Sign In

By signing in or creating an account, you agree with Associated Broadcasting Company's Terms & Conditions and Privacy Policy.

COVID-19: ದೇಶದಲ್ಲಿ 24 ಗಂಟೆಯಲ್ಲಿ 42,766 ಕೊರೊನಾ ಕೇಸ್​ಗಳು ಪತ್ತೆ; ಪಾಸಿಟಿವಿಟಿ ದರ ಶೇ.3ಕ್ಕಿಂತಲೂ ಕಡಿಮೆ

ಭಾರತದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 3,07,95,716ಕ್ಕೆ ಏರಿಕೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 4,55,033ಕ್ಕೆ ಇಳಿದಿದೆ. ಇನ್ನು 24ಗಂಟೆಯಲ್ಲಿ 45,254 ಕೊರೊನಾ ರೋಗಿಗಳು ಗುಣಮುಖರಾಗಿ ಡಿಸ್​ಚಾರ್ಜ್​ ಆಗಿದ್ದಾರೆ.

COVID-19: ದೇಶದಲ್ಲಿ 24 ಗಂಟೆಯಲ್ಲಿ 42,766 ಕೊರೊನಾ ಕೇಸ್​ಗಳು ಪತ್ತೆ; ಪಾಸಿಟಿವಿಟಿ ದರ ಶೇ.3ಕ್ಕಿಂತಲೂ ಕಡಿಮೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Lakshmi Hegde

Updated on: Jul 10, 2021 | 11:52 AM

ದೇಶದಲ್ಲಿ ಕೊರೊನಾ ಎರಡನೇ ಅಲೆ ತುಸು ತಗ್ಗಿದ್ದರೂ, ನಿರ್ಲಕ್ಷ್ಯ ಮಾಡುವಂತಿಲ್ಲ ಎಂದು ಆರೋಗ್ಯ ಕ್ಷೇತ್ರದ ತಜ್ಞರು ಎಚ್ಚರಿಕೆ ಕೊಟ್ಟಿದ್ದಾರೆ. ಈ ಮಧ್ಯೆ ಒಂದು ದಿನದಲ್ಲಿ ಪತ್ತೆಯಾಗುವ ಹೊಸ ಕೊರೊನಾ ಸೋಂಕಿನ ಪ್ರಕರಣದಲ್ಲಿ ಗಣನೀಯವಾಗಿ ಕಡಿಮೆಯಾಗುತ್ತಿದೆ. ಕಳೆದ 24ಗಂಟೆಯಲ್ಲಿ 42,766 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 1,206 ಮಂದಿ ಮೃತಪಟ್ಟಿದ್ದಾರೆ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಭಾರತದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 3,07,95,716ಕ್ಕೆ ಏರಿಕೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 4,55,033ಕ್ಕೆ ಇಳಿದಿದೆ. ಇನ್ನು 24ಗಂಟೆಯಲ್ಲಿ 45,254 ಕೊರೊನಾ ರೋಗಿಗಳು ಗುಣಮುಖರಾಗಿ ಡಿಸ್​ಚಾರ್ಜ್​ ಆಗಿದ್ದಾರೆ. ದೇಶದಲ್ಲಿ ಕೊರೊನಾ ಚೇತರಿಕೆ ಪ್ರಮಾಣ ಶೇ.97.2ರಷ್ಟಿದ್ದು, ಇದುವರೆಗೆ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ ಮೂರು ಕೋಟಿ ಸನಿಹಕ್ಕೆ ತಲುಪಿದೆ. ಅಂದರೆ ಇಲ್ಲಿಯವರೆಗೆ ಕೊರೊನಾದಿಂದ ಚೇತರಿಸಿಕೊಂಡು ಡಿಸ್​ಚಾರ್ಜ್ ಆದವರ ಸಂಖ್ಯೆ 2,99,33,538ಕ್ಕೆ ತಲುಪಿದೆ.

5ರಾಜ್ಯಗಳಲ್ಲಿ ಹೆಚ್ಚಿನ ಕೇಸ್​ಗಳು ಶನಿವಾರ ಒಟ್ಟು ಐದು ರಾಜ್ಯಗಳಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಿಗೆ ಕಾಣಿಸಿದೆ. ಕೇರಳದಲ್ಲಿ 13, 563, ಮಹಾರಾಷ್ಟ್ರದಲ್ಲಿ 8,992, ಆಂಧ್ರಪ್ರದೇಶ 3,040 ಮತ್ತು ತಮಿಳುನಾಡಿನಲ್ಲಿ 3039, ಒಡಿಶಾದಲ್ಲಿ 2,806 ಕೊರೊನಾ ಕೇಸ್​ಗಳು ದಾಖಲಾಗಿವೆ. ಇಂದು ದಾಖಲಾದ ಒಟ್ಟು ಕೊರೊನಾ ಸೋಂಕಿನ ಪ್ರಕರಣದಲ್ಲಿ ಶೇ.73.52ರಷ್ಟು ಪಾಲು ಈ ಐದು ರಾಜ್ಯಗಳದ್ದೇ ಆಗಿದೆ. ಅದರಲ್ಲಿ ಕೇರಳದ ಪಾಲೇ ಶೇ.30ರಷ್ಟಿದೆ.

ಶೇ.3ಕ್ಕಿಂತಲೂ ಕಡಿಮೆ ಇದೆ ಪಾಸಿಟಿವಿಟಿ ರೇಟ್​ ಇನ್ನು ದೇಶದಲ್ಲಿ ಕೊರೊನಾ ಪಾಸಿಟಿವಿಟಿ ದರ ಶೇ.3ಕ್ಕಿಂತಲೂ ಕಡಿಮೆ ಇದೆ. ಕಳೆದ 19 ದಿನಗಳಿಂದಲೂ ಪಾಸಿಟಿವಿಟಿ ದರ ಶೇ.2.19ರಷ್ಟೇ ಇರುವುದು ಸಮಾಧಾನಕರ ಸಂಗತಿಯಾಗಿದೆ. ದೇಶದಲ್ಲಿ ಈಗಾಗಲೇ 37.21 ಕೋಟಿ ಡೋಸ್​ ಲಸಿಕೆ ನೀಡಲಾಗಿದೆ. ಹಾಗೇ ಕಳೆದ 24ಗಂಟೆಯಲ್ಲಿ 30,55,802 ಡೋಸ್​ ಲಸಿಕೆ ನೀಡಿದ್ದಾಗಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಇದನ್ನೂ ಓದಿ: ಯೋಧನ ಹೆಸರಿನಲ್ಲಿ ವಂಚನೆ; ಬೆಳಗಾವಿ ಶಾಲಾ ಆಡಳಿತ ಮಂಡಳಿಯ ಬ್ಯಾಂಕ್​ ಖಾತೆಯಿಂದ 90 ಸಾವಿರ ರೂಪಾಯಿ ಹಣ ಲೂಟಿ

India records 42 766 new Corona Virus Cases in 24 hours