AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ 5 ಚೀತಾ ಮರಿಗಳ ಜನನ; ಭಾರತದಲ್ಲಿ ಚೀತಾಗಳ ಒಟ್ಟು ಸಂಖ್ಯೆ 60ಕ್ಕೆ ಏರಿಕೆ

ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಭಾರತದಲ್ಲೇ ಜನ್ಮತಾಳಿದ್ದ ಹೆಣ್ಣು ಚೀತಾವೊಂದು 5 ಮರಿಗಳಿಗೆ ಜನ್ಮ ನೀಡಿದ್ದು, ‘ಪ್ರಾಜೆಕ್ಟ್ ಚೀತಾ’ ಯೋಜನೆಗೆ ಐತಿಹಾಸಿಕ ಮೈಲಿಗಲ್ಲು ಸಿಕ್ಕಂತಾಗಿದೆ. ಈ ಹೊಸ ಮರಿಗಳ ಆಗಮನದೊಂದಿಗೆ ದೇಶದಲ್ಲಿರುವ ಒಟ್ಟು ಚೀತಾಗಳ ಸಂಖ್ಯೆ 60ಕ್ಕೆ ಏರಿಕೆಯಾಗಿದ್ದು, ಇವುಗಳಲ್ಲಿ 41 ಚೀತಾಗಳು ಭಾರತದ ಮಣ್ಣಿನಲ್ಲೇ ಜನ್ಮತಾಳಿವೆ. ಈ ಮರಿಗಳ ತಂದೆಯು ಬೋಟ್ಸ್ವಾನಾದಿಂದ ಭಾರತಕ್ಕೆ ತರಲಾಗಿದ್ದ ಗಂಡು ಚೀತಾವಾಗಿದ್ದು, ಈ ಮೂಲಕ ಭಾರತೀಯ ಚೀತಾ ಸಂತತಿಯಲ್ಲಿ ನೂತನ 'ಬೋಟ್ಸ್ವಾನಾ ವಂಶಾವಳಿ'ಯು ಆರಂಭವಾಗಿದೆ. ಇದು ದೇಶದ ಚೀತಾಗಳಲ್ಲಿ ತಳಿ ವೈವಿಧ್ಯತೆಯನ್ನು ಹೆಚ್ಚಿಸಲು ಅತ್ಯಂತ ಸಹಕಾರಿಯಾಗಲಿದೆ.

ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ 5 ಚೀತಾ ಮರಿಗಳ ಜನನ; ಭಾರತದಲ್ಲಿ ಚೀತಾಗಳ ಒಟ್ಟು ಸಂಖ್ಯೆ 60ಕ್ಕೆ ಏರಿಕೆ
ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ 5 ಚೀತಾ ಮರಿಗಳ ಜನನImage Credit source: TV9
ಸುಷ್ಮಾ ಚಕ್ರೆ
|

Updated on: Oct 05, 2026 | 8:44 PM

Share

ನವದೆಹಲಿ, ಅಕ್ಟೋಬರ್ 5: ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ 5 ಚೀತಾ ಮರಿಗಳು ಜನ್ಮ ತಾಳುವ ಮೂಲಕ ಭಾರತದ ಚೀತಾಗಳ ಸಂತತಿಯು ಮತ್ತಷ್ಟು ವೃದ್ಧಿಯಾಗಿದೆ. ಈ ನೂತನ ಮರಿಗಳ ಆಗಮನದೊಂದಿಗೆ ದೇಶದಲ್ಲಿ ಚೀತಾಗಳ ಒಟ್ಟು ಸಂಖ್ಯೆಯು 60ಕ್ಕೆ ಏರಿಕೆಯಾಗಿದ್ದು, ಇವುಗಳಲ್ಲಿ 41 ಚೀತಾಗಳು ಭಾರತದ ಮಣ್ಣಿನಲ್ಲೇ ಜನ್ಮತಾಳಿವೆ. ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಇಂದು ಈ ಕುರಿತು ಅಧಿಕೃತವಾಗಿ ಪ್ರಕಟಿಸಿದ್ದು, ‘ಪ್ರಾಜೆಕ್ಟ್ ಚೀತಾ’ ಸಂರಕ್ಷಣಾ ಯೋಜನೆಯಲ್ಲಿ ಶ್ರಮಿಸುತ್ತಿರುವ ಪಶುವೈದ್ಯರು, ಅರಣ್ಯಾಧಿಕಾರಿಗಳು, ಸಿಬ್ಬಂದಿ ಹಾಗೂ ನಿರ್ವಹಣಾ ತಂಡದ ಪ್ರಯತ್ನಗಳನ್ನು ಶ್ಲಾಘಿಸಿ ಅಭಿನಂದಿಸಿದ್ದಾರೆ.

5 ಮರಿಗಳಿಗೆ ಜನ್ಮ ನೀಡಿರುವ ‘KJP21’ ಎಂಬ ಹೆಣ್ಣು ಚೀತಾ ಭಾರತದಲ್ಲೇ ಜನ್ಮತಾಳಿದ ಮೂರನೇ ಹೆಣ್ಣು ಚೀತಾವಾಗಿದೆ (ಮುಖಿ ಮತ್ತು KGP12 ನಂತರ). ಭಾರತದಲ್ಲೇ ಹುಟ್ಟಿ ಬೆಳೆದ ಚೀತಾವೊಂದು ಮತ್ತೊಂದು ಪೀಳಿಗೆಗೆ ಜನ್ಮ ನೀಡಿರುವುದು ಯೋಜನೆಯ ಯಶಸ್ಸನ್ನು ಎತ್ತಿಹಿಡಿದಿದೆ. ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆಸಲಾಗುತ್ತಿರುವ ನಿರಂತರ ವೈಜ್ಞಾನಿಕ ನಿರ್ವಹಣೆ, ಸೂಕ್ತ ಕಾವಲು ಮತ್ತು ಅರಣ್ಯ ಸಿಬ್ಬಂದಿಯ ಭಾರಿ ಶ್ರಮದಿಂದಾಗಿ ಭಾರತದಲ್ಲಿ ಚೀತಾಗಳ ಮುಂದಿನ ಪೀಳಿಗೆಯು ಯಶಸ್ವಿಯಾಗಿ ಸ್ಥಾಪನೆಯಾಗುತ್ತಿದೆ.

ಇದನ್ನೂ ಓದಿ: ಪ್ರಾಣಿ ಪ್ರಿಯರಿಗೆ ಗುಡ್​​ನ್ಯೂಸ್​​: ದಕ್ಷಿಣ ಆಫ್ರಿಕಾದ ಚೀತಾಗಳು ಬನ್ನೇರುಘಟ್ಟದಲ್ಲಿ ಜೂನ್ 4ರಿಂದ ವೀಕ್ಷಣೆಗೆ ಲಭ್ಯ

ಈ ಮರಿಗಳ ಜನನವನ್ನು ಭಾರತದ ಚೀತಾ ಸಂತತಿಯ ಬೆಳವಣಿಗೆಯಲ್ಲಿ ಅತ್ಯಂತ ಪ್ರಮುಖ ಮೈಲಿಗಲ್ಲು ಎಂದು ಬಣ್ಣಿಸಲಾಗಿದೆ. ಮರಿಗಳ ತಂದೆಯನ್ನು ಬೋಟ್ಸ್ವಾನಾದಿಂದ ತಂದಿರುವುದರಿಂದ, ಈ ಹೊಸ ಆಗಮನವು ಭಾರತದಲ್ಲಿ ‘ಬೋಟ್ಸ್ವಾನಾ ವಂಶಾವಳಿ’ಯ ಆರಂಭಕ್ಕೆ ನಾಂದಿ ಹಾಡಿದೆ. ಇದು ದೇಶದಲ್ಲಿ ಬೆಳೆಯುತ್ತಿರುವ ಚೀತಾಗಳ ತಳಿ ವೈವಿಧ್ಯತೆಗೆ ನೂತನ ಆನುವಂಶಿಕ ಶಕ್ತಿಯನ್ನು ಸೇರ್ಪಡೆಗೊಳಿಸಿದೆ ಎಂದು ಸರ್ಕಾರ ತಿಳಿಸಿದೆ.

ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ವೈಜ್ಞಾನಿಕ ನಿರ್ವಹಣೆ, ಕಟ್ಟುನಿಟ್ಟಿನ ಕಾವಲು ಹಾಗೂ ಸಂರಕ್ಷಣಾ ಕ್ರಮಗಳ ಮೂಲಕ ‘ಪ್ರಾಜೆಕ್ಟ್ ಚೀತಾ’ ತನ್ನ ಕಾರ್ಯವನ್ನು ಯಶಸ್ವಿಯಾಗಿ ಮುಂದುವರಿಸಿದೆ. ಮಧ್ಯಪ್ರದೇಶ ಮುಖ್ಯಮಂತ್ರಿಗಳ ಕಚೇರಿ ನೀಡಿದ ಮಾಹಿತಿಯ ಪ್ರಕಾರ, ಮುಖಿ ಮತ್ತು KGP12 ನಂತರ ಭಾರತದ ಮಣ್ಣಿನಲ್ಲೇ ಜನ್ಮತಾಳಿದ ಮೂರನೇ ಹೆಣ್ಣು ಚೀತಾ ಎಂಬ ಹೆಗ್ಗಳಿಕೆಗೆ KJP21 ಪಾತ್ರವಾಗಿದೆ. ಈಗ ಈ ಚೀತಾ 5 ಮರಿಗಳಿಗೆ ಜನ್ಮ ನೀಡಿರುವುದು ಭಾರತದಲ್ಲಿ ಚೀತಾಗಳ ಮುಂದಿನ ಪೀಳಿಗೆಯನ್ನು ಗಟ್ಟಿಮಾಡಿದೆ.

ಇದನ್ನೂ ಓದಿ: ಕೂನೋ ರಾಷ್ಟ್ರೀಯ ಉದ್ಯಾನವನದಲ್ಲಿ 4 ಚಿರತೆ ಮರಿಗಳ ಜನನ; ‘ಪ್ರಾಜೆಕ್ಟ್ ಚೀತಾ’ ಯೋಜನೆಯ ಹೊಸ ಮೈಲಿಗಲ್ಲು

ಚೀತಾ ಮರಿಗಳ ಜನನವು ಪ್ರದೇಶದಲ್ಲಿ ಅಪಾರ ಸಂತಸ ತಂದಿದೆ ಎಂದು ಸಿಎಂ ಮೋಹನ್ ಯಾದವ್ ಹೇಳಿದ್ದಾರೆ. 5 ನೂತನ ಮರಿಗಳ ಸೇರ್ಪಡೆಯೊಂದಿಗೆ ಭಾರತದಲ್ಲಿರುವ ಒಟ್ಟು ಚೀತಾಗಳ ಸಂಖ್ಯೆ 60ಕ್ಕೆ ತಲುಪಿದೆ. ಇವುಗಳಲ್ಲಿ 41 ಚೀತಾಗಳು ಭಾರತದಲ್ಲೇ ಜನ್ಮತಾಳಿರುವುದು ಈ ಯೋಜನೆಯ ಯಶಸ್ಸನ್ನು ತೋರಿಸುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More