ಟಿ 20 ವಿಶ್ವಕಪ್​ ಪಂದ್ಯದಲ್ಲಿ ಪಾಕ್​ ಗೆಲುವು ಸಂಭ್ರಮಿಸಿದ 3 ವಿದ್ಯಾರ್ಥಿಗಳ ಬಂಧನ; ದೇಶದ್ರೋಹ ಕೇಸ್​ ದಾಖಲಿಸಲು ಯುಪಿ ಸರ್ಕಾರ ನಿರ್ಧಾರ

ಟಿ 20 ವಿಶ್ವಕಪ್​ ಪಂದ್ಯದಲ್ಲಿ ಪಾಕ್​ ಗೆಲುವು ಸಂಭ್ರಮಿಸಿದ 3 ವಿದ್ಯಾರ್ಥಿಗಳ ಬಂಧನ; ದೇಶದ್ರೋಹ ಕೇಸ್​ ದಾಖಲಿಸಲು ಯುಪಿ ಸರ್ಕಾರ ನಿರ್ಧಾರ
ಸಾಂಕೇತಿಕ ಚಿತ್ರ

ಪಾಕಿಸ್ತಾನದ ಗೆಲುವನ್ನು ಸಂಭ್ರಮಿಸುವವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು ಮಾಡಲಾಗುವುದು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾಗಿ ಮುಖ್ಯಮಂತ್ರಿ​ ಕಚೇರಿ ಇಂದು ಬೆಳಗ್ಗೆ ಟ್ವೀಟ್​ ಮಾಡಿದೆ.

TV9kannada Web Team

| Edited By: Lakshmi Hegde

Oct 28, 2021 | 1:25 PM

ಇತ್ತೀಚೆಗೆ ನಡೆದ ಟಿ 20 ವಿಶ್ವಕಪ್​ ಪಂದ್ಯದಲ್ಲಿ ಪಾಕಿಸ್ತಾನದ ಎದುರು ಭಾರತ ಸೋತಿದ್ದು ಇಲ್ಲಿನ ಕ್ರಿಕೆಟ್​ ಪ್ರೇಮಿಗಳಿಗೆ ತೀವ್ರ ಬೇಸರ ಉಂಟು ಮಾಡಿದೆ. ಭಾರತ-ಪಾಕಿಸ್ತಾನ ಕ್ರಿಕೆಟ್​ (India Pakistan T20) ಪಂದ್ಯವೆಂದರೆ ಮೊದಲಿನಿಂದಲೂ ಅಲ್ಲೊಂದು ಪ್ರತಿಷ್ಠೆ ಇದ್ದೇ ಇರುತ್ತದೆ. ಅದನ್ನು ಹೆಚ್ಚಿನವರು ದ್ವೇಷದ ದೃಷ್ಟಿಯಿಂದಲೇ ನೋಡುತ್ತಾರೆ. ಅದರೊಂದಿಗೆ ಪಾಕಿಸ್ತಾನ(Pakistan)ದ ಗೆಲುವನ್ನು ಸಂಭ್ರಮಿಸುವವರೂ ಅಲ್ಲೊಬ್ಬರು, ಇಲ್ಲೊಬ್ಬರು ಸಿಗುತ್ತಾರೆ. ಹಾಗೇ ಈ ಬಾರಿ ಟಿ 20ಯಲ್ಲಿ ಪಾಕ್​ ಗೆದ್ದಿದ್ದನ್ನು ಸಂಭ್ರಮಿಸಿದ ಮೂವರು ವಿದ್ಯಾರ್ಥಿಗಳನ್ನು ಉತ್ತರಪ್ರದೇಶದ ಆಗ್ರಾದಲ್ಲಿ ಬಂಧಿಸಲಾಗಿದೆ. 

ಪಾಕಿಸ್ತಾನದ ಗೆಲುವನ್ನು ಸಂಭ್ರಮಿಸುವವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು ಮಾಡಲಾಗುವುದು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾಗಿ ಮುಖ್ಯಮಂತ್ರಿ​ ಕಚೇರಿ ಇಂದು ಬೆಳಗ್ಗೆ ಟ್ವೀಟ್​ ಮಾಡಿದೆ. ಬಂಧಿತರಾದ ಮೂರು ವಿದ್ಯಾರ್ಥಿಗಳೂ ಕಾಶ್ಮೀರದವರೇ ಆಗಿದ್ದು, ರಾಜಾ ಬಲವಂತ್​ ಸಿಂಗ್​ ಕಾಲೇಜಿನಲ್ಲಿ ಇಂಜನಿಯರಿಂಗ್​ ಓದುತ್ತಿದ್ದಾರೆ. ಬಂಧಿತರನ್ನು ಅರ್ಶೀದ್​ ಯುಸುಫ್​, ಇನಾಯತ್​ ಅಲ್ತಫ್​ ಶೇಖ್​​ ಮತ್ತು ಶೌಕತ್​ ಅಹ್ಮದ್​ ಗನೈ ಎಂದು ಗುರುತಿಸಲಾಗಿದೆ. ಇವರಲ್ಲಿ ಅರ್ಶೀದ್​ ಮತ್ತು ಇನಾಯತ್​ ಇಬ್ಬರೂ ಇಂಜನಿಯರಿಂಗ್​ ಪದವಿ ಮೂರನೇ ವರ್ಷದಲ್ಲಿ, ಶೌಕತ್​ ನಾಲ್ಕನೇ ವರ್ಷದಲ್ಲಿ ಓದುತ್ತಿದ್ದಾರೆ.  ಧರ್ಮದ ಆಧಾರದ ಮೇಲೆ ಗುಂಪುಗಳ ನಡುವೆ ವೈರತ್ವ ಮತ್ತು ಸೈಬರ್​ ಭಯೋತ್ಪಾದನೆಯನ್ನು ಉತ್ತೇಜಿಸಿದ ಆರೋಪದಡಿ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ.

ಸದ್ಯ ಕಾಲೇಜು ಮೂವರು ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿದೆ. ಅವರು ಪಾಕಿಸ್ತಾನ ಪರ ಸ್ಟೇಟಸ್​ ಹಾಕುತ್ತಿದ್ದು, ಅಶಿಸ್ತಿನ ವರ್ತನೆ ತೋರಿಸುತ್ತಿದ್ದುದು ಬೆಳಕಿಗೆ ಬಂದ ನಂತರ ಅವರನ್ನು ಅಮಾನತುಗೊಳಿಸಿಸಲಾಗಿದೆ ಎಂದು ಕಾಲೇಜು ತಿಳಿಸಿದೆ. ಇವರ ಹೊರತಾಗಿ, ಕ್ರಿಕೆಟ್ ಪಂದ್ಯಕ್ಕೆ ಸಂಬಂಧಪಟ್ಟ ಪ್ರಕರಣದಲ್ಲಿ ಲಖನೌದಿಂದ ಮೂವರನ್ನು, ಬರೇಲಿಯಲ್ಲಿ ಒಬ್ಬನನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ನೀಡುವ ಹಾಸನಾಂಬೆ ದೇವಸ್ಥಾನದ ಬಾಗಿಲು ಓಪನ್, ನಾಳೆಯಿಂದ ಭಕ್ತರಿಗೆ ದರ್ಶನ ಭಾಗ್ಯ

Redmi Note 11 Series: ಇಂದು ಬಹುನಿರೀಕ್ಷಿತ ರೆಡ್ಮಿ ನೋಟ್ 11 ಸರಣಿ ಸ್ಮಾರ್ಟ್​ಫೋನ್ ಬಿಡುಗಡೆ: ಏನು ವಿಶೇಷತೇ?, ಬೆಲೆ?

Follow us on

Related Stories

Most Read Stories

Click on your DTH Provider to Add TV9 Kannada