Redmi Note 11 Series: ಇಂದು ಬಹುನಿರೀಕ್ಷಿತ ರೆಡ್ಮಿ ನೋಟ್ 11 ಸರಣಿ ಸ್ಮಾರ್ಟ್​ಫೋನ್ ಬಿಡುಗಡೆ: ಏನು ವಿಶೇಷತೇ?, ಬೆಲೆ?

TV9 Digital Desk

| Edited By: Vinay Bhat

Updated on: Oct 28, 2021 | 12:40 PM

Redmi Note 11, Redmi Note 11 Pro and Redmi Note 11 Pro+ launch: ಶವೋಮಿಯ ರೆಡ್ಮಿ ನೋಟ್ 11, ರೆಡ್ಮಿ ನೋಟ್ 11 ಪ್ರೊ ಮತ್ತು ರೆಡ್ಮಿ ನೋಟ್ 11 ಪ್ರೊ ಪ್ಲಸ್ ಫೋನ್​ಗಳು ಇಂದು ಬಿಡುಗಡೆ ಆಗುತ್ತಿದೆ. ಚೀನಾದಲ್ಲಿ ಈ ಫೋನ್ ಅನಾವರಣಗೊಳ್ಳಲಿದ್ದು, ಭಾರತೀಯ ಕಾಲಮಾನದ ಪ್ರಕಾರ 4:30PM ಗೆ ನೀವು ಶವೋಮಿಯ ಚೀನಾ ವೆಬ್​ಸೈಟ್​ನಲ್ಲಿ ಲೈವ್ ವೀಕ್ಷಿಸಬಹುದು.

Redmi Note 11 Series: ಇಂದು ಬಹುನಿರೀಕ್ಷಿತ ರೆಡ್ಮಿ ನೋಟ್ 11 ಸರಣಿ ಸ್ಮಾರ್ಟ್​ಫೋನ್ ಬಿಡುಗಡೆ: ಏನು ವಿಶೇಷತೇ?, ಬೆಲೆ?
Redmi Note 11 and Redmi Note 11 Pro

Follow us on

ಶವೋಮಿ (Xiaomi) ಕಂಪನಿಯ ರೆಡ್ಮಿ ನೋಟ್ ಸರಣಿಯ ಸ್ಮಾರ್ಟ್​ಫೋನ್​ಗಳಿಗೆ (Smartphone) ಭಾರತದಲ್ಲಿ ಎಲ್ಲಿಲ್ಲದ ಬೇಡಿಕೆ ಇದೆ. ಕಳೆದ ವರ್ಷ ಅತಿ ಹೆಚ್ಚು ಸೇಲ್ ಆದ ಸ್ಮಾರ್ಟ್​ಫೋನ್​ಗಳ ಸಾಲಿನಲ್ಲಿ ರೆಡ್ಮಿ ನೋಟ್ 9 (Redmi Note 9) ಮೊದಲ ಸಾಲಿನಲ್ಲಿತ್ತು. ರೆಡ್ಮಿ ನೋಟ್ 2 ಸರಣಿಯಿಂದ ಹಿಡಿದು ಈಗ ರೆಡ್ಮಿ ತನ್ನ ನೋಟ್​ನಲ್ಲಿ 11ನೇ ಆವೃತ್ತಿಯ ಫೋನನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಈ ರೆಡ್ಮಿ ನೋಟ್ 11 ಸರಣಿ (Redmi Note 11 Series) ಇಂದು ಅಕ್ಟೋಬರ್ 28 ರಂದು ಮಾರುಕಟ್ಟೆಗೆ ಎಂಟ್ರಿ ನೀಡಲಿದೆ. ಇದರಲ್ಲಿ ರೆಡ್ಮಿ ನೋಟ್ 11 (Redmi Note 11), ರೆಡ್ಮಿ ನೋಟ್ 11 ಪ್ರೊ (Redmi Note 11 Pro) ಮತ್ತು ರೆಡ್ಮಿ ನೋಟ್ 11 ಪ್ರೊ ಪ್ಲಸ್ (Redmi Note 11 Pro+) ಸ್ಮಾರ್ಟ್‌ ಫೋನ್ ಗಳನ್ನು ಒಳಗೊಂಡಿರುತ್ತದೆ. ಚೀನಾದಲ್ಲಿ ಈ ಫೋನ್ ಅನಾವರಣಗೊಳ್ಳಲಿದ್ದು, ಭಾರತೀಯ ಕಾಲಮಾನದ ಪ್ರಕಾರ 4:30PM ಗೆ ನೀವು ಶವೋಮಿಯ ಚೀನಾ ವೆಬ್​ಸೈಟ್​ನಲ್ಲಿ ಲೈವ್ ವೀಕ್ಷಿಸಬಹುದು.

ರೆಡ್ಮಿ ನೋಟ್ 11: ರೆಡ್ಮಿ ನೋಟ್ 11 ಸ್ಮಾರ್ಟ್‌ಫೋನ್‌ 6.5-ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ LCD ಡಿಸ್‌ಪ್ಲೇ ಹೊಂದಿರಲಿದೆ. ಇದು ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 810 SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್‌ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆಯಂತೆ. ಜೊತೆಗೆ 8GB RAM ಹೊಂದಿರಲಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ ಡ್ಯುಯೆಲ್‌ ರಿಯರ್‌ ಕ್ಯಾಮೆರಾ ಸೆಟಪ್ ಹೊಂದಿದ್ದು, ಮುಖ್ಯ ಕ್ಯಾಮೆರಾ 50ಮೆಗಾಪಿಕ್ಸೆಲ್‌ ಸೆನ್ಸಾರ್‌ ಹೊಂದಿದೆ. ಇನ್ನು 16 ಮೆಗಾಪಿಕ್ಸೆಲ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, 33W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ.

ರೆಡ್ಮಿ ನೋಟ್ 11 ಪ್ರೊ: ರೆಡ್ಮಿ ನೋಟ್ 11 ಪ್ರೊ 6.5 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ LCD ಡಿಸ್‌ಪ್ಲೇ ಹೊಂದಿರಲಿದೆ. ಇದು ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 920 SoC ಪ್ರೊಸೆಸರ್‌ ಹೊಂದಿದೆ. ಹಾಗೆಯೇ 8GB RAM ಅನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಹೊಂದಿದೆ, ಇದರಲ್ಲಿ ಮುಖ್ಯ ಕ್ಯಾಮೆರಾ ಬರೋಬ್ಬರಿ 108 ಮೆಗಾಪಿಕ್ಸೆಲ್ ಸ್ಯಾಮ್ಸಂಗ್ HM2 ಪ್ರೈಮರಿ ಸೆನ್ಸರ್ ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೋನಿ IMX355 ಅಲ್ಟ್ರಾ-ವೈಡ್ ಲೆನ್ಸ್‌ ಹೊಂದಿದೆ. ಮೂರನೇ ಕ್ಯಾಮೆರಾ 2-ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಹೊಂದಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

ರೆಡ್ಮಿ ನೋಟ್ 11 ಪ್ರೊ ಪ್ಲಸ್‌: ರೆಡ್ಮಿ ನೋಟ್ 11 ಪ್ರೊ ಪ್ಲಸ್‌ ಸ್ಮಾರ್ಟ್‌ಫೋನ್‌ ವಿಶೇಷತೆ ಹೆಚ್ಚು ಕಡಿಮೆ ರೆಡ್ಮಿ ನೋಟ್‌11 ಪ್ರೊ ಮಾದರಿಯಲ್ಲಿಯೇ ಇರಲಿದೆ. ಆದರೆ ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 1200 ಪ್ರೊಸೆಸರ್ ಬಲವನ್ನು ಪಡೆದುಕೊಳ್ಳಬಹುದು ಎನ್ನಲಾಗಿದೆ.

ರೆಡ್ಮಿ ನೋಟ್ 11 ಸ್ಮಾರ್ಟ್‌ಫೋನ್‌ 4GB RAM ಮತ್ತು 128GB ಸ್ಟೋರೇಜ್ ರೂಪಾಂತರದ ಆಯ್ಕೆಗೆ ಸಿಎನ್‌ವೈ 1,199 ಅಂದರೆ ಭಾರತದಲ್ಲಿ ಇದರ ಬೆಲೆ ಅಂದಾಜು 14,050 ರೂ. ಇರಬಹುದು. ಇನ್ನು ಈ ಫೋನ್‌ 6GB RAM ಮತ್ತು 128 GB ಸ್ಟೋರೇಜ್ ರೂಪಾಂತರದ ಬೆಲೆ CNY 1,399 (ಸುಮಾರು ರೂ. 16,300) ಆಗಿರುತ್ತದೆ. ರೆಡ್ಮಿ ನೋಟ್ 11 ಪ್ರೊ 6GB RAM ಮತ್ತು 128GB ಸ್ಟೋರೇಜ್ ರೂಪಾಂತರದ ಬೆಲೆ ಸಿಎನ್‌ವೈ 1,599 (ಅಂದಾಜು 18,700 ರೂ.) ಬೆಲೆ ಹೊಂದಿದೆ. 8GB RAM ಮತ್ತು 256GB ಸ್ಟೋರೇಜ್ ರೂಪಾಂತರದ ಬೆಲೆ CNY 1,999 (ಅಂದಾಜು 18,700 ರೂ.) ಬೆಲೆ ಹೊಂದಿದೆ. ರೆಡ್ಮಿ ನೋಟ್‌ 11 ಪ್ರೊ ಪ್ಲಸ್‌ 8 GB RAM ಮತ್ತು 128 GB ಸ್ಟೋರೇಜ್ ರೂಪಾಂತರವು CNY 2,199 (ಅಂದಾಜು ರೂ. 25,713) ಬೆಲೆ ಹೊಂದಿದೆ.

Money Sent to Wrong Account: ತಪ್ಪಾಗಿ ಬೇರೆಯವರ ಖಾತೆಗೆ ಹಣ ವರ್ಗಾವಣೆ ಆಯ್ತಾ?: ಹೀಗೆ ಮಾಡಿದ್ರೆ ತಕ್ಷಣ ಹಣ ವಾಪಾಸ್

(Redmi Note 11 Redmi Note 11 Pro and Redmi Note 11 ProPlus launch at 4-30 PM IST today)

ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada