ಶ್ರೀನಗರ: ಪೀಪಲ್ಸ್ ಡೆಮಾಕ್ರಟಿಕ್ ಪಕ್ಷ(ಪಿಡಿಪಿ)ದ ನಾಲ್ವರು ನಾಯಕರಿಗೆ ಸರ್ಕಾರಿ ವಸತಿಯನ್ನು ಖಾಲಿ ಮಾಡುವಂತೆ ಸೂಚಿಸಲಾಗಿದೆ. ಪಿಡಿಪಿಯ ಮಾಜಿ ಸಚಿವ, ಪಾಂಪೋರ್ ಶಾಸಕ ಝಹೂರ್ ಮಿರ್, ಮಾಜಿ ಶಾಸಕ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ನಿಜಾಮುದ್ದೀನ್ ಭಟ್, ಶೋಪಿಯಾನಾದ ಮಾಜಿ ಶಾಸಕ ಯೂಸುಫ್ ಭಟ್ ಮತ್ತು ಮಾಜಿ ಶಾಸಕ ಐಜಾಜ್ ಮಿರ್ ಅವರಿನ್ನೂ ಶ್ರೀನಗರದ ಸರ್ಕಾರಿ ವಸತಿಗಳಲ್ಲೇ ಇದ್ದರು. ಇದೀಗ ನಾಲ್ಕೂ ಮಂದಿಯ ಬಳಿ ಆ ಸರ್ಕಾರಿ ವಸತಿಯನ್ನು ಖಾಲಿ ಮಾಡುವಂತೆ ಸೂಚಿಸಲಾಗಿದೆ.
ಆದರೆ ಹೀಗೆ ತಮ್ಮ ಪಕ್ಷದ ನಾಲ್ವರ ಬಳಿ ಸರ್ಕಾರಿ ವಸತಿ ಖಾಲಿ ಮಾಡಲು ಸೂಚಿಸಿದ್ದರಿಂದ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ತೀವ್ರ ಕೋಪಗೊಂಡಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮಧ್ಯಪ್ರವೇಶ ಮಾಡಬೇಕು. ವಿಷಯ ಇತ್ಯರ್ಥ ಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ನಮ್ಮ ಪಕ್ಷ ಪಿಡಿಪಿಯನ್ನು ಇಲ್ಲಿನ ಆಡಳಿತ ಟಾರ್ಗೆಟ್ ಮಾಡುತ್ತಿದೆ. ಈ ನಾಲ್ವರೂ ಶಾಸಕರಿಗೆ ಪರ್ಯಾಯವಾಗಿ ಯಾವುದೇ ವ್ಯವಸ್ಥೆ ಮಾಡದೆ, ಏಕಾಏಕಿ ಸರ್ಕಾರಿ ವಸತಿ ತೊರೆಯುವಂತೆ ಹೇಳಲಾಗುತ್ತಿದೆ. ಹಾಗೇನಾದರೂ ಮಾಡಿದರೆ ನಾನು ಲೆಫ್ಟಿನಂಟ್ ಗವರ್ನರ್ ಆಡಳಿತವನ್ನೇ ಹೊಣೆ ಮಾಡುತ್ತೇನೆ ಎಂದು ಮನೋಜ್ ಸಿನ್ಹಾರಿಗೆ ಪತ್ರವನ್ನೂ ಬರೆದಿದ್ದಾರೆ.
ಜಮ್ಮು-ಕಾಶ್ಮೀರದ ಆಡಳಿತ ಸದ್ಯ ಕೆಲವು ಹಳೇ ಪದ್ಧತಿಗಳನ್ನು ತೆಗೆದುಹಾಕಲು ನಿರ್ಧರಿಸಿದ್ದು, ಅದರ ಭಾಗವಾಗಿ ಸರ್ಕಾರಿ ಅಧಿಕಾರಿಗಳಿಗೆ ನೀಡಲಾಗಿದ್ದ ಸರ್ಕಾರಿ ವಸತಿಗಳನ್ನೂ ತೆರವುಗೊಳಿಸಿದೆ. ಇನ್ನು ಮಾಜಿ ಶಾಸಕರಿಗೂ ಖಾಲಿ ಮಾಡುವಂತೆ ಸೂಚಿಸಿದೆ.
ಇದನ್ನೂ ಓದಿ:Zika Virus: ಕೇರಳದಲ್ಲಿ 14 ಜನರಲ್ಲಿ ಝಿಕಾ ವೈರಸ್ ಪತ್ತೆ; ರಾಜ್ಯ ಸರ್ಕಾರದ ಸಹಾಯಕ್ಕೆ ಆಗಮಿಸಿದ ಕೇಂದ್ರ ತಜ್ಞರ ತಂಡ