ದೇಶದಲ್ಲಿ ಒಂದೇ ದಿನ 4,187 ಮಂದಿ ಕೊರೊನಾದಿಂದ ಸಾವು; ಮರಣದ ಸಂಖ್ಯೆಯಲ್ಲಿ ದಾಖಲೆ, ಚೇತರಿಕೆ ಪ್ರಮಾಣದಲ್ಲಿ ಕುಸಿತ

Covid 19 Death: ಕಳೆದ 24 ಗಂಟೆಯಲ್ಲಿ ದೇಶದಲ್ಲಿ 4,01,078 ಪ್ರಕರಣ ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 2,18,92,676ಕ್ಕೆ ತಲುಪಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ದೇಶದಲ್ಲಿ ಒಂದೇ ದಿನ 4,187 ಮಂದಿ ಕೊರೊನಾದಿಂದ ಸಾವು; ಮರಣದ ಸಂಖ್ಯೆಯಲ್ಲಿ ದಾಖಲೆ, ಚೇತರಿಕೆ ಪ್ರಮಾಣದಲ್ಲಿ ಕುಸಿತ
ಪ್ರಾತಿನಿಧಿಕ ಚಿತ್ರ
Follow us
Lakshmi Hegde
|

Updated on:May 08, 2021 | 11:19 AM

ದೆಹಲಿ: ದೇಶದಲ್ಲಿ ದಿನೇದಿನೆ ಕೊವಿಡ್ ಸೋಂಕಿತರ ಸಂಖ್ಯೆ ಏರುತ್ತಿದೆ. ಅದರೊಂದಿಗೆ ಸೋಂಕಿನಿಂದ ಸಾಯುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇದೀಗ ಕಳೆದ 24ಗಂಟೆಯಲ್ಲಿ 4187 ಮಂದಿ ಕೊವಿಡ್​ 19 ಸೋಂಕಿನಿಂದ ಸಾವನ್ನಪ್ಪಿದ್ದು, ಒಂದು ಹೊಸ ದಾಖಲೆಯೇ ಆಗಿದೆ. ಜೂನ್​ ಮೊದಲವಾರದಲ್ಲಿ ಕೊರೊನಾದಿಂದ ಒಂದು ದಿನದಲ್ಲಿ ಸಾಯುವವರ ಸಂಖ್ಯೆ 3 ಸಾವಿರಕ್ಕೆ ಏರಬಹುದು ಎಂದು ತಜ್ಞರು ಅಂದಾಜಿಸಿದ್ದರು. ಆದರೆ ಮೇ ಮೊದಲವಾರದ ಕೊನೆಯಲ್ಲೇ ಸಾವಿನ ಸಂಖ್ಯೆ 4 ಸಾವಿರ ದಾಟಿರುವುದು ಆತಂಕ ಮೂಡಿಸಿದೆ. ಹಾಗೇ ದೇಶದಲ್ಲಿ ಕೊರೊನಾದಿಂದ ಪ್ರಾಣ ಕಳೆದುಕೊಂಡವರ ಒಟ್ಟು ಸಂಖ್ಯೆ 2,38,270ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಕೊವಿಡ್​ 19 ನಿಂದ ಸಾಯುವವರ ಪ್ರಮಾಣ ಶೇ. 1.09ರಷ್ಟಿದೆ.

ಕಳೆದ 24 ಗಂಟೆಯಲ್ಲಿ ದೇಶದಲ್ಲಿ 4,01,078 ಪ್ರಕರಣ ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 2,18,92,676ಕ್ಕೆ ತಲುಪಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಇನ್ನು ಒಂದೇ ದಿನದಲ್ಲಿ 3,18,609 ಮಂದಿ ಚೇತರಿಸಿಕೊಂಡು ಡಿಸ್​​ಚಾರ್ಜ್ ಆಗಿದ್ದಾರೆ. ಇದುವರೆಗೂ ಕೊರೊನಾದಿಂದ ಚೇತರಿಸಿಕೊಂಡವರು ಒಟ್ಟು 1,79,30,960. ಆದರೆ ಒಂದು ಬ್ಯಾಡ್ ನ್ಯೂಸ್​ ಎಂದರೆ ದೇಶದಲ್ಲಿ ಕೊವಿಡ್​ನಿಂದ ಚೇತರಿಸಿಕೊಳ್ಳುವವರ ಪ್ರಮಾಣ ಶೇ. 81.90ಕ್ಕೆ ಕುಸಿದಿದೆ. ಇದು ಮೊದಲ ಅಲೆಯಲ್ಲಿ ಶೇ.96ರವರೆಗೂ ಏರಿಕೆಯಾಗಿತ್ತು.

ಸದ್ಯ ಭಾರತದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳು 37,23,446 ಇದ್ದು, ಸೋಂಕಿನ ವಿರುದ್ಧ ಹೋರಾಟ ದಿನೇದಿನೇ ಕಷ್ಟವೇ ಆಗುತ್ತಿದೆ. ಒಂದೊಂದೇ ರಾಜ್ಯಗಳು ಲಾಕ್​ಡೌನ್ ಮೊರೆ ಹೋಗುತ್ತಿವೆ. ದೇಶಾದ್ಯಂತ ಆಕ್ಸಿಜನ್​, ಬೆಡ್​, ವೆಂಟಿಲೇಟರ್​, ಲಸಿಕೆ ಅಭಾವ ಬಹುದೊಡ್ಡ ಸವಾಲಾಗಿ ಕಾಡುತ್ತಿದೆ.

ಇದನ್ನೂ ಓದಿ: ಆರೋಗ್ಯ ಸಚಿವರ ತವರು ಜಿಲ್ಲೆಯಲ್ಲೇ ಕೊವಿಡ್ ಆಸ್ಪತ್ರೆಗೆ ಅಳವಡಿಸಿದ್ದ ಜಂಬೋ ಆಕ್ಸಿಜನ್ ಸಿಲಿಂಡರ್‌ಗಳ ಕಳ್ಳತನ

ಎಚ್ಚರಾ! ಭಾರತದಲ್ಲಿ ಆಗಸ್ಟ್​ 1ರೊಳಗೆ ಕೊರೊನಾ ಸೋಂಕಿಗೆ 10 ಲಕ್ಷ ಜನ ಸಾವು -ಇದು ಬ್ರಿಟಿಷ್ ಮೆಡಿಕಲ್ ಜರ್ನಲ್ ವರದಿ

4,187 deaths by covid 19 is new record in India

Published On - 11:18 am, Sat, 8 May 21