ಬ್ಯಾಂಕ್​ ಉದ್ಯೋಗಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ; ಸ್ಥಳದಲ್ಲಿ ಸಿಕ್ಕ ನೋಟ್​​ನಲ್ಲಿ ಐಪಿಎಸ್​ ಅಧಿಕಾರಿ ಹೆಸರು !

| Updated By: Lakshmi Hegde

Updated on: Oct 31, 2021 | 3:42 PM

ಶ್ರದ್ಧಾ ಗುಪ್ತಾ 2015ರಲ್ಲಿ ಕ್ಲರ್ಕ್​ ಆಗಿ ಬ್ಯಾಂಕ್​ಗೆ ಸೇರ್ಪಡೆಯಾಗಿದ್ದರು. ಆದರೆ ನಂತರ ಡಿಪಾರ್ಟಮೆಂಟಲ್​ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಬಡ್ತಿ ಪಡೆದಿದ್ದರು. 2018ರಿಂದಲೂ ಫೈಜಾಬಾದ್​​​ನಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದಾರೆ. ಈಗಂತೂ ಡೆಪ್ಯೂಟಿ ಮ್ಯಾನೇಜರ್​ ಆಗಿದ್ದರು.

ಬ್ಯಾಂಕ್​ ಉದ್ಯೋಗಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ; ಸ್ಥಳದಲ್ಲಿ ಸಿಕ್ಕ ನೋಟ್​​ನಲ್ಲಿ ಐಪಿಎಸ್​ ಅಧಿಕಾರಿ ಹೆಸರು !
ಸಾಂಕೇತಿಕ ಚಿತ್ರ
Follow us on

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಬ್ಯಾಂಕ್​​ವೊಂದರ ಮಹಿಳಾ ಉದ್ಯೋಗಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದೀಗ ಸೋಷಿಯಲ್​ ಮೀಡಿಯಾದಲ್ಲಿ ವಿಪರೀತ ವೈರಲ್ ಆಗುತ್ತಿದ್ದು, ಆಕೆಯ ಸಾವಿಗೆ ನ್ಯಾಯ ಬೇಕೆಂದು ನೆಟ್ಟಿಗರು ಆಗ್ರಹಿಸುತ್ತಿದ್ದಾರೆ. ಅಯೋಧ್ಯೆಯಲ್ಲಿರುವ ಪಂಜಾಬ್​ ನ್ಯಾಶನಲ್​ ಬ್ಯಾಂಕ್​​​ ಶಾಖೆಯ ಉದ್ಯೋಗಿ ಶ್ರದ್ಧಾ ಗುಪ್ತಾ(32) ಎಂಬುವರು ತಮ್ಮ ಮನೆಯಲ್ಲಿ ಅಕ್ಟೋಬರ್​ 30ರಂದು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇದು ಆತ್ಮಹತ್ಯೆ ಎಂದು ಹೇಳಲಾಗುತ್ತಿದ್ದರೂ, ಆಕೆಯ ಕಾಲು ನೆಲಕ್ಕೆ ತಾಗುವಂತೆ ಇದ್ದು ಬಾಗಿದೆ. ಹಾಗಾಗಿ ಕೊಲೆ ಆಯಾಮದಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ಸ್ಥಳೀಯ ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ. ಪೋಸ್ಟ್​ ಮಾರ್ಟಮ್​ ವರದಿ ಬಂದ ನಂತರವಷ್ಟೇ ಮುಂದಿನ ಮಾಹಿತಿ ನೀಡುವುದಾಗಿಯೂ ಹೇಳಿದ್ದಾರೆ.

ಸೂಸೈಡ್​​ ನೋಟ್​​ನಲ್ಲಿ ಐಪಿಎಸ್​ ಅಧಿಕಾರಿ ಹೆಸರು
ಈ ಪ್ರಕರಣ ಬಹುಮುಖ್ಯ ಎನ್ನಿಸಿಕೊಳ್ಳಲು ಕಾರಣ ಶ್ರದ್ಧಾ ಗುಪ್ತಾ ಮೃತಪಟ್ಟ ಜಾಗದಲ್ಲಿ ಸಿಕ್ಕ ಒಂದು ಬರಹ. ಒಂದು ಚಿಕ್ಕ ಕಾಗದದಲ್ಲಿ ಅವರು ಸೂಸೈಡ್ ನೋಟ್​ ಬರೆದಿದ್ದಾರೆ. ಅದರಲ್ಲಿ ಈ ಹಿಂದೆ ಅಯೋಧ್ಯೆಯಲ್ಲಿ ಹಿರಿಯ ಪೊಲೀಸ್​ ವರಿಷ್ಠಾಧಿಕಾರಿ (SSP)ಯಾಗಿದ್ದ ಆಶೀಶ್​ ತಿವಾರಿ ಎಂಬುವರು ಹೆಸರು, ಆಕೆಯ ಮಾಜಿ ಪ್ರಿಯಕರ ವಿವೇಕ್​ ಗುಪ್ತಾ ಮತ್ತು ಫೈಜಾಬಾದ್​​ನಲ್ಲಿ ಪೊಲೀಸ್ ಆಗಿರುವ ಅನಿಲ್​ ರಾವತ್​ ಎಂಬುವರ ಹೆಸರು ಉಲ್ಲೇಖವಿದೆ. ಆದರೆ ಈ ಮೂವರ ವಿರುದ್ಧ ಮಾಡಿದ ಆರೋಪ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಹಾಲಿನವನೇ ಎಚ್ಚರಿಸಿದ್ದು
ಶ್ರದ್ಧಾ ಗುಪ್ತಾ 2015ರಲ್ಲಿ ಕ್ಲರ್ಕ್​ ಆಗಿ ಬ್ಯಾಂಕ್​ಗೆ ಸೇರ್ಪಡೆಯಾಗಿದ್ದರು. ಆದರೆ ನಂತರ ಡಿಪಾರ್ಟಮೆಂಟಲ್​ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಬಡ್ತಿ ಪಡೆದಿದ್ದರು. 2018ರಿಂದಲೂ ಫೈಜಾಬಾದ್​​​ನಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದಾರೆ. ಈಗಂತೂ ಡೆಪ್ಯೂಟಿ ಮ್ಯಾನೇಜರ್​ ಆಗಿದ್ದರು. ಮೂಲತಃ ಲಖನೌದ ರಾಜಾಜಿಪುರಂನವರಾದ ಅವರು ಅವಿವಾಹಿತರು. ಬ್ಯಾಂಕ್​ ಶಾಖೆಯಿದ್ದಲ್ಲೇ ಮನೆ ಮಾಡಿದ್ದ ಅವರು ಆಗಾಗ ತಮ್ಮ ಮನೆಗೆ ಭೇಟಿ ಕೊಡುತ್ತಿದ್ದರು. ಶನಿವಾರ ಫೈಜಾಬಾದ್​​ನಲ್ಲಿರುವ ಅವರ ಮನೆಗೆ ಮುಂಜಾನೆ ಹಾಲು ಕೊಡುವವ ಬಂದಿದ್ದ. ಮೂರ್ನಾಲ್ಕು ಬಾರಿ ಬಾಗಿಲು ಬಡಿದಾಗಲೂ ಯಾರೂ ತೆರೆಯಲಿಲ್ಲ. ಅದನ್ನು ಆತ ಮನೆಯ ಮಾಲೀಕನಿಗೆ ತಿಳಿಸಿದ. ಬಾಗಿಲು ಒಡೆದು ನೋಡಿದಾಗ ಶ್ರದ್ಧಾ ಗುಪ್ತಾ ಹೆಣ ಕಂಡಿತ್ತು ಎಂದು  ಸ್ಥಳೀಯ ಪೊಲೀಸ್ ಅಧಿಕಾರಿ ಶೈಲೇಶ್​ ಪಾಂಡೆ ವಿವರಿಸಿದ್ದಾರೆ.

ಸೋಷಿಯಲ್​ ಮೀಡಿಯಾದಲ್ಲಿ ಟ್ರೆಂಡ್​ 
ಶ್ರದ್ಧಾ ಗುಪ್ತಾ ಸಾವಿನ ಬೆನ್ನಲ್ಲೇ ಆಕೆಯ ಕೆಲ ಸಹೋದ್ಯೋಗಿಗಳು ಟ್ವಿಟರ್​​ನಲ್ಲಿ ವಿಷಯ ಪೋಸ್ಟ್ ಮಾಡಿದರು ಶ್ರದ್ಧಾ ಸಾವಿಗೆ ನ್ಯಾಯ ಬೇಕು ಎಂಬಂಥ ಪೋಸ್ಟರ್​​ಗಳನ್ನು ನೋಡಿದ ಹಲವರು ಅದನ್ನು ಶೇರ್​ ಮಾಡಿಕೊಂಡಿದ್ದಾರೆ. ಈಕೆಯ ಸಾವಿನಲ್ಲಿ ಒಬ್ಬ ಐಪಿಎಸ್ ಅಧಿಕಾರಿಯ ಹೆಸರೂ ಕೇಳುತ್ತಿದೆ. ಕೂಡಲೇ ತನಿಖೆಯಾಗಬೇಕು ಎಂದು ಆಗ್ರಹಿಸುತ್ತಿದ್ದಾರೆ.  #JusticeForShraddha ಹ್ಯಾಷ್​ಟ್ಯಾಗ್​ ಟ್ರೆಂಡ್​ ಆಗುತ್ತಿದೆ.

 ಇದನ್ನೂ ಓದಿ: ದನಗಳಿಗೆ ನೀರು ಕುಡಿಸಲು ಹೋಗಿ ತಾಯಿ, ಮಗ ಮೃತ್ಯು; ಹೊಳೆಗೆ ಜಾರಿಬಿದ್ದು ದುರ್ಘಟನೆ

Rajya Sabha Bypolls: ಖಾಲಿ ಇರುವ ಎರಡು ರಾಜ್ಯಸಭಾ ಸ್ಥಾನಗಳಿಗೆ ಉಪಚುನಾವಣೆ ದಿನಾಂಕ ಘೋಷಿಸಿದ ಚುನಾವಣಾ ಆಯೋಗ