Republic Day 2025 Parade: ಗಮನ ಸೆಳೆದ ಕರ್ನಾಟಕ ಲಕ್ಕುಂಡಿ ಸ್ತಬ್ಧಚಿತ್ರ

|

Updated on: Jan 26, 2025 | 1:21 PM

76th Republic Day Live Updates: ಭಾರತದ ಸಂವಿಧಾನದ ಅಂಗೀಕಾರ ಮತ್ತು ಗಣರಾಜ್ಯವಾದ ಸ್ಮರಣಾರ್ಥ ಪ್ರತಿ ವರ್ಷ ಗಣರಾಜ್ಯೋತ್ಸವ ಆಚರಿಸಲಾಗುತ್ತಿದೆ. 2025ನೇ ಸಾಲಿನ ಗಣರಾಜ್ಯೋತ್ಸವದ ಥೀಮ್ "ಸುವರ್ಣ ಭಾರತ ಪರಂಪರೆ ಮತ್ತು ಪ್ರಗತಿ". ದೇಶಾದ್ಯಂತ ಗಣರಾಜ್ಯೋತ್ಸವ ಆಚರಿಸಲಾಗುತ್ತಿದೆ. ನವದೆಹಲಿಯಲ್ಲಿ ಕರ್ತವ್ಯ ಪಥದಲ್ಲಿ ಪರೇಡ್ ನಡೆಯುತ್ತಿದೆ. ಮತ್ತು ರಾಷ್ಟ್ರಪತಿಗಳು ಧ್ವಜಾರೋಹಣ ನೆರವೇರಿಸಿದರು. ಬೆಂಗಳೂರಿನ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಸರ್ಕಾರದ ವತಿಯಿಂದ ಗಣರಾಜ್ಯೋತ್ಸವ ಆಚರಿಸಲಾಯಿತು.

Republic Day 2025 Parade: ಗಮನ ಸೆಳೆದ ಕರ್ನಾಟಕ ಲಕ್ಕುಂಡಿ ಸ್ತಬ್ಧಚಿತ್ರ
ಲಕ್ಕುಂಡಿ ಬ್ರಹ್ಮ ಜಿನಾಲಯ
Follow us on

ಜನವರಿ 26 ಗಣರಾಜ್ಯೋತ್ಸವದ ಸಂಭ್ರಮದ ದಿನ. ಭಾರತದ ಸಂವಿಧಾನವನ್ನು 1949 ನವೆಂಬರ್ 26ಕ್ಕೆ ಅಂಗೀಕರಿಸಲಾಯಿತು. 1950 ಜನವರಿ 26 ರಂದು ಸಂವಿಧಾನವನ್ನು ಜಾರಿಗೆ ತರಲಾಗಿದೆ. ಸಂವಿಧಾನವನ್ನು ಅಂಗೀಕರಿಸಿದ ಹಾಗೂ ಭಾರತ ಗಣತಂತ್ರ ರಾಷ್ಟ್ರವಾಗಿ ಬದಲಾದ ಗೌರವಾರ್ಥ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ಸುವರ್ಣ ಭಾರತ ಪರಂಪರೆ ಮತ್ತು ಪ್ರಗತಿ ಎನ್ನುವುದು 2025ನೇ ಸಾಲಿನ ಗಣರಾಜ್ಯೋತ್ಸವದ ಥೀಮ್​ ಆಗಿದೆ. ಈ ದಿನ ನವದೆಹಲಿಯ ಕರ್ತವ್ಯ ಪಥದಲ್ಲಿ ಪರೇಡ್ ನಡೆಯುತ್ತದೆ. ರಾಷ್ಟ್ರಪತಿಗಳು ಧ್ವಜಾರೋಹಣ ನೆರವೇರಿಸಿದರು. ಸುವರ್ಣ ಭಾರತದ ನಿರ್ಮಾಣಕ್ಕೆ ಕಾರಣವಾದವರಿಗೆ ಆಹ್ವಾನ ನೀಡಲಾಗಿದೆ. ಬೆಂಗಳೂರಿನ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಬೆಳಗ್ಗೆ 9 ಗಂಟೆಗೆ ಥಾವರ್ ಚಂದ್ ಗೆಹ್ಲೋಟ್ ಧ್ವಜಾರೋಹಣ ನೆರವೇರಿಸಿದರು.

Published On - 8:20 am, Sun, 26 January 25