AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Flipkart Big Diwali Sale: ಫ್ಲಿಪ್​ಕಾರ್ಟ್ ಬಿಗ್ ದೀಪಾವಳಿ ಸೇಲ್‌: ಪೊಕೊ ಸ್ಮಾರ್ಟ್​ಫೋನ್ ಖರೀದಿಸಲು ಕ್ಯೂ ನಿಂತ ಜನರು

ಫ್ಲಿಪ್​ಕಾರ್ಟ್ ಬಿಗ್ ದೀಪಾವಳಿ ಸೇಲ್​ನಲ್ಲಿ ಪೊಕೊ ಕಂಪೆನಿಯ ಫೋನ್‌ಗಳ ಮೇಲೆ ಹೆಚ್ಚಿನ ರಿಯಾಯಿತಿ ನೀಡಿದೆ. ಪೊಕೊ ಕಂಪೆನಿಯ ಜನಪ್ರಿಯ ಫೋನ್‌ಗಳಾದ ಪೊಕೊ X3 ಪ್ರೊ, ಪೊಕೊ M2 ಪ್ರೊ, ಪೊಕೊ C3 ಮೇಲೆ ಬಿಗ್‌ ಆಫರ್‌ ಘೋಷಿಸಲಾಗಿದೆ.

Flipkart Big Diwali Sale: ಫ್ಲಿಪ್​ಕಾರ್ಟ್ ಬಿಗ್ ದೀಪಾವಳಿ ಸೇಲ್‌: ಪೊಕೊ ಸ್ಮಾರ್ಟ್​ಫೋನ್ ಖರೀದಿಸಲು ಕ್ಯೂ ನಿಂತ ಜನರು
Poco Smartphone Flipkart Big Diwali Sale
TV9 Web
| Updated By: Vinay Bhat|

Updated on: Oct 28, 2021 | 2:39 PM

Share

ಫ್ಲಿಪ್​ಕಾರ್ಟ್​ನಲ್ಲಿ (Flipkart) ಅಕ್ಟೋಬರ್ 23ಕ್ಕೆ ಮುಕ್ತಾಯಗೊಂಡಿದ್ದ ಬಿಗ್ ದೀಪಾವಳಿ ಸೇಲ್‌ (Flipkart Big Diwali Sale) ಈಗ ಮತ್ತೆ ಬಂದಿದೆ. ಈ ಹಿಂದೆ ಈ ಆಫರ್‌ ಮಿಸ್‌ ಮಾಡಿಕೊಂಡವರಿಗೆ ಮತ್ತೊಮ್ಮೆ ಆಯೋಜಿಸಲಾದ. ಬಿಗ್ ದೀಪಾವಳಿ ಸೇಲ್‌ ಅಕ್ಟೋಬರ್ 28 ಅಂದರೆ ಇಂದಿನಿಂದ ಆರಂಭವಾಗಿದ್ದು ನವೆಂಬರ್ 3, 2021 ರವರೆಗೆ ನಡೆಯಲಿದೆ. ಇದರಲ್ಲಿ ಮೊಬೈಲ್‌ಗಳು (Smartphone), ಟ್ಯಾಬ್ಲೆಟ್‌ಗಳು, ಸ್ಮಾರ್ಟ್​​ ಟಿವಿಗಳು (Smart TV) ಮತ್ತು ಇತರ ಎಲೆಕ್ಟ್ರಾನಿಕ್ಸ್‌ಗಳಲ್ಲಿ ಕೆಲವು ರೋಮಾಂಚಕಾರಿ ಡೀಲ್‌ಗಳನ್ನು ಪಡೆಯಬಹುದಾಗಿದೆ. ಅದರಲ್ಲೂ ಪೊಕೊ ಕಂಪೆನಿಯ ಫೋನ್‌ಗಳ (Poco Smartphone) ಮೇಲೆ ಹೆಚ್ಚಿನ ರಿಯಾಯಿತಿ ನೀಡಿದೆ. ಪೊಕೊ ಕಂಪೆನಿಯ ಜನಪ್ರಿಯ ಫೋನ್‌ಗಳಾದ ಪೊಕೊ X3 ಪ್ರೊ, ಪೊಕೊ M2 ಪ್ರೊ, ಪೊಕೊ C3 ಮೇಲೆ ಬಿಗ್‌ ಆಫರ್‌ ಘೋಷಿಸಲಾಗಿದೆ. ಇನ್ನು ಈ ಆಪರ್‌ಗಳಲ್ಲಿ ಕೆಲವು ಮಾದರಿಗಳಲ್ಲಿ “ಕೊನೆಯ ಬಾರಿಗೆ” ಆಫರ್‌ ಎಂದು ಹೇಳಲಾಗಿದೆ.

ಪೊಕೊ X3 ಪ್ರೊ ಸ್ಮಾರ್ಟ್‌ಫೋನ್‌ ಫ್ಲಿಪ್‌ಕಾರ್ಟ್‌ ಬಿಗ್‌ ದೀಪಾವಳಿ ಸೇಲ್‌ನಲ್ಲಿ 7,000 ರೂಪಾಯಿಗಳ ಬೃಹತ್ ಮುಂಗಡ ರಿಯಾಯಿತಿ ಪಡದುಕೊಂಡಿತ್ತು. ಇದರಿಂದ 6GB RAM ಸಾಮರ್ಥ್ಯದ ಆಯ್ಕೆಯ ಮೂಲಬೆಲೆ 23,999ರೂ.ಆಗಿದ್ದು, 16,999 ರೂ. ಗೆ ಲಭ್ಯವಾಗಲಿದೆ. ಹಾಗೆಯೇ 8GB RAM ಆಯ್ಕೆಯು 18,999 ರೂಗಳಿಗೆ ಲಭ್ಯವಿರುತ್ತದೆ. ಇನ್ನು ಈ ಸ್ಮಾರ್ಟ್‌ಫೋನ್‌ ಮೇಲೆ ಮುಂಗಡ ರಿಯಾಯಿತಿ ಮಾತ್ರವಲ್ಲದೆ ಬ್ಯಾಂಕ್‌ ಆಫರ್‌ ಕೂಡ ಲಭ್ಯವಿದೆ. ಈ ಸ್ಮಾರ್ಟ್‌ಫೋನ್‌ 6.67-ಇಂಚಿನ ಫುಲ್‌-ಹೆಚ್‌ಡಿ + ಡಾಟ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಗನ್ 860 SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್ 11 ನಲ್ಲಿ MIUI 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಈ ಫೋನ್‌ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್‌ ಹೊಂದಿದೆ.

ಇನ್ನು ಈ ಸೇಲ್‌ನಲ್ಲಿ ಪೊಕೊ M2 ಪ್ರೊ ಸ್ಮಾರ್ಟ್‌ಫೋನ್‌ ಕೂಡ ಬಿಗ್‌ ಡಿಸ್ಕೌಂಟ್‌ ಪಡೆದಿದೆ. ಇದರಲ್ಲಿ 4GB RAM ಮತ್ತು 64GB ಸ್ಟೋರೇಜ್ ಆಯ್ಕೆಯು ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಸೇಲ್‌ನಲ್ಲಿ ಕೇವಲ 10,799 ರೂ.ಬೆಲೆಗೆ ಲಭ್ಯವಿರುತ್ತದೆ. ಇದರ ಮೂಲಬೆಲೆ 16,999 ರೂ. ಆಗಿದ್ದು, 6,000 ರೂ. ಗಿಂತ ಹೆಚ್ಚಿನ ರಿಯಾಯಿತಿಯನ್ನು ನೀಡುತ್ತದೆ. ಹಾಗೆಯೇ 6GB RAM ಆಯ್ಕೆಯು 11,749ರೂ.ಬೆಲೆಗೆ ಲಭ್ಯವಾಗಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌6.67 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನ ಹೊಂದಿದೆ. ಈ ಫೋನ್‌ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಜೊತೆಗೆ ಪ್ರೊ ಕಲರ್ ಮೋಡ್, ಪ್ರೊ ವಿಡಿಯೋ ಮೋಡ್, ಮತ್ತು ರಾ ಮೋಡ್ ಸೇರಿದಂತೆ ಕ್ಯಾಮೆರಾ ಮೋಡ್‌ಗಳನ್ನ ಈ ಸ್ಮಾರ್ಟ್‌ಫೋನ್ ಒಳಗೊಂಡಿದೆ.

ಪೊಕೊ C3 ಸ್ಮಾರ್ಟ್‌ಫೋನ್‌ 3GB RAM ಮತ್ತು 32GB ಸ್ಟೋರೇಜ್‌ ಸಾಮರ್ಥ್ಯದ ಆಯ್ಕೆಯು ದೀಪಾವಳಿ ಸೇಲ್‌ನಲ್ಲಿ 6,749 ರೂ. ಗಳಿಗೆ ಲಭ್ಯವಾಗಲಿದೆ. ಇದರ ಮೂಲ ಬೆಲೆ 9,999ರೂ.ಆಗಿದ್ದು, 3,000ರೂ. ಕ್ಕಿಂತ ಹೆಚ್ಚಿನ ರಿಯಾಯಿತಿಯನ್ನು ಪಡೆದುಕೊಂಡಿದೆ. ಇನ್ನು ಪೊಕೊ C3 ಸ್ಮಾರ್ಟ್‌ಫೋನ್‌ 6.53 ಇಂಚಿನ ಎಲ್‌ಸಿಡಿ ಡಾಟ್ ಡ್ರಾಪ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಆಕ್ಟಾ-ಕೋರ್ ಮೀಡಿಯಾ ಟೆಕ್ ಹಿಲಿಯೊ G35 SoC ಪ್ರೊಸೆಸರ್ ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ.ಜೊತೆಗೆ 5000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದೆ. ಇದು 10W ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಫ್ಲಿಪ್‌ಕಾರ್ಟ್‌ ಬಿಗ್‌ ದೀಪಾವಳಿ ಸೇಲ್‌ನಲ್ಲಿ ಪೊಕೊ M3 ಮತ್ತು ಪೊಕೊ M3ಪ್ರೊ ಸ್ಮಾರ್ಟ್‌ಫೋನ್‌ ಕ್ರಮವಾಗಿ 9,899 ರೂ. ಮತ್ತು 13,249 ರೂ. ಗಳಿಗೆ ಖರೀದಿಗೆ ಸಿಗುತ್ತಿದೆ.

Infinix Smart 6: ಅತಿ ಕಡಿಮೆ ಬೆಲೆಗೆ ಬಿಡುಗಡೆ ಆಯ್ತು ಮತ್ತೊಂದು ಆಕರ್ಷಕ ಸ್ಮಾರ್ಟ್​ಫೋನ್: ಇಲ್ಲಿದೆ ಮಾಹಿತಿ

Redmi Note 11 Series: ಇಂದು ಬಹುನಿರೀಕ್ಷಿತ ರೆಡ್ಮಿ ನೋಟ್ 11 ಸರಣಿ ಸ್ಮಾರ್ಟ್​ಫೋನ್ ಬಿಡುಗಡೆ: ಏನು ವಿಶೇಷತೇ?, ಬೆಲೆ?

(Poco the Xiaomi spin-off smartphone company announced big discount offers on Flipkart Big Diwali Sale)