೊಳಿಸಿತ್ತು. ಆ 9 ಅಪರಾಧಿಗಳಿಗೆ ಇಂದು ಶಿಕ್ಷೆ ಪ್ರಮಾಣ ಘೋಷಣೆಯಾಗಿದ್ದು, ನಾಲ್ಕು ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಇಬ್ಬರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ. ಇನ್ನಿಬ್ಬರಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ ಓರ್ವನಿಗೆ 7 ವರ್ಷ ಜೈಲು ಶಿಕ್ಷೆ ಘೋಷಿಸಲಾಗಿದೆ.
10 ಆರೋಪಿಗಳಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದ ಓರ್ವನನ್ನು ಪ್ರಕರಣದಿಂದ ಕೈಬಿಡಲಾಗಿದೆ ಎಂದು ಪಾಟ್ನಾದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ನ್ಯಾಯಾಲಯ ಹೇಳಿದೆ. 2014ರ ಲೋಕಸಭಾ ಚುನಾವಣೆಯ ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ 2013ರಲ್ಲಿ ಪಾಟ್ನಾದಲ್ಲಿ ಪ್ರಚಾರಕ್ಕೆಂದು ಹೋಗಿದ್ದಾಗ ಸರಣಿ ಬಾಂಬ್ ಸ್ಫೋಟ ಮಾಡಲಾಗಿತ್ತು. ಆ ವೇಳೆ ಕಾಲ್ತುಳಿತದಲ್ಲಿ 6 ಜನರು ಸಾವನ್ನಪ್ಪಿದ್ದರು. ಅದೃಷ್ಟವಶಾತ್ ನರೇಂದ್ರ ಮೋದಿ ಇನ್ನಿತರ ನಾಯಕರು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದರು.
2013ರ ಅಕ್ಟೋಬರ್ 7ರಂದು ಪಾಟ್ನಾದ ಚುನಾವಣಾ ರ್ಯಾಲಿ ವೇಳೆ ಪಾಟ್ನಾ ರೈಲು ನಿಲ್ದಾಣದಲ್ಲಿ ನಡೆದ ಬಾಂಬ್ ಸ್ಫೋಟದಿಂದ 6 ಜನರು ಸಾವನ್ನಪ್ಪಿ, 90ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದರು. ಆದರೂ ನರೇಂದ್ರ ಮೋದಿ ತಮ್ಮ ಚುನಾವಣಾ ಪ್ರಚಾರದ ರ್ಯಾಲಿಯನ್ನು ಮುಂದುವರೆಸಿದ್ದರು. ಈ ಬಾಂಬ್ ಸ್ಫೋಟದ ಹೊಣೆಯನ್ನು ಯಾವುದೇ ಸಂಘಟನೆಗಳು ಹೊತ್ತಿರಲಿಲ್ಲ. ಬಳಿಕ ಎನ್ಐಎ ಈ ಪ್ರಕರಣದ ತನಿಖೆಯ ಜವಾಬ್ದಾರಿ ವಹಿಸಿಕೊಂಡು 2014ರಲ್ಲಿ 11 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿತು. ಅವರಲ್ಲಿ 9 ಮಂದಿ ಇಂಡಿಯನ್ ಮುಜಾಹಿದೀನ್ (IM) ಮತ್ತು ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ (SIMI) ಅನ್ನು ಪ್ರಕರಣದಲ್ಲಿ ಅಪರಾಧಿಗಳೆಂದು ತೀರ್ಪು ನೀಡಲಾಗಿತ್ತು. ಆ ಅಪರಾಧಿಗಳಿಗೆ ಇಂದು ತೀರ್ಪು ಪ್ರಕಟವಾಗಿದೆ. ಇನ್ನೊಬ್ಬ ಆರೋಪಿ ಖುಲಾಸೆಗೊಂಡಿದ್ದು, ಮತ್ತೋರ್ವ ಬೇರೆಡೆ ಬಾಂಬ್ ಇಡಲು ಹೋಗಿದ್ದಾಗ ಬಾಂಬ್ ಸ್ಫೋಟವಾಗಿ ಸಾವನ್ನಪ್ಪಿದ್ದ.
ಇದನ್ನೂ ಓದಿ: Umesh Reddy: ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ಖಾಯಂ; ಹೈಕೋರ್ಟ್ನಿಂದ ಮಹತ್ವದ ತೀರ್ಪು ಪ್ರಕಟ
ಕುಮಟಾ: ಬಾಳಿಗಾ ಕಾಲೇಜು ಆವರಣದಲ್ಲಿ ಪತ್ತೆಯಾಗಿದ್ದ ಡಮ್ಮಿ ಬಾಂಬ್, ನಿಟ್ಟುಸಿರು ಬಿಟ್ಟ ಜನ
Published On - 5:36 pm, Mon, 1 November 21