ದೆಹಲಿಯಲ್ಲಿ 2016ರಲ್ಲಿ ನಡೆದ ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ 1.96 ಕೋಟಿ ರೂ. ಪರಿಹಾರ ನೀಡುವಂತೆ ನ್ಯಾಯಾಲಯ ಇನ್ಶೂರೆನ್ಸ್ ಕಂಪನಿಗೆ ಹೇಳಿದೆ. ಈ ಅಪಘಾತದ ಸಂದರ್ಭದಲ್ಲಿ ಕಾರನ್ನು ಅಪ್ರಾಪ್ತ ಬಾಲಕ ಓಡಿಸುತ್ತಿದ್ದ, ಸಿದ್ಧಾರ್ಥ್ ಮಾರುಕಟ್ಟೆಯಿಂದ ಮನೆಗೆ ಮರಳುತ್ತಿರುವಾಗ ರಸ್ತೆ ದಾಟುವ ಸಮಯದಲ್ಲಿ ಕಾರು ವೇಗವಾಗಿ ಬಂದು ಡಿಕ್ಕಿ ಹೊಡೆದಿತ್ತು, ಮಾರಣಾಂತಿಕವಾಗಿ ಗಾಯಗೊಂಡಿದ್ದರು, ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.
ಅಪಘಾತದಲ್ಲಿ ಸಾವನ್ನಪ್ಪಿದ್ದ ಸಿದ್ಧಾರ್ಥ್ ಶರ್ಮಾ ವಯಸ್ಸು ಆಗ 32 ವರ್ಷವಾಗಿತ್ತು, ದೆಹಲಿಯ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ರಸ್ತೆ ದಾಟುತ್ತಿದ್ದಾಗ ಚಾಲಕನ ಅಜಾಗರೂಕ ಚಾಲನೆಯಿಂದ ಸಿದ್ಧಾರ್ಥ್ ಮಾರಣಾಂತಿಕವಾಗಿ ಗಾಯಗೊಂಡಿದ್ದರು.
ನ್ಯಾಯಾಲಯವು ಅಪ್ರಾಪ್ತ ಬಾಲಕನ ತಂದೆಯನ್ನೇ ಹೊಣೆಗಾರರನ್ನಾಗಿ ಮಾಡಿದೆ. 1.98 ಕೋಟಿ ರೂ. ಸರಿಸುಮಾರು 1.21 ಕೋಟಿ ರೂಪಾಯಿಗಳನ್ನು ಪರಿಹಾರವಾಗಿ ಮತ್ತು ಸುಮಾರು 77.61 ಲಕ್ಷ ರೂಪಾಯಿಗಳನ್ನು ಬಡ್ಡಿಯಾಗಿ ನೀಡುವಂತೆ ನ್ಯಾಯಾಲಯವು ವಿಮಾ ಕಂಪನಿಗೆ ಸೂಚಿಸಿತು.
ಮತ್ತಷ್ಟು ಓದಿ: ಹಿಟ್ ಆ್ಯಂಡ್ ರನ್: ಸಿಸಿಟಿವಿ ದೃಶ್ಯಗಳನ್ನು ನೀಡಲು ಬಾರ್ ವಿಫಲ, ಪರವಾನಗಿ ತಾತ್ಕಾಲಿಕ ರದ್ದು
ಸಿದ್ಧಾರ್ಥ್ ಸಾಯುವ ಸಮಯದಲ್ಲಿ ಉನ್ನತ ಶಿಕ್ಷಣವನ್ನು ಪಡೆಯುತ್ತಿದ್ದರು ಎನ್ನಲಾಗಿದೆ. 2015 ರಲ್ಲಿ 25,000 ರೂ. ಮಾಸಿಕ ವೇತನವನ್ನು ಪಡೆಯುತ್ತಿದ್ದರು ಎಂಬ ಅಂಶವನ್ನು ಪರಿಗಣಿಸಿತು. ಮಾರ್ಚ್ 2016 ರಲ್ಲಿ ಸ್ವೀಕರಿಸಿದ ಆಫರ್ ಲೆಟರ್ ಗಮನಿಸಿ, ವಾರ್ಷಿಕ 10 ಲಕ್ಷ ರೂ.ಗಳನ್ನು ಸಹ ಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ.
ಅಪ್ರಾಪ್ತ ವಯಸ್ಕ, ತನ್ನ ಆರು ಸ್ನೇಹಿತರ ಜೊತೆಯಲ್ಲಿ, ಅತಿವೇಗದಲ್ಲಿ ಕಾರು ಚಲಾಯಿಸುತ್ತಿದ್ದ. ಡಿಕ್ಕಿಯ ನಂತರ ಸಿದ್ದಾರ್ಥ್ ಗಾಳಿಯಲ್ಲಿ 20 ಅಡಿ ಎತ್ತರಕ್ಕೆ ಹಾರಿ ಕೆಳಗೆ ಬಿದ್ದಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ