ಉತ್ತರ ಪ್ರದೇಶ: ವಕೀಲರ ಅಪಹರಿಸಿ, ಮೈಮೇಲೆ ವಾಹನ ಹತ್ತಿಸಿ ಹತ್ಯೆ
ಉತ್ತರ ಪ್ರದೇಶದಲ್ಲಿ ವಕೀಲರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಅವರನ್ನು ಅಪಹರಿಸಿ ಮೈಮೇಲೆ ಕಾರು ಹತ್ತಿಸಿ ಹತ್ಯೆ ಮಾಡಲಾಗಿದೆ. ವಕೀಲರ ಸಂಬಂಧಿಯೊಬ್ಬರನ್ನು ಬಂಧಿಸಲಾಗಿದೆ. ಕಪ್ತಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಬೈಡೋಲಿಯಾ ಅಜೈಬ್ ನಿವಾಸಿ ಚಂದ್ರಶೇಖರ್ ಯಾದವ್ (50) ಶನಿವಾರ 'ಥಾನಾ ಸಮಾಧಾನ್ ದಿವಸ್' ಕಾರ್ಯಕ್ರಮದಲ್ಲಿ ಭಾಗವಹಿಸಲು ಕಪ್ತಂಗಂಜ್‌ಗೆ ತೆರಳಿದ್ದರು. ಸಂಜೆ ದ್ವಿಚಕ್ರವಾಹನದಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ, ನಾರಾಯಣಪುರ ಗ್ರಾಮದ ಬಳಿ ಸ್ಕಾರ್ಪಿಯೋ ಚಲಾಯಿಸುತ್ತಿದ್ದ ಕೆಲವರು ಅವರನ್ನು ಅಪಹರಿಸಿದ್ದರು.
ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ನಡೆದ ವಕೀಲರೊಬ್ಬರ ಅಪಹರಣ ಪ್ರಕರಣವು ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ವಕೀಲರ ಅಪಹರಿಸಿ, ಮೈಮೇಲೆ ವಾಹನ ಹತ್ತಿಸಿ ಹತ್ಯೆ ಮಾಡಲಾಗಿದೆ. ವಕೀಲರ ಸಂಬಂಧಿಯೊಬ್ಬರನ್ನು ಬಂಧಿಸಲಾಗಿದೆ. ಕಪ್ತಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಬೈಡೋಲಿಯಾ ಅಜೈಬ್ ನಿವಾಸಿ ಚಂದ್ರಶೇಖರ್ ಯಾದವ್ (50) ಶನಿವಾರ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಪ್ತಂಗಂಜ್‌ಗೆ ತೆರಳಿದ್ದರು.
ಸಂಜೆ ದ್ವಿಚಕ್ರವಾಹನದಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ, ನಾರಾಯಣಪುರ ಗ್ರಾಮದ ಬಳಿ ಸ್ಕಾರ್ಪಿಯೋದಲ್ಲಿ ಬಂದ ಕೆಲವರು ಅವರನ್ನು ಅಪಹರಿಸಿದ್ದರು. ಅಪಹರಣದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಗುವಷ್ಟರಲ್ಲಿ ಆರೋಪಿಗಳು ಯಾದವ್‌ಗೆ ಥಳಿಸಿ ವಾಲ್ಟರ್‌ಗಂಜ್‌ನ ರಸ್ತೆಯಲ್ಲಿ ಎಸೆದಿದ್ದರು. ನಂತರ ಆರೋಪಿಗಳು ತಮ್ಮ ವಾಹನದೊಂದಿಗೆ ಅವರ ಮೇಲೆ ಓಡಿಸಿ ಪರಾರಿಯಾಗಿದ್ದಾರೆ.
ವಕೀಲರ ಸಹೋದರಿ ಮತ್ತು ಆಕೆಯ ಪತಿ ರಂಜೀತ್ ಯಾದವ್ ವಿಚ್ಛೇದನದಕ್ಕೆ ಅರ್ಜಿ ಸಲ್ಲಿಸಿದ್ದರು, ಆತನೇ ವಕೀಲರನ್ನು ಕೊಲೆ ಮಾಡಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಪ್ರಕರಣದ ಪ್ರಮುಖ ಆರೋಪಿ ರಂಜಿತ್ ಯಾದವ್ ನನ್ನು ಬಂಧಿಸಲಾಗಿದ್ದು, ಇತರ ಆರೋಪಿಗಳನ್ನು ಬಂಧಿಸಲು ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಘಟನೆ ಕುರಿತು ಮಾಹಿತಿ ಪಡೆದ ವಕೀಲರು ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಗೆ ಆಗಮಿಸಿ ಹಂತಕರನ್ನು ಬಂಧಿಸುವಂತೆ ಒತ್ತಾಯಿಸಿದರು.
ಮತ್ತಷ್ಟು ಓದಿ: ಮಗುವಾಗಿದ್ದಾಗ ಅಪಹರಣ, ತನ್ನ ಪ್ರಕರಣದ ಆರೋಪಿಗಳಿಗೆ 17 ವರ್ಷಗಳ ಬಳಿಕ ಶಿಕ್ಷೆ ಕೊಡಿಸಿದ ವಕೀಲ
2023ರಲ್ಲಿ ಉತ್ತರಪ್ರದೇಶದ ಶಹಜಹಾನ್ ಪುರದ ಜಿಲ್ಲಾ ನ್ಯಾಯಾಲಯ ಸಂಕೀರ್ಣದೊಳಗೆ ವಕೀಲರೊಬ್ಬರಿಗೆ ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ವರದಿಯಾಗಿತ್ತು. ಗೂಂಡಾಗಳು ಮತ್ತು ದುಷ್ಕರ್ಮಿಗಳು ರಾಜ್ಯದಿಂದ ಪಲಾಯನ ಮಾಡಿದ್ದಾರೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿಗಳು ಹೇಳುತ್ತಿದ್ದರು. ಆದರೆ ಇಲ್ಲಿ ಅವರು ನ್ಯಾಯಾಲಯಕ್ಕೆ ನುಗ್ಗಿ ವಕೀಲರನ್ನು ಕೊಲ್ಲುತ್ತಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ಆರೋಪಿಸಿದ್ದರು.
ಹತ್ಯೆಯಾದ ವಕೀಲರನ್ನು ಭೂಪೇಂದ್ರ ಪ್ರತಾಪ್ ಸಿಂಹ ಎಂದು ಗುರ್ತಿಸಲಾಗಿದೆ. ನ್ಯಾಯಾಲಯದ ಮೂರನೇ ಮಹಡಿಯಲ್ಲಿ ವಕೀಲರ ಶವ ಪತ್ತೆಯಾಗಿತ್ತು. ಮೃತದೇಹದ ಬಳಿ ದೇಶೀಯ ನಿರ್ಮಿತ ಪಿಸ್ತೂಲ್ ಕೂಡ ಕಂಡುಬಂದಿದೆ ಎಂದು ವರದಿಯಾಗಿದೆ. ಹತ್ಯೆಗೆ ಪ್ರಮುಖ ಕಾರಣಗಳು ತಿಳಿದುಬಂದಿಲ್ಲ. ಘಟನೆ ಬಳಿಕ ಸ್ಥಳಕ್ಕಾಗಮಿಸಿರುವ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ತನಿಖೆ ಆರಂಭಿಸಿದ್ದಾರೆಂದು ತಿಳಿದುಬಂದಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ