ಪಿಥೋರಗಢ್: ಉತ್ತರಾಖಂಡದ ಪಿಥೋರಗಢ್ ಬಳಿ ಇಂದು (ಅ.16) 4.0 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪನ ರಾಷ್ಟ್ರೀಯ ಕೇಂದ್ರದ ಪ್ರಕಾರ, ಭೂಕಂಪದ ಕೇಂದ್ರಬಿಂದು ಪಿಥೋರಘರ್‌ನಿಂದ ಈಶಾನ್ಯಕ್ಕೆ 40 ಕಿಲೋಮೀಟರ್ ದೂರದಲ್ಲಿದೆ. 5 ಕಿ.ಮೀ ಆಳದಲ್ಲಿ ಪಿಥೋರಗಢದಲ್ಲಿ ಭೂಕಂಪ ಸಂಭವಿಸಿದೆ. ಇನ್ನು ಭೂಕಂಪನ ರಾಷ್ಟ್ರೀಯ ಕೇಂದ್ರವು ಭೂಕಂಪ ತೀವ್ರತೆ ಬಗ್ಗೆ ತಿಳಿಸಿದೆ. 16-10-2023 ರಂದು 4.0 ತೀವ್ರತೆ ಇತ್ತು. 09:11:40 IST, ಲ್ಯಾಟ್: 29.86 & ಉದ್ದ: 80.61, ಆಳ: 5 ಕಿಮೀ, ಸ್ಥಳ: 48 ಕಿಮೀ NE ಆಫ್ ಪಿಥೋರಗಢ್, ಉತ್ತರಾಖಂಡ್ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಎಕ್ಸ್ (ಈ ಹಿಂದಿನ ಟ್ವಿಟರ್) ಪೋಸ್ಟ್ ಮಾಡಿದ್ದಾರೆ.
ನೆನ್ನೆ (ಅ.15) ಹರಿಯಾಣದಲ್ಲಿ ಮತ್ತು ದೆಹಲಿಯಲ್ಲೂ ಪ್ರಬಲವಾದ ಕಂಪನ ಉಂಟಾಗಿದೆ. ಸಂಜೆ 4.8ಕ್ಕೆ 3.1ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಎನ್ಸಿಎಸ್ ಹೇಳಿದೆ. ಅ.4ರಂದು ನೇಪಾಳದಲ್ಲೂ 6.2 ತೀವ್ರತೆ ಭೂಕಂಪ ಉಂಟಾಗಿದೆ. ಇದರ ಪರಿಣಾಮವಾಗಿ ದೆಹಲಿ, ಬಿಹಾರ, ಉತ್ತರಪ್ರದೇಶಗಳಲ್ಲಿಯೂ ಮಧ್ಯಾಹ್ನ 3.00ಕ್ಕೆ ಭೂಕಂಪ ಸಂಭವಿಸಿದೆ.
ಇದನ್ನೂ ಓದಿ: ದೆಹಲಿ-ಎನ್ಸಿಆರ್ನಲ್ಲಿ ಭೂಕಂಪ
Earthquake of Magnitude:4.0, Occurred on 16-10-2023, 09:11:40 IST, Lat: 29.86 & Long: 80.61, Depth: 5 Km ,Location: 48km NE of Pithoragarh, Uttarakhand, India for more information Download the BhooKamp App https://t.co/N2CgIIptvU@KirenRijiju @Ravi_MoES @ndmaindia @Dr_Mishra1966 pic.twitter.com/z4FeNRBoqh
— National Center for Seismology (@NCS_Earthquake) October 16, 2023
ಈ ಸಮಯದಲ್ಲಿ ಎತ್ತರ ಕಟ್ಟಡಗಳಲ್ಲಿ ವಾಸ ಮಾಡುತ್ತಿದ್ದ ನಿವಾಸಿಗಳು ಒಂದು ಬಾರಿ ಗಾಬರಿಗೊಂಡು ಕೆಳಕ್ಕೆ ಬಂದಿದ್ದಾರೆ.
Published On - 10:33 am, Mon, 16 October 23