Accident: ವೇಗವಾಗಿ ಬಂದು ದೆಹಲಿ ರಸ್ತೆಯ ಡಿವೈಡರ್ ಮೇಲೆ ಮಲಗಿದ್ದವರ ಮೇಲೆ ಹತ್ತಿದ ಟ್ರಕ್; 4 ಜನ ಸಾವು

ಈ ದುರಂತದಲ್ಲಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದರೆ, ಇನ್ನಿಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಘಟನೆಯ ನಂತರ ಚಾಲಕ ಟ್ರಕ್‌ನೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾನೆ.

Accident: ವೇಗವಾಗಿ ಬಂದು ದೆಹಲಿ ರಸ್ತೆಯ ಡಿವೈಡರ್ ಮೇಲೆ ಮಲಗಿದ್ದವರ ಮೇಲೆ ಹತ್ತಿದ ಟ್ರಕ್; 4 ಜನ ಸಾವು
ಡಿವೈಡರ್ ಮೇಲೆ ಟ್ರಕ್ ಹತ್ತಿ ನಾಲ್ವರು ಸಾವು
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Sep 21, 2022 | 9:15 AM

ನವದೆಹಲಿ: ರಸ್ತೆ ವಿಭಜಕದ (ಡಿವೈಡರ್) ಮೇಲೆ ಮಲಗಿ ನಿದ್ರೆ ಮಾಡುತ್ತಿದ್ದ ಜನರ ಮೇಲೆ ವೇಗವಾಗಿ ಬಂದ ಟ್ರಕ್ ಒಂದು ಹತ್ತಿದ ಪರಿಣಾಮ ಗಾಢ ನಿದ್ರೆಯಲ್ಲಿದ್ದ ನಾಲ್ವರು ಸಾವನ್ನಪ್ಪಿದ್ದಾರೆ. ಇನ್ನೂ ಕೆಲವರು ಗಾಯಗೊಂಡಿದ್ದಾರೆ. ನಿನ್ನೆ ಮಧ್ಯರಾತ್ರಿ 1.51ರ ಸುಮಾರಿಗೆ ಈ ಘಟನೆ ನಡೆದಿದೆ. ದೆಹಲಿಯ ಸೀಮಾಪುರಿಯಲ್ಲಿ (Delhi Accident) ಡಿಟಿಸಿ ಡಿಪೋ ರೆಡ್‌ಲೈಟ್ ದಾಟುತ್ತಿರುವಾಗ ವೇಗವಾಗಿ ಬಂದ ಟ್ರಕ್ (Truck) ಜನರ ಮೇಲೆ ಹರಿದು ಎಲ್ಲರನ್ನೂ ಅಪ್ಪಚ್ಚಿ ಮಾಡಿದೆ.

ಈ ದುರಂತದಲ್ಲಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದರೆ, ಇನ್ನಿಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತ 4 ವ್ಯಕ್ತಿಗಳನ್ನು 52 ವರ್ಷದ ಕರೀಮ್, 25 ವರ್ಷದ ಚೊಟ್ಟೆ ಖಾನ್ಸ್, 38 ವರ್ಷದ ಶಾ ಆಲಂ ಮತ್ತು 45 ವರ್ಷದ ರಾಹುಲ್ ಎಂದು ಗುರುತಿಸಲಾಗಿದೆ. 16 ವರ್ಷದ ಮನೀಶ್ ಮತ್ತು 30 ವರ್ಷದ ಪ್ರದೀಪ್ ತೀವ್ರವಾಗಿ ಗಾಯಗೊಂಡಿದ್ದಾರೆ.

ಇದನ್ನೂ ಓದಿ: ಒಳಚರಂಡಿ ದುರಸ್ತಿ ಕಾಮಗಾರಿ ವೇಳೆ ವಸತಿ ಗಡಿ ಗೋಡೆ ಕುಸಿದು ಮೂವರು ಕಾರ್ಮಿಕರು ಸಾವು

ಈ ಘಟನೆಯ ನಂತರ ಚಾಲಕ ಟ್ರಕ್‌ನೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾನೆ. ಆ ವಾಹನವನ್ನು ಪತ್ತೆಹಚ್ಚಲು ದೆಹಲಿ ಪೊಲೀಸರು ಅನೇಕ ತಂಡಗಳನ್ನು ರಚಿಸಿದ್ದಾರೆ. ಆರೋಪಿಗಳನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಸೂಕ್ತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ