ಹಿಂದೂಯೇತರ ಕಲಾವಿದರಿಗೆ ಅವಕಾಶ ನೀಡದಿದ್ದಕ್ಕೆ ಕೂಡಲಮಾಣಿಕ್ಯಂ ಉತ್ಸವ ಬಹಿಷ್ಕರಿಸಿದ ಮೂವರು ನೃತ್ಯಗಾರರು

Koodalmanikyam Festival: ಕೂಡಲಮಾಣಿಕ್ಯ ರಾಷ್ಟ್ರೀಯ ನೃತ್ಯೋತ್ಸವದಲ್ಲಿ ಪಾಲ್ಗೊಳ್ಳಬೇಕಿದ್ದ ಭರತನಾಟ್ಯ ಕಲಾವಿದರಾದ ದೇವಿಕಾ ಸಜೀವನ್, ಅಂಜು ಅರವಿಂದ್ ಮತ್ತು ಕಾರ್ತಿಕ್ ಮಣಿಕಂದನ್ ಅವರು ಮಾನ್ಸಿಯಾಗೆ ಬೆಂಬಲ ವ್ಯಕ್ತಪಡಿಸಿ ನೃತ್ಯೋತ್ಸವದಿಂದ ಹಿಂದೆ ಸರಿದಿದ್ದಾರೆ.

ಹಿಂದೂಯೇತರ ಕಲಾವಿದರಿಗೆ ಅವಕಾಶ ನೀಡದಿದ್ದಕ್ಕೆ ಕೂಡಲಮಾಣಿಕ್ಯಂ ಉತ್ಸವ ಬಹಿಷ್ಕರಿಸಿದ ಮೂವರು ನೃತ್ಯಗಾರರು
ಕೂಡಲಮಾಣಿಕ್ಯಂ ಉತ್ಸವ ಬಹಿಷ್ಕರಿಸಿದ ನೃತ್ಯ ಕಲಾವಿದರು
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Apr 01, 2022 | 6:47 PM

ನವದೆಹಲಿ: ‘ಹಿಂದೂ ಅಲ್ಲ’ ಎಂಬ ಕಾರಣಕ್ಕೆ ಕೇರಳದ ಶ್ರೀ ಕೂಡಲಮಾಣಿಕ್ಯ ದೇವಸ್ಥಾನದಲ್ಲಿ (Koodalmanikyam Temple) ಭರತನಾಟ್ಯ ಕಲಾವಿದೆ ವಿ.ಪಿ. ಮಾನ್ಸಿಯಾ ಅವರಿಗೆ ವೇದಿಕೆ ಹತ್ತಲು ಅವಕಾಶ ನೀಡದ ಪ್ರಕರಣ ದೇಶಾದ್ಯಂತ ಚರ್ಚೆಯಾಗುತ್ತಿದೆ. ನೃತ್ಯ ಕಲಾವಿದೆ ಮಾನ್ಸಿಕಾ ಅವರಿಗೆ ದೇಶದ ವಿವಿಧೆಡೆಯಿಂದ ಬೆಂಬಲ ವ್ಯಕ್ತವಾಗುತ್ತಿದ್ದು, ಇದೀಗ ಆಕೆಗೆ ಬೆಂಬಲಿಸಿ ಕೇರಳದ ಮೂವರು ಯುವ ನೃತ್ಯಗಾರರು ದೇವಸ್ಥಾನ ಆಯೋಜಿಸಿದ್ದ ಕೂಡಲಮಾಣಿಕ್ಯ ರಾಷ್ಟ್ರೀಯ ನೃತ್ಯೋತ್ಸವದಿಂದ (Koodalmanikyam Festival) ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ. ರಾಷ್ಟ್ರೀಯ ನೃತ್ಯೋತ್ಸವದಲ್ಲಿ ಪಾಲ್ಗೊಳ್ಳಬೇಕಿದ್ದ ಭರತನಾಟ್ಯ ಕಲಾವಿದರಾದ ದೇವಿಕಾ ಸಜೀವನ್, ಅಂಜು ಅರವಿಂದ್ ಮತ್ತು ಕಾರ್ತಿಕ್ ಮಣಿಕಂದನ್ ಅವರು ಮಾನ್ಸಿಯಾಗೆ ಬೆಂಬಲ ವ್ಯಕ್ತಪಡಿಸಿ ನೃತ್ಯೋತ್ಸವದಿಂದ ಹಿಂದೆ ಸರಿದಿದ್ದಾರೆ.

ಕೇರಳದ ಪ್ರಸಿದ್ಧ ಕೂಡಲಮಾಣಿಕ್ಯಂ ದೇವಸ್ಥಾನದಲ್ಲಿ 10 ದಿನಗಳ ಸಾಂಸ್ಕೃತಿಕ ಉತ್ಸವ ನಡೆಯಲಿದೆ. ಈ ಉತ್ಸವದಲ್ಲಿ ಮಾನ್ಸಿಕಾ ಎಂಬ ಮುಸ್ಲಿಂ ಮಹಿಳೆಗೆ ನೃತ್ಯ ಪ್ರದರ್ಶಿಸಲು ಅವಕಾಶ ಕೊಟ್ಟಿರಲಿಲ್ಲ. ಧರ್ಮದ ಕಾರಣಕ್ಕೆ ದೇವಸ್ಥಾನದ ಮಂಡಳಿಯವರಿಂದ ಅವಮಾನವನ್ನು ಎದುರಿಸಿದ ಸಹ ಕಲಾವಿದರೊಂದಿಗೆ ನಾವು ನಿಲ್ಲುವ ಅವಶ್ಯಕತೆಯಿದೆ ಎಂದು ನಾನು ಭಾವಿಸುತ್ತೇನೆ. ಏಪ್ರಿಲ್ 24ರಂದು ಕೂಡಲಮಾಣಿಕ್ಯಂ ನೃತ್ಯೋತ್ಸವದಲ್ಲಿ ಈ ಪ್ರದರ್ಶನವನ್ನು ಮಾಡುವುದು ಬೇಡ ಎಂದು ನಾನು ನಿರ್ಧರಿಸಿದ್ದೇನೆ ಎಂದು ದೇವಿಕಾ ಸಜೀವನ್ ಹೇಳಿದ್ದಾರೆ.

ನೃತ್ಯಕ್ಕೆ ಧರ್ಮದ ಹಂಗಿಲ್ಲ. ನೃತ್ಯೋತ್ಸವದಲ್ಲಿ ಹಿಂದೂಗಳಲ್ಲ ಎಂಬ ಕಾರಣಕ್ಕೆ ನೃತ್ಯ ಪ್ರದರ್ಶನಕ್ಕೆ ಅವಕಾಶ ನೀಡದಿದ್ದರೆ ಅವರು ನಮ್ಮಂತಹ ಕಲಾವಿದರಿಗೆ ನೀಡುವ ಬೆಲೆ ಏನು? ಎಂದು ನೃತ್ಯ ಕಲಾವಿದ ಕಾರ್ತಿಕ್ ಪ್ರಶ್ನಿಸಿದ್ದಾರೆ.

ನೃತ್ಯೋತ್ಸವದಲ್ಲಿ ಪ್ರದರ್ಶನ ನೀಡುವುದರಿಂದ ಹಿಂದೆ ಸರಿಯಲು ಹಲವಾರು ಕಾರಣಗಳನ್ನು ಪಟ್ಟಿ ಮಾಡಿದ ಅಂಜು ಅರವಿಂದ್, ಕಳೆದ ಬಾರಿ ಇಂತಹ ನಿರ್ಬಂಧಗಳು ಇರಲಿಲ್ಲ. ನನ್ನ ಸ್ನೇಹಿತ ಕಾರ್ಯಕ್ರಮವನ್ನು ಖಚಿತಪಡಿಸಲು ಹೋದಾಗ ಅವನು ಹಿಂದೂ ಎಂಬುದನ್ನು ಖಚಿತಪಡಿಸಲು ಒತ್ತಾಯಿಸಲಾಯಿತು. ಹಲವಾರು ಕಲಾವಿದರಿಗೆ ಇದೇ ಕಾರಣದಿಂದ ದೃಢೀಕರಣದ ನಂತರವೂ ಅವಕಾಶ ನೀಡಲು ನಿರಾಕರಿಸಲಾಯಿತು ಎಂದಿದ್ದಾರೆ.

ಮುಸ್ಲಿಂ ಸಮುದಾಯದ ಮಾನ್ಸಿಯಾ ಮಾತ್ರವಲ್ಲದೆ ಕ್ರಿಶ್ಚಿಯನ್ ನೃತ್ಯ ಕಲಾವಿದೆ ಸೌಮ್ಯಾ ಸುಕುಮಾರನ್ ಅವರಿಗೂ ಧರ್ಮದ ಆಧಾರದ ಮೇಲೆ ವೇದಿಕೆಯಲ್ಲಿ ನೃತ್ಯ ಪ್ರದರ್ಶನಕ್ಕೆ ಅವಕಾಶ ನೀಡಲು ನಿರಾಕರಿಸಲಾಗಿದೆ ಎಂದು ಆರೋಪಿಸಿದ್ದರು.

ಇದನ್ನೂ ಓದಿ: ಕೇರಳದ ಕೂಡಲಮಾಣಿಕ್ಯಂ ದೇಗುಲದಲ್ಲಿ ನೃತ್ಯ ಪ್ರದರ್ಶನಕ್ಕೆ ನನಗೂ ಅವಕಾಶ ಕೊಡಲಿಲ್ಲ; ಮತ್ತೊಬ್ಬ ಭರತನಾಟ್ಯ ಕಲಾವಿದೆಯಿಂದ ಆರೋಪ

ಹಿಂದೂ ಅಲ್ಲ ಎಂಬ ಕಾರಣದಿಂದ ಕೇರಳದ ಭರತನಾಟ್ಯ ಕಲಾವಿದೆಗೆ ದೇವಸ್ಥಾನದಲ್ಲಿ ಪ್ರದರ್ಶನ ನೀಡಲು ನಿರ್ಬಂಧ; ನಾನು ಯಾವುದೇ ಧರ್ಮಕ್ಕೆ ಸೇರಿಲ್ಲ ಎಂದ ಕಲಾವಿದೆ

ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು