ಹೈದರಾಬಾದ್: ಆಂಧ್ರಪ್ರದೇಶದ (Andhra Pradesh) ನಂದ್ಯಾಲ್-ಕರ್ನೂಲ್ ಪ್ರದೇಶದಲ್ಲಿ ಅರಣ್ಯಾಧಿಕಾರಿಗಳು ನಾಲ್ಕು ಮರಿಗಳನ್ನು ಅಮ್ಮ ಹುಲಿಗೆ (tigress) ಹಿಂದಿರುಗಿಸಲು ಹುಡುಕುತ್ತಿದ್ದಾರೆ. ಕಳೆದ 72 ಗಂಟೆಗಳಿಂದ ಈ ಹುಡುಕಾಟ ನಡೆದಿದೆ.ದಾರಿ ತಪ್ಪಿ ಕೃಷಿ ಹೊಲಕ್ಕೆ ನುಗ್ಗಿದ್ದ ಮರಿಗಳು ಗ್ರಾಮಸ್ಥರಿಗೆ ಪತ್ತೆಯಾಗಿವೆ. ಬೀದಿ ನಾಯಿಗಳಿಂದ ರಕ್ಷಿಸಲು ಅವರು ಮೊದಲು ಅವುಗಳನ್ನು ತಾತ್ಕಾಲಿಕ ಆಶ್ರಯಕ್ಕೆ ಸ್ಥಳಾಂತರಿಸಿದರು. ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ನಂತರ ಪಶುವೈದ್ಯಕೀಯ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು. ಮರಿಗಳನ್ನು ಕಳೆದುಕೊಂಡಿದ್ದಕ್ಕೆ ಬೇಸರಗೊಂಡಿರುವ ಹುಲಿ ಈಗ ಆಕ್ರಮಣಕಾರಿಯಾಗಿ ವರ್ತಿಸಬಹುದು ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಅರಣ್ಯ ಇಲಾಖೆ ಟ್ರ್ಯಾಪ್ ಕ್ಯಾಮೆರಾಗಳನ್ನು ಅಳವಡಿಸಿದ್ದು, 300 ಸದಸ್ಯರ ತಂಡ ಹುಲಿಗಾಗಿ ಹುಡುಕಾಟ ನಡೆಸುತ್ತಿದೆ. ಅವರು ಮರಿ ಹುಲಿಗಳ ಗುರುತುಗಳನ್ನು ಕಂಡುಕೊಂಡಿದ್ದಾರೆ ಮತ್ತು ಶೀಘ್ರದಲ್ಲೇ ದೊಡ್ಡ ಹುಲಿಯನ್ನು ಪತ್ತೆಹಚ್ಚುವ ಭರವಸೆ ಇದೆ ಎಂದು ಹೇಳಲಾಗುತ್ತದೆ. ಹುಲಿ ಟಿ-108 ಇರಬಹುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಮರಿಗಳನ್ನು ಮೃಗಾಲಯಕ್ಕೆ ಸ್ಥಳಾಂತರಿಸುವುದೇ ಕೊನೆಯ ಆಯ್ಕೆ. ಆದರೆ ನಾವು ಅದನ್ನು ತಾಯಿಯೊಂದಿಗೆ ಮತ್ತೆ ಸೇರಿಸಲು ಬಯಸುತ್ತೇವೆ. ಅದು ಮರಿಗಳನ್ನು ಸ್ವೀಕರಿಸಿ, ಮತ್ತೆ ಕಾಡಿಗೆ ಕರೆದೊಯ್ಯುಲಿದೆ ಎಂಬುದು ನಮ್ಮ ಭಾವನೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
4 Terrified Cubs
In Nandyal district, Andhra Pradesh
Villagers rescued, put in a safe place. Forest Officials on job to take care of these young ones, feeble, needed nutrition, to reunite with mother pic.twitter.com/daWTvzddVg— WildLense® Eco Foundation ?? (@WildLense_India) March 7, 2023
“ನಾವು ಅವುಗಳನ್ನು ಸ್ವಲ್ಪ ಸಮಯದವರೆಗೆ ಸಾಕುತ್ತೇವೆ. ನಂತರ ಅವುಗಳನ್ನು ಮೃಗಾಲಯಕ್ಕೆ ಕೊಂಡೊಯ್ಯುತ್ತೇವೆ ಅಥವಾ ಅದಕ್ಕೆ ಸೂಕ್ತವಾದ ವಾತಾವರಣವನ್ನು ಹೊಂದಿದ್ದೇವೆಯೇ? ಅದಕ್ಕಾಗಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದಿಂದ (NTCA) ಸಾಕಷ್ಟು ಅನುಮತಿಗಳ ಅಗತ್ಯವಿದೆ. ಮುಖ್ಯ ವನ್ಯಜೀವಿ ವಾರ್ಡನ್‌ನ ನಾಮಿನಿ ನೇತೃತ್ವವಿರುವ ಸಮಿತಿಯನ್ನು ರಚಿಸಬೇಕಾಗಿದೆ ಎಂದು ಪ್ರೋಟೋಕಾಲ್ ಹೇಳುತ್ತದೆಎಂದು ಅರಣ್ಯ ಅಧಿಕಾರಿ ಶಾಂತಿ ಪ್ರಿಯಾ ಪಾಂಡೆ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದರು.
ಇದನ್ನೂ ಓದಿ: ಉತ್ತರ ಭಾರತದ ರಾಜ್ಯಗಳ ಬಿಜೆಪಿ ಸದಸ್ಯರು ನಕಲಿ ಸುದ್ದಿ ಹರಡುತ್ತಿದ್ದಾರೆ: ತಮಿಳುನಾಡು ಸಿಎಂ ಸ್ಟಾಲಿನ್
ಮರಿಗಳ ಮೇಲೆ ಮಾನವನ ಕುರುಹು ಬಿಡದಂತೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಅಧಿಕಾರಿ ಹೇಳಿದರು. ಮಾನವನ ಕುರುಹು ಇದ್ದರೆ ಹುಲಿ ಅವುಗಳನ್ನು ತಿರಸ್ಕರಿಸಬಹುದು.ಅನಾಥ ಅಥವಾ ಪರಿತ್ಯಕ್ತ ಮರಿಗಳನ್ನು ನಿರ್ವಹಿಸಲು ಎನ್‌ಟಿಸಿಎಯ ಪ್ರೋಟೋಕಾಲ್ ಅನ್ನು ಅನುಸರಿಸುತ್ತಿದ್ದೇವೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಅರಣ್ಯಾಧಿಕಾರಿಗಳ ಪ್ರಕಾರ, ಮರಿಗಳು ಕಾಡಿಗೆ ಮರಳಿದರೆ ಬದುಕುಳಿಯುವ ಸಾಧ್ಯತೆ ಹೆಚ್ಚು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:12 pm, Thu, 9 March 23