ನಟ ಅನಂತ್ನಾಗ್, ವಯಲಿನ್ ವಾದಕ ಲಕ್ಷ್ಮೀನಾರಾಯಣ ಸುಬ್ರಹ್ಮಣ್ಯಂ ಸೇರಿ 19 ಸಾಧಕರಿಗೆ ಪದ್ಮ ಭೂಷಣ, ಪದ್ಮ ವಿಭೂಷಣ ಪ್ರಶಸ್ತಿ
ಕನ್ನಡದ ಖ್ಯಾತ ನಟ ಅನಂತನಾಗ್, ಖ್ಯಾತ ವಯೊಲಿನ್ ವಾದಕ ಲಕ್ಷ್ಮೀನಾರಾಯಣ ಸುಬ್ರಮಣ್ಯಂ ಮುಂತಾದ ಸಾಧಕರಿಗೆ ಪದ್ಮ ಭೂಷಣ ಹಾಗೂ ಪದ್ಮ ವಿಭೂಷಣ ಪ್ರಶಸ್ತಿ ಘೋಷಿಸಲಾಗಿದೆ. ಮಲಯಾಳಂನ ಪ್ರಸಿದ್ಧ ಸಾಹಿತಿ ಎಂ.ಟಿ. ವಾಸುದೇವನ್ ನಾಯರ್ ಅವರಿಗೆ ಮರಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿದೆ. ಭಾನುವಾರದ ಗಣರಾಜ್ಯೋತ್ಸವ ಆಚರಣೆಗೂ ಮುನ್ನ ಪದ್ಮ ಪ್ರಶಸ್ತಿಗಳನ್ನು ಘೋಷಿಸಲಾಯಿತು.
ನವದೆಹಲಿ: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಈಗಾಗಲೇ ಪ್ಯಾರಾಲಿಂಪಿಕ್ ಪಟು ಹರ್ವಿಂದರ್ ಸಿಂಗ್ ಮುಂತಾದವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿತ್ತು. ಇದೀಗ ಕನ್ನಡದ ಖ್ಯಾತ ನಟ ಅನಂತ್ನಾಗ್, ಕರ್ನಾಟಕದ ವಯೊಲಿನ್ ವಾದಕ ಲಕ್ಷ್ಮೀನಾರಾಯಣ ಸುಬ್ರಮಣ್ಯಮ್ ಸೇರಿದಂತೆ 19 ಸಾಧಕರಿಗೆ ಪದ್ಮಭೂಷಣ ಹಾಗೂ ಪದ್ಮವಿಭೂಷಣ ಪ್ರಶಸ್ತಿ ಘೋಷಿಸಲಾಗಿದೆ.
ಪ್ರಶಸ್ತಿ ಪುರಸ್ಕೃತರಲ್ಲಿ ಕನ್ನಡಿಗರಾಗಿರುವ ಅನಂತ್ನಾಗ್ ಕನ್ನಡದ ಖ್ಯಾತ ಹಿರಿಯ ನಟ. ಚೆನ್ನೈ ಮೂಲಕ ವಯೊಲಿನ್ ವಾದಕ ಲಕ್ಷ್ಮೀನಾರಾಯಣ ಸುಬ್ರಮಣ್ಯಂ ಕರ್ನಾಟಕದಲ್ಲಿ ನೆಲೆಸಿದ್ದಾರೆ. ಇವರಿಬ್ಬರ ಜೊತೆಗೆ ಕೇರಳದ ಖ್ಯಾತ ಸಾಹಿತಿ ಎಂ.ಟಿ. ವಾಸುದೇವನ್ ನಾಯರ್ ಅವರಿಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿದೆ. ತೆಲಂಗಾಣದ ದುವ್ವುರ್ ನಾಗೇಶ್ವರ್ ರೆಡ್ಡಿ (ವೈದ್ಯಕೀಯ), ಚಂಡೀಗಢದ ಜಸ್ಟೀಸ್ ಜಗದೀಶ್ ಸಿಂಗ್ ಖೇಹರ್ (ಸಾರ್ವಜನಿಕ ಸಂಪರ್ಕ), ಗುಜರಾತ್ನ ಕುಮುದಿನಿ ರಜಿನಿಕಾಂತ್ ಲಖಿಯ (ಕಲೆ), ಮರಣೋತ್ತರವಾಗಿ ಜಪಾನ್ನ ಒಸಮು ಸುಝುಕಿ (ಇಂಡಸ್ಟ್ರಿ), ಮರಣೋತ್ತರವಾಗಿ ಬಿಹಾರದ ಶಾರದಾ ಸಿನ್ಹ (ಕಲೆ) ಇವರಿಗೆ ಪದ್ಮವಿಭೂಷಣ ಪ್ರಶಸ್ತಿ ಘೋಷಿಸಲಾಗಿದೆ.
ಪದ್ಮ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ:
ಪದ್ಮವಿಭೂಷಣ ಪ್ರಶಸ್ತಿ:
ಕರ್ನಾಟಕದ ಲಕ್ಷ್ಮೀನಾರಾಯಣ ಸುಬ್ರಮಣ್ಯಂ
ದುವ್ವೂರು ನಾಗೇಶ್ವರ ರೆಡ್ಡಿ
ನ್ಯಾಯಮೂರ್ತಿ (ನಿವೃತ್ತ) ಶ್ರೀ ಜಗದೀಶ್ ಸಿಂಗ್ ಖೇಹರ್
ಕುಮುದಿನಿ ರಜನಿಕಾಂತ್ ಲಖಿಯಾ
ಎಂಟಿ ವಾಸುದೇವನ್ ನಾಯರ್ (ಮರಣೋತ್ತರ)
ಒಸಾಮು ಸುಜುಕಿ (ಮರಣೋತ್ತರ)
ಶಾರದಾ ಸಿನ್ಹಾ (ಮರಣೋತ್ತರ)
President Droupadi Murmu approves 139 Padma awards, including seven Padma Vibhushan, 19 Padma Bhushan and 113 Padma Shri. (n/1) pic.twitter.com/Ifw9RUEgtJ
— Press Trust of India (@PTI_News) January 25, 2025
ಪದ್ಮಭೂಷಣ ಪ್ರಶಸ್ತಿ:
ಕನ್ನಡದ ನಟ ಅನಂತ್ ನಾಗ್
ಎ. ಸೂರ್ಯ ಪ್ರಕಾಶ್
ಬಿಬೇಕ್ ಡೆಬ್ರಾಯ್ (ಮರಣೋತ್ತರ)
ಜತಿನ್ ಗೋಸ್ವಾಮಿ
ಜೋಸ್ ಚಾಕೊ ಪೆರಿಯಪ್ಪುರಂ
ಕೈಲಾಶ್ ನಾಥ್ ದೀಕ್ಷಿತ್
ಮನೋಹರ್ ಜೋಶಿ (ಮರಣೋತ್ತರ)
ನಲಿ ಕುಪ್ಪುಸ್ವಾಮಿ ಚೆಟ್ಟಿ
ನಂದಮೂರಿ ಬಾಲಕೃಷ್ಣ
ಪಿಆರ್ ಶ್ರೀಜೇಶ್
ಪಂಕಜ್ ಪಟೇಲ್
ಪಂಕಜ್ ಉದಾಸ್ (ಮರಣೋತ್ತರ)
ರಾಂಬಹದ್ದೂರ್ ರೈ
ಸಾಧ್ವಿ ಋತಂಭರಾ
ಎಸ್ ಅಜಿತ್ ಕುಮಾರ್
ಶೇಖರ್ ಕಪೂರ್
ಶೋಭನಾ ಚಂದ್ರಕುಮಾರ್
ಸುಶೀಲ್ ಕುಮಾರ್ ಮೋದಿ (ಮರಣೋತ್ತರ)
ವಿನೋದ್ ಧಾಮ್
ದೇಶದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾದ ಪದ್ಮಶ್ರೀ, ಪದ್ಮಭೂಷಣ ಮತ್ತು ಪದ್ಮವಿಭೂಷಣ ಎಂಬ ಮೂರು ವಿಭಾಗಗಳಲ್ಲಿ ಪದ್ಮ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಕಲೆ, ಸಾಮಾಜಿಕ ಕಾರ್ಯ, ಸಾರ್ವಜನಿಕ ವ್ಯವಹಾರಗಳು, ವಿಜ್ಞಾನ ಮತ್ತು ಎಂಜಿನಿಯರಿಂಗ್, ವ್ಯಾಪಾರ ಮತ್ತು ಕೈಗಾರಿಕೆ, ಔಷಧ ಮತ್ತು ಸಾಹಿತ್ಯ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ.
ಭಾರತ ರತ್ನ, ಪದ್ಮವಿಭೂಷಣ ಮತ್ತು ಪದ್ಮಭೂಷಣದ ನಂತರ ಪದ್ಮಶ್ರೀ ಪ್ರಶಸ್ತಿಯು ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:03 pm, Sat, 25 January 25