ಬಾಬಾ ಪರಮಾಣು ಸಂಶೋಧನಾ ಕೇಂದ್ರದ ವಿಜ್ಞಾನಿ ಆತ್ಮಹತ್ಯೆ: ಮಡದಿಯೊಂದಿಗೆ ವಾಗ್ವಾದದ ಬಳಿಕ ದುರ್ಘಟನೆ
ಮುಂಬೈ ಸಮೀಪ ಟ್ರಾಂಬೆ ಎಂಬಲ್ಲಿನ ತಮ್ಮ ನಿವಾಸದಲ್ಲಿ ವಿಜ್ಞಾನಿ ಅಧಿಕಾರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ನಡೆಸಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಮುಂಬೈ: ಬಾಬಾ ಪರಮಾಣು ಸಂಶೋಧನಾ ಕೇಂದ್ರದ (BARC) ವಿಜ್ಞಾನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮುಂಬೈ ಸಮೀಪದ ಟ್ರಾಂಬೆ ಎಂಬಲ್ಲಿನ ತಮ್ಮ ನಿವಾಸದಲ್ಲಿ ವಿಜ್ಞಾನಿ ಅಧಿಕಾರಿ (37 ವರ್ಷ) ನೇಣು ಬಿಗಿದುಕೊಂಡು ಆತ್ಮಹತ್ಯೆ ನಡೆಸಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಮಡದಿಯೊಂದಿಗೆ ನಡೆದ ವಾಗ್ವಾದ ಬಳಿಕ ವಿಜ್ಞಾನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ದುರ್ಘಟನೆಯು ಗುರುವಾರ ನಡೆದಿದೆ. ಮಗುವಿಗೆ ಊಟ ಮಾಡಿಸುವ ಬಗ್ಗೆ ಮಡದಿಯೊಂದಿಗೆ ನಡೆದ ವಾಗ್ವಾದದ ಬಳಿಕ, ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ಅನುಜ್ ತ್ರಿಪಾಠಿ (37) ಎಂದು ಗುರುತಿಸಲಾಗಿದೆ. ಗುರುವಾರ ಬೆಳಗ್ಗೆ, ಮಗುವಿಗೆ ಆಹಾರ ಉಣಿಸುವ ಬಗ್ಗೆ ಮಡದಿಯೊಂದಿಗೆ ವಾಗ್ವಾದ ಏರ್ಪಟ್ಟಿದೆ. ಬಳಿಕ, ಅನುಜ್ ತಮ್ಮ ಮಲಗುವ ಕೋಣೆಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಟ್ರಾಂಬೆ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ಸಿದ್ಧೇಶ್ವರ್ ಗೋವೆ ಹೇಳಿದ್ದಾರೆ.
ಅನುಜ್ ಮಡದಿ ಹಾಗೂ ನೆರೆಮನೆಯವರು ಆತನನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆತ ಮೃತಪಟ್ಟಿರುವುದಾಗಿ ಆಸ್ಪತ್ರೆಯವರು ತಿಳಿಸಿದ್ದಾರೆ. ಟ್ರಾಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೇರೆ ಬೇರೆ ಮದುವೆಯಾಗಿದ್ದರೂ ಪರಸ್ಪರ ಪ್ರೀತಿಸುತ್ತಿದ್ದ ಪ್ರೇಮಿಗಳು ಆತ್ಮಹತ್ಯೆಗೆ ಶರಣು
Published On - 5:37 pm, Sat, 30 January 21