ಮೋದಿ ಬೆಂಕಿ ಜತೆ ಆಡುತ್ತಿದ್ದಾರೆ, ಅದಾನಿ ಪ್ರಧಾನಿಯ ಪ್ರಾಕ್ಸಿ: ತೆಲಂಗಾಣ ಸಚಿವ ಕೆಟಿಆರ್ ವಾಗ್ದಾಳಿ

ಬಿಜೆಪಿಯವರೆಲ್ಲ ಶುದ್ಧರೇ? ಕಿರುಕುಳ, ರಾಜಕೀಯ ಸೇಡು ಮತ್ತು ಬೆದರಿಕೆ ಇವೆಲ್ಲ ನರೇಂದ್ರ ಮೋದಿಗೆ ಬೇರೆಡೆ ಉಪಯೋಗಕ್ಕೆ ಬರಬಹುದು. ಅವರು ಬೆಂಕಿಯೊಂದಿಗೆ ಆಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ಇದು ಅರಿವಿಗೆ ಬರುತ್ತದೆ ನನಗೆ ಖಾತ್ರಿಯಿದೆ.

ಮೋದಿ ಬೆಂಕಿ ಜತೆ ಆಡುತ್ತಿದ್ದಾರೆ, ಅದಾನಿ ಪ್ರಧಾನಿಯ ಪ್ರಾಕ್ಸಿ: ತೆಲಂಗಾಣ ಸಚಿವ ಕೆಟಿಆರ್ ವಾಗ್ದಾಳಿ
ಕೆಟಿಆರ್
Follow us
ರಶ್ಮಿ ಕಲ್ಲಕಟ್ಟ
|

Updated on: Mar 09, 2023 | 5:00 PM

ಅದಾನಿ ವಿಚಾರದಲ್ಲಿ ತೆಲಂಗಾಣ (Telangana) ಸಚಿವ ಕೆ.ಟಿ.ರಾಮ ರಾವ್ (KT Rama Rao) ಗುರುವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಬಿಜೆಪಿ ಮೇಲೆ ಟೀಕಾ ಪ್ರಹಾರ ಮಾಡಿದ್ದು, ಗೌತಮ್ ಅದಾನಿ ಪ್ರಧಾನಿಯವರ ಪ್ರಾಕ್ಸಿ ಎಂದಿದ್ದಾರೆ. ಅದೇ ವೇಳೆ ‘ಬೆದರಿಕೆ ತಂತ್ರಗಳು ದಕ್ಷಿಣ ರಾಜ್ಯದಲ್ಲಿ ಕೆಲಸ ಮಾಡುವುದಿಲ್ಲ ಎಂದಿದ್ದಾರೆ. ಈ ವರ್ಷ ಅಸೆಂಬ್ಲಿ ಚುನಾವಣೆಯಲ್ಲಿ ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿ ಮತ್ತು ಬಿಜೆಪಿ ನಡುವೆ ತೀವ್ರವಾದ ಪೈಪೋಟಿ ನಡೆಯಲಿದೆ.

ಕೆಟಿಆರ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಸಚಿವರು, ಪ್ರಧಾನಿಯವರ ತವರು ರಾಜ್ಯವಾದ ಗುಜರಾತ್‌ನಿಂದ ಬಂದಿರುವ ಅದಾನಿ ಬಗ್ಗೆ ಇರುವ ವಿವಾದಗಳ ಬಗ್ಗೆ ಮೋದಿ ಮೌನವಾಗಿರುವುದಕ್ಕಾಗಿ ಪ್ರಧಾನಿಯನ್ನು ಟೀಕಿಸಿದ್ದಾರೆ. “ಅದಾನಿ ವಿರುದ್ಧದ ಆರೋಪಗಳ ಬಗ್ಗೆ ಪ್ರಧಾನಿ ಏಕೆ ಮಾತನಾಡುವುದಿಲ್ಲ? ಗೌತಮ್ ಅದಾನಿ ನರೇಂದ್ರ ಮೋದಿಯ ಪ್ರಾಕ್ಸಿ ಎಂದು ನಾವು ಹೇಳುತ್ತಿದ್ದೇವೆ. ಅವರು (ಮೋದಿ) ಸುಳ್ಳು ಪತ್ತೆ ಪರೀಕ್ಷೆಗೆ ಒಳಗಾಗುತ್ತಾರೆಯೇ? ದೇಶದ ಜನರ ಮುಂದೆ ಬರಲು ಅವರಿಗೆ ಧೈರ್ಯವಿದೆಯೇ? ಬಿಜೆಪಿಯಲ್ಲಿರುವ ಎಲ್ಲರೂ ರಾಜಾ ಹರಿಶ್ಚಂದ್ರನ (1913 ರ ಐಕಾನಿಕ್ ಮೂಕ ಚಲನಚಿತ್ರದ ಉಲ್ಲೇಖ) ಸಹೋದರರೇ?” ಎಂದು ಕೆಟಿಆರ್ ಕೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ. ರಾಜಕೀಯ ಸೇಡಿಗಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮೋದಿ ಬೆಂಕಿಯೊಂದಿಗೆ ಆಟವಾಡುತ್ತಿದ್ದಾರೆ ಎಂದಿದ್ದಾರೆ.

ಬಿಜೆಪಿಯವರೆಲ್ಲ ಶುದ್ಧರೇ? ಕಿರುಕುಳ, ರಾಜಕೀಯ ಸೇಡು ಮತ್ತು ಬೆದರಿಕೆ ಇವೆಲ್ಲ ನರೇಂದ್ರ ಮೋದಿಗೆ ಬೇರೆಡೆ ಉಪಯೋಗಕ್ಕೆ ಬರಬಹುದು. ಅವರು ಬೆಂಕಿಯೊಂದಿಗೆ ಆಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ಇದು ಅರಿವಿಗೆ ಬರುತ್ತದೆ ನನಗೆ ಖಾತ್ರಿಯಿದೆ. ಅವರು ಮಾತನಾಡುವ ಡಬಲ್ ಎಂಜಿನ್ ಅಂದರೆ ಆರ್ಥಿಕ ಎಂಜಿನ್ ಅದಾನಿ, ರಾಜಕೀಯ ಎಂಜಿನ್ ಮೋದಿ ಎಂದು ತೆಲಂಗಾಣ ನಾಯಕ ಹೇಳಿದ್ದಾರೆ. ಅದಾನಿ ಗ್ರೂಪ್‌ ವಿವಾದ ನಂತರ ಅದಾನಿಯವರ ಸಂಪತ್ತಿನಲ್ಲಿ ಭಾರಿ ಕುಸಿತವುಂಟಾಗಿದ್ದು ಇದರ ಪರಿಣಾಮವಾಗಿ ಅವರ ಕಂಪನಿಗಳು $120 ಶತಕೋಟಿ ನಷ್ಟು ನಷ್ಟವನ್ನು ಅನುಭವಿಸಿದವು. ಈ ವಿಚಾರ ಸಂಸತ್ತಿನಲ್ಲಿ ಗದ್ದಲಕ್ಕೂ ಕಾರಣವಾಯಿತು.

ಇದನ್ನೂ ಓದಿ:ಉತ್ತರ ಭಾರತದ ರಾಜ್ಯಗಳ ಬಿಜೆಪಿ ಸದಸ್ಯರು ನಕಲಿ ಸುದ್ದಿ ಹರಡುತ್ತಿದ್ದಾರೆ: ತಮಿಳುನಾಡು ಸಿಎಂ ಸ್ಟಾಲಿನ್

ಹಿಂಡೆನ್‌ಬರ್ಗ್‌ನ ಆರೋಪಗಳ ಬಗ್ಗೆ ವಿವರವಾದ ತನಿಖೆಗೆ ಮತ್ತು ಪ್ರಧಾನಿಯವರ ಹೇಳಿಕೆಗೆ ವಿರೋಧ ಪಕ್ಷಗಳು ಕರೆ ನೀಡಿತು. ಮೋದಿ ಸರ್ಕಾರವು ಉದ್ಯಮಿಗಳಿಗೆ ಅನುಕೂಲವಾಗಿದೆ ಎಂದು ವಿಪಕ್ಷಗಳು ಆರೋಪಿಸಿದ್ದು ಈ ವಿಚಾರವಾಗಿ ಸುಪ್ರೀಂ ಕೋರ್ಟ್‌ ತಜ್ಞರ ಸಮಿತಿಗೆ ಆದೇಶ ನೀಡಿದೆ.

ದೆಹಲಿ ಅಬಕಾರಿ ನೀತಿಯ ಆರೋಪದ ಹಗರಣದಲ್ಲಿ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯವು ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅಥವಾ ಕೆಸಿಆರ್ ಅವರ ಪುತ್ರಿ ಕವಿತಾ ಅವರನ್ನು ದೆಹಲಿಗೆ ಕರೆಸಿದ ಒಂದು ದಿನದ ನಂತರ ರಾವ್ ಅವರ ಹೇಳಿಕೆಗಳು ಬಂದಿವೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್