Rajya Sabha Bypolls: ಖಾಲಿ ಇರುವ ಎರಡು ರಾಜ್ಯಸಭಾ ಸ್ಥಾನಗಳಿಗೆ ಉಪಚುನಾವಣೆ ದಿನಾಂಕ ಘೋಷಿಸಿದ ಚುನಾವಣಾ ಆಯೋಗ

ಉಪಚುನಾವಣೆಗೆ ಸಂಬಂಧಪಟ್ಟ ಅಧಿಸೂಚನೆಯನ್ನು ನವೆಂಬರ್​ 9ರಂದು ಹೊರಡಿಸಲಾಗುವುದು. ನಾಮಪತ್ರ ಸಲ್ಲಿಸಲು ನವೆಂಬರ್​ 16 ಕೊನೇ ದಿನ ಇರುತ್ತದೆ. ನವೆಂಬರ್​ 29ರಂದು ಬೆಳಗ್ಗೆ 9ಗಂಟೆಯಿಂದ ಸಂಜೆ 4 ಗಂಟೆವರೆಗೆ ಚುನಾವಣೆ ನಡೆಯಲಿದೆ.

Rajya Sabha Bypolls: ಖಾಲಿ ಇರುವ ಎರಡು ರಾಜ್ಯಸಭಾ ಸ್ಥಾನಗಳಿಗೆ ಉಪಚುನಾವಣೆ ದಿನಾಂಕ ಘೋಷಿಸಿದ ಚುನಾವಣಾ ಆಯೋಗ
ರಾಜ್ಯಸಭೆ
Follow us
TV9 Web
| Updated By: Lakshmi Hegde

Updated on: Oct 31, 2021 | 2:53 PM

ಕೇರಳ ಮತ್ತು ಪಶ್ಚಿಮ ಬಂಗಾಳದಿಂದ ಖಾಲಿ ಇರುವ ರಾಜ್ಯಸಭಾ ಸ್ಥಾನ (Rajyasabha Seat) ಗಳಿಗೆ ನವೆಂಬರ್​ 29ರಂದು ಚುನಾವಣೆ ನಡೆಸುವುದಾಗಿ ಚುನಾವಣಾ ಆಯೋಗ (Election Commission) ಇಂದು ಘೋಷಣೆ ಮಾಡಿದೆ. ಈ ಎರಡೂ ರಾಜ್ಯಗಳಿಂದ ತಲಾ ಒಂದು ರಾಜ್ಯಸಭಾ ಸೀಟ್​ ಖಾಲಿ ಇದೆ.  ಕೇರಳದ ಕಾಂಗ್ರೆಸ್​​ (M) ನಾಯಕ ಜೋಸೆ ಕೆ ಮಣಿ ರಾಜೀನಾಮೆ ನೀಡಿದ್ದರು. ಹಾಗೇ ಪಶ್ಚಿಮ ಬಂಗಾಳದ ರಾಜ್ಯ ಸಭಾ ಸದಸ್ಯೆ ಟಿಎಂಸಿಯ ಅರ್ಪಿತಾ ಘೋಷ್​ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.  

ಕೇರಳದಿಂದ ರಾಜ್ಯಸಭೆಗೆ ಹೋಗಿದ್ದ ಮಣಿ 2021ರ ಜನವರಿ 11ರಂದು ರಾಜೀನಾಮೆ ಸಲ್ಲಿಸಿದ್ದರು. ಅವರ ಅವಧಿ 2024ರ ಜುಲೈಗೆ ಮುಗಿಯುವುದಿತ್ತು. ಆದರೆ ಅದಕ್ಕೂ ಮೂರು ವರ್ಷ ಮೊದಲೇ ರಾಜೀನಾಮೆ ಸಲ್ಲಿಸಿದ್ದಾರೆ. ಇನ್ನು ತೃಣಮೂಲ ಕಾಂಗ್ರೆಸ್​ನ ಅರ್ಪಿತಾ ಘೋಷ್​ ಸೆಪ್ಟೆಂಬರ್​ 15ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ ಅಧಿಕಾರ ಅವಧಿ 2026ಕ್ಕೆ ಮುಗಿಯುವುದಿತ್ತು. ಈ ಎರಡೂ ಸ್ಥಾನಗಳಿಗೆ ನವೆಂಬರ್​ 29ರಂದು ಉಪಚುನಾವಣೆ ನಡೆಸಲು ಚುನಾವನಾ ಆಯೋಗ ನಿರ್ಧಾರ ಮಾಡಿದೆ.  ಕೇರಳದಲ್ಲಿ ಕೊವಿಡ್​ 19 ಜಾಸ್ತಿ ಇದ್ದ ಕಾರಣ ಚುನಾವಣೆ ನಡೆಸಲು ಆಯೋಗ ಸ್ವಲ್ಪ ಹಿಂದೇಟು ಹಾಕಿತ್ತು. ಆದರೆ ಈಗ ಅಲ್ಲಿನ ಪರಿಸ್ಥಿತಿ ಸ್ವಲ್ಪ ಸುಧಾರಿಸಿದ್ದರಿಂದ ಪಶ್ಚಿಮ ಬಂಗಾಳ ಮತ್ತು ಕೇರಳ ರಾಜ್ಯ ಸಭೆ ಸ್ಥಾನಗಳಿಗೆ ಒಟ್ಟಿಗೇ ಚುನಾವಣೆ ನಡೆಸಲು ಚುನಾವಣಾ ಆಯೋಗ ಮುಂದಾಗಿದೆ.

ಉಪಚುನಾವಣೆಗೆ ಸಂಬಂಧಪಟ್ಟ ಅಧಿಸೂಚನೆಯನ್ನು ನವೆಂಬರ್​ 9ರಂದು ಹೊರಡಿಸಲಾಗುವುದು. ನಾಮಪತ್ರ ಸಲ್ಲಿಸಲು ನವೆಂಬರ್​ 16 ಕೊನೇ ದಿನ ಇರುತ್ತದೆ. ನವೆಂಬರ್​ 29ರಂದು ಬೆಳಗ್ಗೆ 9ಗಂಟೆಯಿಂದ ಸಂಜೆ 4 ಗಂಟೆವರೆಗೆ ಚುನಾವಣೆ ನಡೆಯಲಿದೆ. ವೋಟಿಂಗ್​ ಅಂತ್ಯವಾದ ಒಂದು ತಾಸಿನಲ್ಲಿ ಮತಎಣಿಕೆ ಕೂಡ ನಡೆಯಲಿದೆ ಎಂದು ಚುನಾವಣಾ ಆಯೋಗ ಹೇಳಿಕೆ ಬಿಡುಗಡೆ ಮಾಡಿದೆ.  ಹಾಗೇ ಕೊವಿಡ್​ 19 ನಿಯಂತ್ರಣಾ ನಿಯಮಗಳನ್ನು ಸರಿಯಾಗಿ ಅನುಸರಿಸಲಾಗುವುದು ಎಂದೂ ಹೇಳಿದೆ.

ಇದನ್ನೂ ಓದಿ: ಪತ್ನಿ ಅಶ್ವಿನಿಗೆ ಪ್ರೀತಿಯಿಂದ 4 ಕೋಟಿ ಬೆಲೆಬಾಳುವ ಕಾರನ್ನು ಉಡುಗೊರೆಯಾಗಿ ನೀಡಿದ್ದ ಪುನೀತ್​ ರಾಜ್​ಕುಮಾರ್​

ಬಾಗಲಕೋಟೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 200 ಕ್ವಿಂಟಾಲ್ ಅಕ್ಕಿ ಜಪ್ತಿ! ಖಚಿತ ಮಾಹಿತಿ ಆಧಾರದ ಮೇಲೆ ದಾಳಿ ನಡೆಸಿದ ಅಧಿಕಾರಿಗಳು