2 ವರ್ಷಗಳಲ್ಲಿ, 1.2 ಲಕ್ಷ ಹಳ್ಳಿಗಳ 5 ಕೋಟಿ ಕುಟುಂಬಗಳಿಗೆ ನಲ್ಲಿ ನೀರಿನ ಸಂಪರ್ಕ; ಜಲ ಜೀವನ್​ ಮಿಷನ್​ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ

Jal Jeevan Mission: ಹಿಂದಿನ ಕಾಂಗ್ರೆಸ್​ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ ಪ್ರಧಾನಿ ಮೋದಿ, ಅವರಿಗೆಲ್ಲ ತಮ್ಮ ಮನೆಯಲ್ಲಿ ಸಾಕಷ್ಟು ನೀರಿತ್ತು. ಮನೆಯಲ್ಲೇ ಸ್ವಿಮ್ಮಿಂಗ್​ ಪೂಲ್​ ಇದ್ದು, ಅದರಲ್ಲೂ ಹೇರಳವಾಗಿ ನೀರಿತ್ತು ಎಂದು ಹೇಳಿದರು.

2 ವರ್ಷಗಳಲ್ಲಿ, 1.2 ಲಕ್ಷ ಹಳ್ಳಿಗಳ 5 ಕೋಟಿ ಕುಟುಂಬಗಳಿಗೆ ನಲ್ಲಿ ನೀರಿನ ಸಂಪರ್ಕ; ಜಲ ಜೀವನ್​ ಮಿಷನ್​ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ
ಜಲ ಜೀವನ್​ ಮಿಷನ್ ಆ್ಯಪ್​ ಬಿಡುಗಡೆ ಮಾಡಿ ಸಂವಾದ ನಡೆಸಿದ ಪ್ರಧಾನಿ ಮೋದಿ
Follow us
TV9 Web
| Updated By: Lakshmi Hegde

Updated on:Oct 02, 2021 | 4:15 PM

ಪ್ರತಿಯೊಬ್ಬರೂ ಜಲ ಸಂರಕ್ಷಣೆ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಕರೆ ನೀಡಿದ್ದಾರೆ. ಜಲ ಜೀವನ್​ ಮಿಷನ್​ ಆ್ಯಪ್ (Jal Jeevan Mission App) ​ ಬಿಡುಗಡೆ ಮಾಡಿದ ಬಳಿಕ, ಗ್ರಾಮ ಪಂಚಾಯತ್​, ಗ್ರಾಮೀಣ ನೀರು ಮತ್ತು ನೈರ್ಮಲ್ಯಗಳ ಸಮಿತಿಯೊಂದಿಗೆ ಸಂವಾದ ನಡೆಸಿದ ಅವರು, 2019ರಲ್ಲಿ ಜಲ ಜೀವನ್​ ಮಿಷನ್ ಉದ್ಘಾಟನೆಗೊಂಡಾಗಿನಿಂದ ಇದುವರೆಗೆ ಸುಮಾರು 80 ಜಿಲ್ಲೆಗಳ 1.25 ಲಕ್ಷ ಹಳ್ಳಿಗಳ 5 ಕೋಟಿ ಕುಟುಂಬಗಳಿಗೆ ನೀರಿನ ಸಂಪರ್ಕ ಕಲ್ಪಿಸಲಾಗಿದ್ದು, ನಲ್ಲಿ ಮೂಲಕ ನೀರು ಪೂರೈಕೆಯಾಗುತ್ತಿದೆ ಎಂದು ತಿಳಿಸಿದರು.

ಭಾರತದಲ್ಲಿ ನೀರು ಪೂರೈಕೆಗೆ ಸಂಬಂಧಪಟ್ಟರು ಈ ಹಿಂದೆ ಏಳು ದಶಕಗಳಲ್ಲಿ ಮಾಡಿದ್ದಕ್ಕಿಂತ ಹೆಚ್ಚಿನ ಕೆಲಸವನ್ನು ಕಳೆದ ಎರಡು ವರ್ಷಗಳಲ್ಲಿ ಮಾಡಲಾಗಿದೆ ಎಂದು ಹೇಳಿದ ಪ್ರಧಾನಿ, ಜಲ ಜೀವನ್​ ಮಿಷನ್​ ಕೇವಲ ಜನರಿಗೆ ನೀರು ಸರಬರಾಜು ಮಾಡುವ ಯೋಜನೆಯಲ್ಲ, ಇದೊಂದು ಹಳ್ಳಿಗಳ ಜನರು ಮತ್ತು ಮಹಿಳೆಯರಿಂದ ನಡೆಸಲ್ಪಡುವ ವಿಕೇಂದ್ರೀಕರಣ ಚಳವಳಿ ಎಂದು ಹೇಳಿದರು.  ಹಾಗೇ, ಕೊಳವೆ ನೀರಿನ ಸಂಪರ್ಕ 31 ಲಕ್ಷದಿಂದ 1.6 ಕೋಟಿಗೆ ಏರಿಕೆಯಾಗಿದೆ. ಅಗತ್ಯ ಇರುವ ಜಿಲ್ಲೆಗಳಿಗೆ ಇದನ್ನು ಕಲ್ಪಿಸಲಾಗಿದೆ. ದೇಶದ ಯಾವುದೇ ಭಾಗಕ್ಕೆ ಟ್ಯಾಂಕರ್​ ಅಥವಾ ರೈಲುಗಳ ಮೂಲಕ ನೀರು ಸರಬರಾಜು ಮಾಡುವ ಸನ್ನಿವೇಶ ಬಾರದಂತೆ ನೋಡಿಕೊಳ್ಳುವುದು ನಮ್ಮ ಕೇಂದ್ರ ಸರ್ಕಾರದ ಆದ್ಯತೆಯಾಗಿದೆ ಎಂದು ತಿಳಿಸಿದರು.

ಹಿಂದಿನ ಕಾಂಗ್ರೆಸ್​ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ ಪ್ರಧಾನಿ ಮೋದಿ, ಅವರಿಗೆಲ್ಲ ತಮ್ಮ ಮನೆಯಲ್ಲಿ ಸಾಕಷ್ಟು ನೀರಿತ್ತು. ಮನೆಯಲ್ಲೇ ಸ್ವಿಮ್ಮಿಂಗ್​ ಪೂಲ್​ ಇದ್ದು, ಅದರಲ್ಲೂ ಹೇರಳವಾಗಿ ನೀರಿತ್ತು. ಅವರೆಂದೂ ಬಡತನ ನೋಡಿದವರಲ್ಲ. ಬಡತನವೆಂಬುದು ಅವರ ಪಾಲಿಗೆ ಒಂದು ಆಕರ್ಷಣೆಯಾಗಿತ್ತು. ಹಳ್ಳಿಗಳಲ್ಲಿನ ನ್ಯೂನತೆಯನ್ನು ಇಷ್ಟಪಡುತ್ತಿದ್ದರು. ಹಾಗಾಗಿ ಆದರ್ಶ ಗ್ರಾಮ ನಿರ್ಮಾಣಕ್ಕೆ ಎಂದಿಗೂ ಶ್ರಮಿಸಲಿಲ್ಲ ಎಂದು ಹೇಳಿದರು.

ರಾಷ್ಟ್ರೀಯ ಜಲ ಜೀವನ ಕೋಶ್​ ಇಂದು ಜಲ ಜೀವನ್​ ಮೊಬೈಲ್​ ಆ್ಯಪ್​ನೊಂದಿಗೆ ರಾಷ್ಟ್ರೀಯ ಜಲ ಜೀವನ ಕೋಶ್​ನ್ನೂ ಕೂಡ ಪ್ರಧಾನಿ ಮೋದಿ ಬಿಡುಗಡೆ ಮಾಡಿದ್ದಾರೆ. ಇದರಡಿಯಲ್ಲಿ ಭಾರತದ ಪ್ರತಿ ಮನೆ, ಶಾಲೆ, ಅಂಗನವಾಡಿ ಕೇಂದ್ರಗಳು, ಆಶ್ರಮಶಾಲೆಗಳು ಸೇರಿ ಇನ್ನಿತರ ಸರ್ಕಾರಿ ಸಂಸ್ಥೆಗಳಿಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸಲು ಸಾರ್ವಜನಿಕರು ದೇಣಿಗೆ ನೀಡಬಹುದಾಗಿದೆ. ಯಾವುದೇ ವ್ಯಕ್ತಿ, ಸಂಸ್ಥೆಗಳು, ಎನ್​ಜಿಒಗಳು ರಾಷ್ಟ್ರೀಯ ಜಲ ಜೀವನ ಕೋಶ್​ ನಿಧಿಗೆ ದೇಣಿಗೆ ಕೊಡಬಹುದು. ವಿದೇಶದಲ್ಲಿದ್ದವರೂ ನೀಡಬಹುದಾಗಿದೆ.

ಇದನ್ನೂ ಓದಿ:  Narendra Modi Interview: ನನಗೆ ಟೀಕಿಸುವವರೆಂದರೆ ಇಷ್ಟ, ನನ್ನ ದೃಷ್ಟಿಯಲ್ಲಿ ಅಧಿಕಾರವೆಂಬುದು ಜನಸೇವೆಯ ಒಂದು ಮಾರ್ಗ ಮಾತ್ರ; ಪ್ರಧಾನಿ ನರೇಂದ್ರ ಮೋದಿ

Jal Jeevan Mission App: ಜಲ ಜೀವನ ಮಿಷನ್​ ಆ್ಯಪ್​ ಬಿಡುಗಡೆ ಮಾಡಿ, ನೀರು-ನೈರ್ಮಲ್ಯ ಸಮಿತಿ ಜತೆ ಸಂವಾದ ನಡೆಸುತ್ತಿರುವ ಪ್ರಧಾನಿ ಮೋದಿ

Published On - 4:14 pm, Sat, 2 October 21

‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ