ಕಬ್ಬು ಬೆಳೆಗಾರರಿಗೆ ₹3,500 ಕೋಟಿ ಸಬ್ಸಿಡಿ: ಕೇಂದ್ರ ಅನುಮೋದನೆ

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಾವಡೇಕರ್, 60 ಲಕ್ಷ ಟನ್ ಸಕ್ಕರೆ ರಫ್ತು ಮಾಡಲಾಗುವುದು ಎಂದಿದ್ದಾರೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದ 5 ಕೋಟಿ ಕಬ್ಬು ಬೆಳೆಗಾರರಿಗೆ ಲಾಭವಾಗಲಿದ್ದು , ಈ ಸಬ್ಸಿಡಿ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಆಗುತ್ತದೆ ಎಂದು ಹೇಳಿದ್ದಾರೆ.

ಕಬ್ಬು ಬೆಳೆಗಾರರಿಗೆ ₹3,500 ಕೋಟಿ ಸಬ್ಸಿಡಿ: ಕೇಂದ್ರ ಅನುಮೋದನೆ
ಪ್ರಕಾಶ್ ಜಾವಡೇಕರ್

Updated on: Dec 16, 2020 | 4:48 PM

ನವದೆಹಲಿ: ಕಬ್ಬು ಬೆಳಗಾರರಿಗೆ ₹3,500 ಕೋಟಿ ಸಬ್ಸಿಡಿ ನೀಡುವ ನಿರ್ಧಾರಕ್ಕೆ ಕೇಂದ್ರ ಸರ್ಕಾರದ ಆರ್ಥಿಕ ವ್ಯವಹಾರಗಳ ಸಮಿತಿ ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಾವಡೇಕರ್, ’60 ಲಕ್ಷ ಟನ್ ಸಕ್ಕರೆ ರಫ್ತು ಮಾಡಲಾಗುವುದು. ಕೇಂದ್ರ ಸರ್ಕಾರದ ಈ ನಿರ್ಧಾರದಿಂದ 5 ಕೋಟಿ ಕಬ್ಬು ಬೆಳೆಗಾರರಿಗೆ ಲಾಭವಾಗಲಿದ್ದು, ಈ ಸಬ್ಸಿಡಿ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಆಗುತ್ತದೆ’ ಎಂದು ಹೇಳಿದ್ದಾರೆ.

ಅಂತರ್ ರಾಜ್ಯ ಕೃಷಿ ವಹಿವಾಟು ಮತ್ತು ವಿತರಣೆ ವ್ಯವಸ್ಥೆಯನ್ನು ಸದೃಢಗೊಳಿಸಲು 6 ರಾಜ್ಯಗಳಿಗೆ ಈಶಾನ್ಯ ಪ್ರದೇಶ ವಿದ್ಯುತ್ ವ್ಯವಸ್ಥೆ ಸುಧಾರಣಾ ಯೋಜನೆಯ ಪರಿಷ್ಕೃತ ವೆಚ್ಚದ ಅಂದಾಜನ್ನು ಸಿಸಿಇಎ ಅನುಮೋದಿಸಿದೆ.

ಆರು ಈಶಾನ್ಯ ರಾಜ್ಯಗಳಲ್ಲಿ 2,100 ಕಿ.ಮೀ ಹೆಚ್ಚುವರಿ ಪ್ರಸರಣ ಮಾರ್ಗಗಳು, 36 ಹೊಸ ಉಪಕೇಂದ್ರಗಳನ್ನು ನಿರ್ಮಿಸಲಾಗುವುದು. 2,100 ಕಿ.ಮೀ.ನ ಹೊಸ ಪ್ರಸರಣ ಮಾರ್ಗಗಳು ಮತ್ತು 2,000 ಕಿ.ಮೀ ವಿತರಣಾ ಮಾರ್ಗಗಳು ಯೋಜನೆಯ ಭಾಗವಾಗಲಿದ್ದು, ಇದಕ್ಕೆ ಸರ್ಕಾರ ಮತ್ತು ವಿಶ್ವಬ್ಯಾಂಕ್ ಸಮಾನವಾಗಿ ಧನಸಹಾಯ ನೀಡಲಿದೆ ಎಂದು ಜಾವಡೇಕರ್ ಹೇಳಿದ್ದಾರೆ.

ಇವರೇ ನಮ್ಮ ‘ಶಕ್ತಿ’ಮಾನ್​ಗಳು! ದಿನಕ್ಕೆ 25 ಟ್ರ್ಯಾಕ್ಟರ್ ಕಬ್ಬು ಲೋಡ್ ಮಾಡ್ತಾರೆ..

 

Published On - 4:47 pm, Wed, 16 December 20