ರಾಜಸ್ಥಾನದ ಖತು ಶ್ಯಾಮ್ ದೇವಸ್ಥಾನದಲ್ಲಿ ಇಂದು ಮುಂಜಾನೆ ಕಾಲ್ತುಳಿತ; ಮೂವರು ಸಾವು, ಇಬ್ಬರಿಗೆ ಗಾಯ
Rajasthan News: ಇಂದು ಭಗವಾನ್ ಕೃಷ್ಣನ ಅವತಾರವೆಂದು ನಂಬಲಾದ ಖತು ಶ್ಯಾಮ್ ಜಿಯ ದರ್ಶನಕ್ಕೆ ಬಹಳ ಮಂಗಳಕರ ದಿನವೆಂದು ಪರಿಗಣಿಸಲಾಗುತ್ತದೆ. ದೇವಸ್ಥಾನದ ಪ್ರವೇಶ ದ್ವಾರದಲ್ಲಿ ಬೆಳಗ್ಗೆ 5 ಗಂಟೆ ಸುಮಾರಿಗೆ ಕಾಲ್ತುಳಿತ ಸಂಭವಿಸಿದೆ.
ಜೈಪುರ: ರಾಜಸ್ಥಾನದ ಸಿಕಾರ್‌ನಲ್ಲಿರುವ ಖತು ಶ್ಯಾಮ್ ದೇವಸ್ಥಾನದಲ್ಲಿ (Khatu Shyam Temple) ಇಂದು (ಸೋಮವಾರ) ಮುಂಜಾನೆ ಸಂಭವಿಸಿದ ಕಾಲ್ತುಳಿತದಲ್ಲಿ (Stampede) ಮೂವರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಗಾಯಗೊಂಡ ಇಬ್ಬರನ್ನು ಚಿಕಿತ್ಸೆಗಾಗಿ ಜೈಪುರದ ಆಸ್ಪತ್ರೆಗೆ ರವಾನಿಸಲಾಗಿದೆ.
ದೇವಸ್ಥಾನದ ಪ್ರವೇಶ ದ್ವಾರದಲ್ಲಿ ಬೆಳಗ್ಗೆ 5 ಗಂಟೆ ಸುಮಾರಿಗೆ ಕಾಲ್ತುಳಿತ ಸಂಭವಿಸಿದೆ ಎನ್ನಲಾಗಿದೆ. ಇಂದು ಭಗವಾನ್ ಕೃಷ್ಣನ ಅವತಾರವೆಂದು ನಂಬಲಾದ ಖತು ಶ್ಯಾಮ್ ಜಿಯ ದರ್ಶನಕ್ಕೆ ಬಹಳ ಮಂಗಳಕರ ದಿನವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ, ಮುಂಜಾನೆಯಿಂದಲೇ ಭಕ್ತರ ಸಂಖ್ಯೆ ಹೆಚ್ಚಾಗಿತ್ತು.
ಇದನ್ನೂ ಓದಿ: Tirupati Temple: ತಿರುಪತಿ ತಿರುಮಲ ವೆಂಕಟೇಶ್ವರ ದೇವಸ್ಥಾನದಲ್ಲಿ ಕಾಲ್ತುಳಿತ; ಮೂವರಿಗೆ ಗಾಯ
ಪೊಲೀಸರ ಪ್ರಕಾರ, ದೇವಾಲಯದ ಹೊರಗೆ ದೊಡ್ಡ ಜನಸಮೂಹ ಜಮಾಯಿಸಿ, ಗೇಟ್ ತೆರೆಯುವುದನ್ನೇ ಕಾಯುತ್ತಿದ್ದರು. ಗೇಟ್‌ಗಳು ತೆರೆಯುತ್ತಿದ್ದಂತೆ ಜನರು ಒಳಗೆ ಬರಲು ಒಬ್ಬರ ಮೇಲೆ ಒಬ್ಬರು ಬಿದ್ದು ಮುನ್ನುಗ್ಗಲು ಪ್ರಯತ್ನಿಸಿದಾಗ ಮಹಿಳೆಯೊಬ್ಬರು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಇದರಿಂದಾಗಿ ಅವರ ಹಿಂದೆ ಇದ್ದವರು ಸಹ ಕೆಳಗೆ ಬಿದ್ದಿದ್ದಾರೆ. ಈ ಕಾಲ್ತುಳಿತದಲ್ಲಿ ಮೂವರು ಮಹಿಳೆಯರು ಪ್ರಾಣ ಕಳೆದುಕೊಂಡಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ಕೂಡಲೇ ದೇವಸ್ಥಾನಕ್ಕೆ ಧಾವಿಸಿದ ಪೊಲೀಸ್ ಸಿಬ್ಬಂದಿ ಗುಂಪನ್ನು ನಿಯಂತ್ರಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿದೆ, ಜನಸಂದಣಿಯನ್ನು ನಿಯಂತ್ರಿಸಲಾಗುತ್ತಿದೆ ಎಂದು ಸಿಕಾರ್‌ನ ಪೊಲೀಸ್ ಎಸ್ಪಿ ಕುನ್ವರ್ ರಾಷ್ಟ್ರದೀಪ್ ತಿಳಿಸಿದ್ದಾರೆ.
ಖಾತು ಶ್ಯಾಮ್ ಜಿ ದೇವಸ್ಥಾನವು ರಾಜಸ್ಥಾನದ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿಗೆ ಸಾಕಷ್ಟು ಭಕ್ತರು ಬರುತ್ತಾರೆ. ಕೆಲವೊಮ್ಮೆ ಕಿಲೋಮೀಟರ್ಗಟ್ಟಲೆ ಉದ್ದದ ಸಾಲು ಕೂಡ ಇರುತ್ತದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:13 am, Mon, 8 August 22