Gujarat: ನಿಂತಿದ್ದ ಟ್ರಕ್​ಗೆ ಡಿಕ್ಕಿ ಹೊಡೆದ ಕಾರು; ಐವರು ಸ್ಥಳದಲ್ಲೇ ದುರ್ಮರಣ

| Updated By: Lakshmi Hegde

Updated on: Sep 23, 2021 | 2:12 PM

ಕಾರು ಮಾಲಿಯಾದಿಂದ ಮೋರ್ಬಿಗೆ ಹೋಗುತ್ತಿತ್ತು. ಮೃತರೆಲ್ಲರೂ ಪುರುಷರೇ ಆಗಿದ್ದು, ಮೂಲತಃ ರಾಜಸ್ಥಾನದವರು ಎಂದು ಪೊಲೀಸರು ತಿಳಿಸಿದ್ದಾರೆ.

Gujarat: ನಿಂತಿದ್ದ ಟ್ರಕ್​ಗೆ ಡಿಕ್ಕಿ ಹೊಡೆದ ಕಾರು; ಐವರು ಸ್ಥಳದಲ್ಲೇ ದುರ್ಮರಣ
ಸಾಂಕೇತಿಕ ಚಿತ್ರ
Follow us on

ಗುಜರಾತ್​​ನ ಮೋರ್ಬಿ ಜಿಲ್ಲೆಯಲ್ಲಿ ಕಾರೊಂದು ನಿಂತಿದ್ದ  ಟ್ರಕ್​​ಗೆ ಡಿಕ್ಕಿಯಾಗಿ ಐದು ಮಂದಿ ಮೃತಪಟ್ಟಿದ್ದಾರೆ. ಇಂದು ಮುಂಜಾನೆ ಹೊತ್ತಿಗೆ ದುರ್ಘಟನೆ ನಡೆದಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಇದೊಂದು ಸ್ಟೇಶನರಿ ಸಾಮಗ್ರಿಗಳನ್ನು ಹೊತ್ತ ಟ್ರಕ್​ ಆಗಿದ್ದು, ಮೋರ್ಬಿ-ಮಲಿಯಾ ಹೆದ್ದಾರಿಯಲ್ಲಿ ಟಿಂಬ್ಡಿ ಎಂಬ ಗ್ರಾಮದ ಬಳಿ ರಸ್ತೆ ಬದಿಯಲ್ಲಿ ನಿಂತಿದ್ದು. ಆದರೆ ಕಾರ್​ ಡ್ರವರ್ ಈ ಟ್ರಕ್​ಗೆ ಡಿಕ್ಕಿ ಹೊಡೆದಿದ್ದರಿಂದ ಸಂಪೂರ್ಣ ನಿಯಂತ್ರಣ ಕಳೆದುಕೊಂಡಿದ್ದಾನೆ ಎಂದು ಡಿಎಸ್​ಪಿ ರಾಧಿಕಾ ಭಾರಾಯ್​ ತಿಳಿಸಿದ್ದಾರೆ. 

ಕಾರು ಮಾಲಿಯಾದಿಂದ ಮೋರ್ಬಿಗೆ ಹೋಗುತ್ತಿತ್ತು. ಮೃತರೆಲ್ಲರೂ ಪುರುಷರೇ ಆಗಿದ್ದು, ಆನಂದ್ ಶೇಖಾವತ್​, ತಾರಾಚಂದ್​ ಬಾರಲಾ, ಅಶೋಲ್​ ಬಿಲೆಡಾ, ವಿಜೇಂದ್ರ ಸಿಂಗ್​ ಮತ್ತು ಪವನ್​ ಮಿಸ್ಟ್ರಿ ಎಂದು ಗುರುತಿಸಲಾಗಿದೆ. ಇವರಲ್ಲಿ ಕಾರನ್ನು ಯಾರು ಚಾಲನೆ ಮಾಡುತ್ತಿದ್ದರು ಎಂಬುದು ಗೊತ್ತಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.  ಮೃತರು ಮೋರ್ಬಿಯಲ್ಲಿ ಒಂದು ಉದ್ಯಮ ನಡೆಸುತ್ತಿದ್ದರು. ಆದರೆ ಮೂಲತಃ ರಾಜಸ್ಥಾನದವರಾಗಿದ್ದಾರೆ ಎಂಬ ಮಾಹಿತಿಯೂ ಸಿಕ್ಕಿದೆ. ಈ ಮೋರ್ಬಿ ಜಿಲ್ಲೆ ಅಹಮದಾಬಾದ್​ನಿಂದ 200 ಕಿಮೀ ದೂರದಲ್ಲಿದೆ.  ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಉತ್ತರಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳು ಓಪನ್, ಬಂದ್ ಆಗಿದ್ದ ಜಲಸಾಹಸ ಕ್ರೀಡೆಗಳಿಗೆ ಅನುಮತಿ ಕೊಟ್ಟ ಜಿಲ್ಲಾಡಳಿತ

RSS ಬಗ್ಗೆ ಅವಹೇಳನಕಾರಿ ಹೇಳಿಕೆ: ಜಾವೇದ್​ ಅಖ್ತರ್​ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ 

(5 killed as car rams into truck which is parked in road side at Gujarat)