Padma Awards 2025: ಕರ್ನಾಟಕದ ವೆಂಕಪ್ಪ ಅಂಬಾಜಿ, ಪ್ಯಾರಾಲಿಂಪಿಯನ್ ಹರ್ವಿಂದರ್ ಸಿಂಗ್ ಮುಂತಾದ ಸಾಧಕರಿಗೆ ಪದ್ಮಶ್ರೀ ಘೋಷಣೆ
ನಾಳೆ (ಜನವರಿ 26) ಗಣರಾಜ್ಯೋತ್ಸವ ಕಾರ್ಯಕ್ರಮ ಇರುವುದರಿಂದ ಅದಕ್ಕೂ ಮುಂಚಿತವಾಗಿ ಇಂದು ಹಲವು ಕ್ಷೇತ್ರಗಳ ಸಾಧಕರಿಗೆ ಕೇಂದ್ರ ಸರ್ಕಾರದಿಂದ ಪದ್ಮ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ದೇಶದ ಉನ್ನತ ಪ್ರಶಸ್ತಿಗಳಾದ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿಗಳನ್ನು ಪ್ರತಿ ವರ್ಷ ಕೇಂದ್ರ ಸರ್ಕಾರ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಘೋಷಿಸುತ್ತದೆ.
ನವದೆಹಲಿ: ಗಣರಾಜ್ಯೋತ್ಸವಕ್ಕೂ ಮುಂಚಿತವಾಗಿ ಕೇಂದ್ರ ಸರ್ಕಾರ ಇಂದು 2025ನೇ ಸಾಲಿನ ಪದ್ಮ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪ್ಯಾರಾಲಿಂಪಿಕ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಪ್ಯಾರಾಲಿಂಪಿಯನ್ ಹರ್ವಿಂದರ್ ಸಿಂಗ್ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದಾರೆ. ಕರ್ನಾಟಕದ ಜಾನಪದ ಗಾಯಕ ವೆಂಕಪ್ಪ ಅಂಬಾಜಿ, ವೈದ್ಯೆ ವಿಜಯಲಕ್ಷ್ಮೀ ದೇಶಮಾನೆ, ತೊಗಲುಗೊಂಬೆಯಾಟ ಕಲಾವಿದೆ ಭೀಮವ್ವ ಶಿಳ್ಳೇಖ್ಯಾತ, ಸಂಗೀತ ನಿರ್ದೇಶಕ ರಿಕ್ಕಿ ಕೇಜ್, ಕಲಾ ಕ್ಷೇತ್ರದಲ್ಲಿ ಅರಕಲಗೂಡು ಸೂರ್ಯಪ್ರಕಾಶ್, ಸಿನಿಮಾ ನಿರ್ಮಾಪಕ ಹಾಸನ ರಘು ಕೂಡ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದಾರೆ.
ವೈದ್ಯಕೀಯ, ಸಾಮಾಜಿಕ ಕಾರ್ಯ, ಸಂಗೀತ ಮತ್ತು ಕೃಷಿ ಕ್ಷೇತ್ರಗಳಲ್ಲಿ ಅಸಾಧಾರಣ ಕೊಡುಗೆಗಳಿಗಾಗಿ ಕ್ರಮವಾಗಿ ಡಾ. ನೀರಜಾ ಭಟ್ಲಾ, ಭೀಮ್ ಸಿಂಗ್ ಭವೇಶ್, ಪಿ. ದಚ್ಚನಮೂರ್ತಿ ಮತ್ತು ಎಲ್ ಹ್ಯಾಂಗ್ಥಿಂಗ್ ಅವರಿಗೆ ಪದ್ಮ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ತೆರೆಮರೆಯ 139 ಸಾಧಕರಿಗೆ ಇಂದು ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿದೆ.
ಗಣರಾಜ್ಯೋತ್ಸವಕ್ಕೆ ಮುಂಚಿತವಾಗಿ, ಕೇಂದ್ರವು ಇಂದು ಪದ್ಮ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಪ್ರಕಟಿಸಿದೆ. ದೇಶದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾದ ಪದ್ಮ ಪ್ರಶಸ್ತಿಗಳನ್ನು 3 ವಿಭಾಗಗಳಲ್ಲಿ ನೀಡಲಾಗುತ್ತದೆ. ಅವುಗಳೆಂದರೆ ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ.
Padma Awards 2025 | Unsung and unique Padma Awardees. Full list to be released shortly.
Dr Neerja Bhatla, a Gynaecologist from Delhi with specialized focus on cervical cancer detection, prevention and management being awarded Padma Shri.
Bhim Singh Bhavesh, social worker from… pic.twitter.com/tIkPS8Pzln
— ANI (@ANI) January 25, 2025
ಬ್ರೆಜಿಲ್‌ನ ಹಿಂದೂ ಆಧ್ಯಾತ್ಮಿಕ ನಾಯಕ ಜೋನಾಸ್ ಮಾಸೆಟ್ಟಿ ಮತ್ತು ಭಾರತದ ಪರಂಪರೆಯ ಬಗ್ಗೆ ಬರೆಯುವುದರಲ್ಲಿ ಜನಪ್ರಿಯರಾಗಿರುವ ದಂಪತಿಗಳಾದ ಹಗ್ ಮತ್ತು ಕೊಲೀನ್ ಗ್ಯಾಂಟ್ಜರ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಕರ್ನಾಟಕದ ವೆಂಕಪ್ಪ ಅಂಬಾಜಿ ಸುಗಟೇಕರ್:
ಕರ್ನಾಟಕದ ಬಾಗಲಕೋಟೆ ನಿವಾಸಿಯಾದ ವೆಂಕಪ್ಪ ಅಂಬಾಜಿ ಸುಗಟೇಕರ್ ಅವರು ಜಾನಪದ ಗಾಯಕರು. ಅವರು 1,000ಕ್ಕೂ ಹೆಚ್ಚು ಗೋಂಧಳಿ ಹಾಡುಗಳನ್ನು ಹಾಡಿದ್ದಾರೆ. ಸಾವಿರಾರು ಜನರಿಗೆ ಉಚಿತವಾಗಿ ಹಾಡುಗಾರಿಕೆ ಕಲಿಸುವ ಅವರ ಕ್ರಮಕ್ಕಾಗಿ ಜಾನಪದ ಗಾಯಕನನ್ನು ಪ್ರಧಾನಿ ಮೋದಿ ಈ ಹಿಂದೆ ಮನ್ ಕಿ ಬಾತ್ನಲ್ಲಿ ಶ್ಲಾಘಿಸಿದ್ದರು. ಅವರಿಗೂ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ.
ಗರ್ಭಕಂಠದ ಕ್ಯಾನ್ಸರ್ ಪತ್ತೆ, ತಡೆಗಟ್ಟುವಿಕೆ ಮತ್ತು ನಿರ್ವಹಣೆಯಲ್ಲಿ ವಿಶೇಷ ತಜ್ಞರಾಗಿರುವ ದೆಹಲಿಯ ಸ್ತ್ರೀರೋಗ ತಜ್ಞೆ ಡಾ. ನೀರ್ಜಾ ಭಟ್ಲಾ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಭೋಜ್‌ಪುರದ ಸಮಾಜ ಸೇವಕ ಭೀಮ್ ಸಿಂಗ್ ಭವೇಶ್ ಅವರಿಗೆ ‘ನಯೀ ಆಶಾ’ ಫೌಂಡೇಶನ್ ಮೂಲಕ ಕಳೆದ 22 ವರ್ಷಗಳಿಂದ ಸಮಾಜದ ಅತ್ಯಂತ ಅಂಚಿನಲ್ಲಿರುವ ಗುಂಪಿನಲ್ಲಿ ಒಂದಾದ ಮುಸಾಹರ್ ಸಮುದಾಯದ ಉನ್ನತಿಗಾಗಿ ಅವಿಶ್ರಾಂತವಾಗಿ ಶ್ರಮಿಸಿದ್ದಕ್ಕಾಗಿ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ.
ಇದನ್ನೂ ಓದಿ: ಗಣರಾಜ್ಯೋತ್ಸವ: ಭಾನುವಾರ ಬೆಂಗಳೂರಿನ ಈ ರಸ್ತೆಯಲ್ಲಿ ವಾಹನ ಸಂಚಾರ, ಪಾರ್ಕಿಂಗ್ ನಿಷೇಧ
ಪದ್ಮಶ್ರೀ ಪುರಸ್ಕೃತರಾದ ಪಿ. ದಚ್ಚನಮೂರ್ತಿ ಅವರು ದಕ್ಷಿಣ ಭಾರತೀಯ ಸಂಗೀತ ಮತ್ತು ಸಂಸ್ಕೃತಿಗೆ ಪ್ರಮುಖವಾದ ಶಾಸ್ತ್ರೀಯ ತಾಳವಾದ್ಯವಾದ ಥವಿಲ್‌ನಲ್ಲಿ ಪರಿಣತಿ ಹೊಂದಿರುವ ವಾದ್ಯಗಾರರಾಗಿದ್ದು, 5 ದಶಕಗಳಿಗೂ ಹೆಚ್ಚು ಅನುಭವ ಹೊಂದಿದ್ದಾರೆ. ಎಲ್ ಹ್ಯಾಂಗ್ಥಿಂಗ್ ಅವರು ನಾಗಾಲ್ಯಾಂಡ್‌ನ ನೋಕ್ಲಾಕ್‌ನ ಹಣ್ಣಿನ ರೈತ. ಸ್ಥಳೀಯವಲ್ಲದ ಹಣ್ಣುಗಳನ್ನು ಬೆಳೆಸುವಲ್ಲಿ 30 ವರ್ಷಗಳಿಗೂ ಹೆಚ್ಚು ಪರಿಣತಿ ಹೊಂದಿದ್ದಾರೆ. ಖ್ಯಾತ ಗಾಯಕ ಅರ್ಜಿತ್ ಸಿಂಗ್ಗೂ ಪದ್ಮಶ್ರೀ ಲಭಿಸಿದೆ.
ಶನಿವಾರ ಪ್ರಶಸ್ತಿ ಪಡೆದವರಲ್ಲಿ ಗೋವಾದ 100 ವರ್ಷದ ಸ್ವಾತಂತ್ರ್ಯ ಹೋರಾಟಗಾರ್ತಿ ಲಿಬಿಯಾ ಲೋಬೊ ಸರ್ದೇಸಾಯಿ, ಪಶ್ಚಿಮ ಬಂಗಾಳದ ಧಕ್ ಆಟಗಾರ ಗೋಕುಲ್ ಚಂದ್ರ ದಾಸ್, ಕುವೈತ್‌ನ ಯೋಗ ಸಾಧಕಿ ಶೈಖಾ ಎ ಜೆ ಅಲ್ ಸಬಾ ಮತ್ತು ಉತ್ತರಾಖಂಡದ ಪ್ರಯಾಣ ಬ್ಲಾಗರ್ ದಂಪತಿ ಹಗ್ ಮತ್ತು ಕೊಲೀನ್ ಗ್ಯಾಂಟ್ಜರ್ ಸೇರಿದ್ದಾರೆ.
ಕಲೆ, ಸಾಮಾಜಿಕ ಕಾರ್ಯ, ಸಾರ್ವಜನಿಕ ವ್ಯವಹಾರಗಳು, ವಿಜ್ಞಾನ, ಎಂಜಿನಿಯರಿಂಗ್, ವ್ಯಾಪಾರ, ಕೈಗಾರಿಕೆ, ಔಷಧ, ಸಾಹಿತ್ಯ, ಶಿಕ್ಷಣ, ಕ್ರೀಡೆ ಮತ್ತು ನಾಗರಿಕ ಸೇವೆಯಂತಹ ವೈವಿಧ್ಯಮಯ ಕ್ಷೇತ್ರಗಳಲ್ಲಿನ ಸಾಧನೆಗೆ ಈ ಪ್ರಶಸ್ತಿ ನೀಡ ಗುರುತಿಸಲಾಗುತ್ತದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:41 pm, Sat, 25 January 25